‘ತಾಳಿ ಕಟ್ಟುವ ಶುಭ ವೇಳೆ’ ಕೈ ಅಡ್ಡ ಹಿಡಿದ ವಧು !!
ಚಿತ್ರದುರ್ಗ : ಅದೆಷ್ಟೋ ಮದುವೆಗಳು ಎಂಗೇಜ್ ಮೆಂಟ್ ಹಂತದಲ್ಲಿ ಅಥವಾ ಎಂಗೇಜ್ ಮೆಂಟ್ ಆದ ಮೇಲೆ ಮುರಿದು ಬೀಳುತ್ತದೆ. ಅಥವಾ ಮದುವೆ ಇನ್ನೇನು 2-3 ದಿನ ಇರುವಾಗ ಮುರಿದು ಬೀಳುತ್ತದೆ. ಆದರೆ ಚಿತ್ರದುರ್ಗದಲ್ಲಿ ಮದುವೆ ಗಂಡು ವಧುವಿಗೆ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ತಾಳಿಗೆ ಕೈ ಅಡ್ಡ ಹಿಡಿದಿದ್ದು, ಮದುವೆ ಮುರಿದು ಬಿದ್ದಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ತಾಳಿ ಕಟ್ಟಿಸಿಕೊಳ್ಳಲು ವಧು ನಿರಾಕರಿಸಿದ್ದಾರೆ. ಮಧುಮಗಳು ತಾಳಿಗೆ ಕೈ ಅಡ್ಡ ಹಿಡಿದು ತಡೆದಿದ್ದು, ಮಧು ಮಗ ಶಾಕ್ ಆಗಿದ್ದಾನೆ.
ಚಿಕ್ಕಬ್ಯಾಲದಕೆರೆ ಗ್ರಾಮದ ಮಂಜುನಾಥ್ ಹಾಗೂ ಚಳ್ಳಕೆರೆ ತಾಲೂಕಿನ ತಿಪ್ಪರೆಡ್ಡಿಹಳ್ಳಿಯ ಐಶ್ವರ್ಯಾ ಜೊತೆ ವಿವಾಹ ಫಿಕ್ಸ್ ಆಗಿತ್ತು. ನಿನ್ನೆ ಗುರುವಾರ ಬೆಳಗ್ಗೆ ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆಯ ಮುಹೂರ್ತ ಫಿಕ್ಸ್ ಆಗಿತ್ತು. ಮದುವೆಗೆ ನೆಂಟರಿಷ್ಟರೂ ಕೂಡ ಬಂದಿದ್ದರು. ಎಲ್ಲಾವು ಅಂದುಕೊಂಡಂತೆ ಆಗಿತ್ತು, ಆದರೆ ತಾಳಿ ಕಟ್ಟುವ ಸಮಯದಲ್ಲಿ ವಧು ತನಗೆ ಮದುವೆ ಬೇಡ ಎಂದಿದ್ದಾಳೆ. ಯುವತಿ ವರ್ತನೆಗೆ ವರ ಕಂಗಾಲಾಗಿದ್ದಾನೆ.
ವರ ಮಂಜುನಾಥ್ ತಾಳಿಕಟ್ಟುವ ವೇಳೆ ಐಶ್ವರ್ಯಾ ನನಗೆ ಮದುವೆ ಇಷ್ಟ ಇಲ್ಲವೆಂದು ಹೇಳಿದ್ದಾಳೆ. ಮದುವೆ ಮುರಿದು ಬಿದ್ದಿದೆ. ಯುವತಿ ನಡೆಗೆ ಯುವಕನ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದುವೆಯಾಗುವ ಯುವಕರು ಬಾಳಸಂಗಾತಿಯನ್ನು ಆಯ್ಕೆ ಮಾಡುವಾಗ ಬಹಳ ಎಚ್ಚರವಹಿಸಬೇಕು. ಇಲ್ಲವಾದಲ್ಲಿ ಇಂತಹ ಅವಘಡ ನಡೆಯುತ್ತದೆ.