ಕಲಬುರಗಿಸುವರ್ಣ ಗಿರಿ ಟೈಮ್ಸ್
ಕಲಬುರ್ಗಿಯಲ್ಲಿ ಯುವ ವಕೀಲನ ಬರ್ಬರ ಹತ್ಯೆ: ಯುವ ವಕೀಲರಲ್ಲಿ ಆತಂಕ.
ಕಲಬುರಗಿ: ರಾಜ್ಯದಲ್ಲಿ ಹಾಡುಹಗಲೇ ವಕೀಲರೊಬ್ಬರನ್ನ ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರ್ಗಿ ನಗರದ ಸಾಯಿ ಮಂದಿರ ಬಳಿಯಿರೋ ಅಪಾರ್ಟ್ಮೆಂಟ್ ಬಳಿ ಸಂಭವಿಸಿದೆ.
ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಈರಣ್ಣಗೌಡ ಪಾಟೀಲ್ (40) ಎಂಬುವವರನ್ನ ಹತ್ಯೆ ಮಾಡಲಾಗಿದ್ದು, ಜಮೀನು ವಿವಾದ ಸಂಬಂಧಿಸಿದಂತೆ ಸಂಬಧಿಕರಿಂದಲೇ ನಡೆದಿದೆ ಎಂದು ಸದ್ಯಕ್ಕೆ ತಿಳಿದು ಬಂದಿರುವ ಮಾಹಿತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಬರಬೇಕಿದೆ.
ಮೃತ ವಕೀಲ ನ್ಯಾಯಾಲಯಕ್ಕೆ ಹೋಗಲು ಅಪಾರ್ಟ್ಮೆಂಟ್ ಕೆಳಗೆ ಬಂದು ಬೈಕಿನ ಮೇಲೆ ಬಂದು ಕೂಳಿತಿದ್ದ ಸಮಯದಲ್ಲಿ ಕಲ್ಲಿನಿಂದ ಜಜ್ಜಿ ಹೊಡೆಯಲಾಗಿದೆ. ಸುದ್ಧಿ ತಿಳಿಯುತ್ತಿದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.