ಸರಕಾರ ಮಾಡಿದ ಆದೇಶ ಉಲ್ಲಂಘಿಸಿ, ಕೇವಲ ಎರಡೇ ವಾರಗಳಲ್ಲಿ ಪಂಚಾಯತ ಅಧಿಕಾರಗಳ ವರ್ಗಾವಣೆ ಮಾಡಿದ ಬೆಳಗಾವಿ ಜಿಪಂ ಸಿ.ಇ.ಓ. ಹರ್ಷಲ್ ಬೋಯರ್ !?
ಬೆಳಗಾವಿ: ಸರಕಾರದ ಆದೇಶವನ್ನು ಕೇವಲ ಎರಡೇ ವಾರದಲ್ಲಿ ಉಲ್ಲಂಘಿಸಿ ಪಂಚಾಯತ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಬೆಳಕೆಗೆ ಬಂದಿದೆ.
ಬೆಳಗಾವಿ ಜಿ.ಪಂ. ಸಿ.ಇ.ಓ ಹರ್ಷಲ್ ಬೊಯರ್ ಇವರು ದಿ. 20/07/2023 ರಂದು ಆದೇಶ ಮಾಡಿ ಜಿಲ್ಲೆಯ ಒಟ್ಟು 6 ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರೇಡ್ -2 ಕಾರ್ಯದರ್ಶಿ ಗಳನ್ನು ನಿಯೋಜನೆ ಮಾಡಿ ಆದೇಶ ಮಾಡಿದ್ದಾರೆ.
ಆದರೆ,ಸರಕಾರದ ಉಪಕಾರ್ಯದರ್ಶಿಗಳಾದ ಉಮಾ ಮಹಾದೇವನ್ ಇವರು ದಿನಾಂಕ 6/07/2023 ರಂದು ಒಂದು ಆದೇಶ ಮಾಡಿ ಪಂಚಾಯತರಾಜ ಇಲಾಖೆಯ ಎಲ್ಲಾ ಹಂತದ ನೌಕರರನ್ನು ನಿಯೋಜನೆ ಮಾಡಲು ಸರಕಾರದ ಅನುಮೋಧನೆ ಕಡ್ಡಾಯ ಎಂದು ಆದೇಶ ಮಾಡಿದ್ದು ಇದೆ.
ಆದರೆ, ಬೆಳಗಾವಿ ಜಿಲ್ಲಾ ಪಂಚಾಯತಿಯ ಸಿ.ಇ.ಓ ಹರ್ಷಲ್ ಬೋಯರ್ ಇವರು ತಮ್ಮದೇ ಇಲಾಖೆಯ ಆದೇಶವನ್ನು ಮುರಿದು ಜಿಲ್ಲೆಯ ಖಾನಾಪೂರದಿಂದ ನಾಲ್ಕು ಹಾಗೂ ಹುಕ್ಕೇರಿಯಿಂದ ಇಬ್ಬರು ಒಟ್ಟು 6 ಜನ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಇದರಿಂದಾಗಿ ಸಿ.ಇ.ಓ ಇವರ ಆದೇಶವು ಜಿಲ್ಲೆಯ ನೌಕರರ ವರ್ಗದಲ್ಲೆ ದಿಗಿಲು ಬಡಿದಂತಾಗಿದೆ. ಕೆಲವರಿಗೆ ವರ್ಗಾವಣೆ ಆದರೂ ಸ್ಥಳವನ್ನು ತೋರಿಸಿಲ್ಲಾ ಮತ್ತು ಜಿಲ್ಲಾಡಳಿತ ಸರಕಾರದ ವಿರೂದ್ದ ಸೆಡ್ಡು ಹೊಡೆದಂತೆ ಮಾಡುತ್ತಿದೆ, ಅಂತಹದರಲ್ಲಿ ಆರು ಜನ ಅಧಿಕಾರಿಗಳ ನಿಯೋಜನೆಯು ಜಿಲ್ಲೆಯ ಅಧಿಕಾರ ವರ್ಗಕ್ಕೆ ದಿಗಿಲು ಬಡಿದಂತಾಗಿದೆ ಎಂಬುದು ಮಾತ್ರ ಸತ್ಯ.
ಈ ಕುರಿತು ಸಾಮಾಜಿಕ ಹೊರಾಟಗಾರ ಸುರೇಂದ್ರ ಉಗಾರೆ ಇವರು, ಇದು ನಿಯೋಜನೆ ಅಂತಾ ಹೇಳುವದಕ್ಕಿಂತ ಜಿಲ್ಲಾ ಮಟ್ಟದಲ್ಲಿ ಚಿಕ್ಕ ಪ್ರಮಾಣದ ವರ್ಗಾವಣೆ ಇದೊಮ್ಮೆ ಯಶಸ್ಸು ಆದರೆ ಮತ್ತೊಂದು ಹಂತದಲ್ಲಿ ಇದಕ್ಕಿಂತ ಹೆಚ್ಚು ಅಧಿಕಾರಿ-ಜನರನ್ನು ನಿಯೋಜನೆ ಹೆಸರಲ್ಲಿ ವರ್ಗಾವಣೆ ಮಾಡುವ ಹೊಸ ತಂತ್ರ ಎಂದು ಹೇಳಿದ್ದಾರೆ.
ಇ ಆದೇಶವನ್ನು ಸರಕಾರ ರದ್ದು ಮಾಡುತ್ತಾ ಅಥವಾ ಹಿಂದೆ ಆದ ವರ್ಗಾವಣೆ ಆದೇಶವನ್ನು ಮತ್ತೊಮ್ಮೆ ರಿಲೀಸ್ ಮಾಡುತ್ತಾ ಎಂಬುದನ್ನು ಕಾದು ನೋಡಬೇಕು ಅಷ್ಟೇ.