”ಈಗ ‘ದಿಗ್ವಿಜಯ’ ವಾಹಿನಿ ಅರ್ನಾಬ್ ಗೋಸ್ವಾಮಿ ಪಾಲು: ಇನ್ಮುಂದೆ ‘ರಿಪಬ್ಲಿಕ್ ಕನ್ನಡ’ ವಾಹಿನಿ ಯಲ್ಲಿ.
ಬೆಂಗಳೂರು: ಕನ್ನಡ ನಾಡಿನ ಪ್ರಸಿದ್ಧ ಉದ್ಯಮಿ ವಿಆರ್ ಎಲ್ ಮೂಲಕ ಚಿರಪರಿಚಿತರಾಗಿರುವ ಡಾ.ವಿಜಯ್ ಸಂಕೇಶ್ವರ ನೇತೃತ್ವದ ಹೆಸರಾಂತ ‘ದಿಗ್ವಿಜಯ’ ಸುದ್ದಿ ವಾಹಿನಿ ಈಗ ಅರ್ನಾಬ್ ಗೋಸ್ವಾಮಿ ಪಾಲಾಗಿದೆ. ಇನ್ನು ಮುಂದೆ ಈ ವಾಹಿನಿ ‘ದಿಗ್ವಿಜಯ’ ಹೆಸರಿನಲ್ಲಿ ಕಾಣಿಸಿಕೊಳ್ಳದೆ ‘ರಿಪಬ್ಲಿಕ್ ‘ಕನ್ನಡ’ ವಾಹಿನಿ ಹೆಸರಲ್ಲಿ ಕಾಣಿಸಿಕೊಳ್ಳಲಿದೆ.
ಡಾ.ವಿಜಯಸಂಕೇಶ್ವರ ಅವರು ಅತ್ಯಂತ ಮಹತ್ವಾಕಾಂಕ್ಷೆಯಿಂದ 2017ರಲ್ಲಿ ದಿಗ್ವಿಜಯ ಟಿವಿ ಚಾನಲ್ ಅನ್ನು ಆರಂಭಿಸಿದರು. ಇದು ಈಗ ಹಲವು ವೈಶಿಷ್ಟ್ಯಗಳ ಮೂಲಕ ಕನ್ನಡದ ಚಾನೆಲ್‌ಗಳ ಪೈಕಿ ಮುಂಚೂಣಿಯಲ್ಲಿ ಸ್ಥಾನ ಪಡೆದು ಕೊಂಡಿದೆ. ಇನ್ನು ಮುಂದೆ ಇದು ರಾಷ್ಟ್ರ ಮಟ್ಟದಲ್ಲಿ ಸತತ ಐದು ವರ್ಷಗಳಿಂದ ಅಗ್ರ ಸ್ಥಾನದಲ್ಲಿರುವ ರಿಪಬ್ಲಿಕ್ ಚಾನೆಲ್ ನೊಂದಿಗೆ ವಿಲೀನಗೊಳ್ಳಲಿದ್ದು ಕೆಲವು ತಿಂಗಳುಗಳ ಕಾಲ ‘ದಿಗ್ವಿಜಯ’ ಹೆಸರಿನಲ್ಲಿ ಸುದ್ದಿ ವಾಹಿನಿ ಪ್ರಸಾರವಾಗಲಿದ್ದು ಸದ್ಯಕ್ಕೆ ಕೆಲ ತಾಂತ್ರಿಕ ಸಮಸ್ಯೆಗಳು ಇರುವುದ ರಿಂದ ಹೆಸರನ್ನು ಬದಲಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ನಂತರ ರಿಪಬ್ಲಿಕ್ ಕನ್ನಡ ಹೆಸರಿನಲ್ಲಿ ಗುರುತಿಸಿಕೊಳ್ಳುವುದು ಬಹುತೇಕ ನಿಶ್ಚಿತ ಎಂದು ಮೂಲಗಳು ತಿಳಿಸಿವೆ.
ಅರ್ನಾಬ್ ಗೋಸ್ವಾಮಿ ಎಂಬ ಇಂಡಿಯಾ ವಾಂಟ್ಸ್ ಟು ನೋ ಕಾರ್ಯಕ್ರಮದ ಮೂಲಕ ಅಪಾರ ಜನಪ್ರಿಯತೆ ಪಡೆದು ಕೊಂಡವರು. ಅವರಗಡಸು ಧ್ವನಿ ಕೇಳುವರಿಗೆ ಅತ್ಯಂತ ಚಿರಪರಿಚಿತವಾಗಿದೆ. 2017 ರಲ್ಲಿ ರಿಪಬ್ಲಿಕ್ ಟಿವಿ ಆರಂಭಿಸಿ ಸಂಚಲನ ಮೂಡಿಸಿದ್ದಾರೆ. ಇದು ಆರಂಭಗೊಂಡದಿಂದಲೇ ಟಿಆರ್‌ಪಿ ಯಲ್ಲಿ ಮೊದಲ ಸ್ಥಾನ ಕಾಯ್ದು ಕೊಂಡಿದೆ. ಇಂಗ್ಲಿಷ್, ಹಿಂದಿ, ಬಂಗಾಳಿ ಭಾಷೆಗಳಲ್ಲಿ ರಿಪಬ್ಲಿಕ್ ವಾಹಿನಿ ಕಾರ್ಯನಿರ್ವ ಹಿಸುತ್ತಿದೆ. ದಿಗ್ವಿಜಯ ವಾಹಿನಿಯ ಮಾಲೀಕತ್ವ ಹಸ್ತಾಂತರ ಪ್ರಕ್ರಿಯೆ ನಡೆದಿದೆ.