ರಾಯಬಾಗ ಪಟ್ಟಣ ಪಂಚಾಯತಿಯ ಅಕ್ರಮ : ಜಿಲ್ಲಾ ತಂಡ ಪರಿಶೀಲನೆ.
ಬೆಳಗಾವಿ: ಜಿಲ್ಲೆಯ ರಾಯಬಾಗ ಪಟ್ಟಣ ಪಂಚಾಯತಿಯಲ್ಲಿ ನಡೆದ ಗೋಲಮಾಲ ಕುರಿತು ಜಿಲ್ಲಾ ಮಟ್ಟದ ತಂಡ ಇಂದು ಪಟ್ಟಣ ಪಂಚಾಯತಿಗೆ ಭೆಟ್ಟಿ ನೀಡಿ ಪರಿಶೀಲನೆ ಮಾಡಿದೆ.
ತಂಡದಲ್ಲಿ ಜಿಲ್ಲಾ ನಗಾರಭಿವೃದ್ಧಿ ಕೋಶದ ಮುಖ್ಯ ಅಭಿಯಂತರ ತಡಸಲೂರ್ ಹಾಗೂ ಗೋಕಾಕ ನಗರಸಭೆಯ ಸಗರೇಕರ ಇವರು ಪಟ್ಟಣ ಪಂಚಾಯತಿಗೆ ಭೆಟ್ಟಿ ನೀಡಿ ಅಕ್ರಮದ ಕುರಿತು ಪರಿಶೀಲನೆ ಮಾಡಿದ್ದಾರೆ.
ಈ ಅಕ್ರಮದ ಕುರಿತು ಸಾಮಾಜಿಕ ಹೊರಾಟಗಾರ ಮತ್ತು ವಕೀಲ ಸುರೇಂದ್ರ ಉಗಾರೆ ಇವರು ದಿ. 25/07/2023 ರಂದು ಜಿಲ್ಲಾಡಳಿತದ ಮೂಲಕ ಪೌರಾಡಳಿತ ನಿರ್ದೇಶನಾಲಯಕ್ಕೆ ದಾಖಲೆ ಸಮೇತ ಮುಖ್ಯಾಧಿಕಾರಿ ಸಂಜೀವ ಮಾಂಗ, ಕಿರಿಯ ಸಹಾಯಕ ಅಭಿಯಂತರ ಸಿದ್ರಾಮ ಚೌಗಲಾ, ಗುತ್ತಿಗೆದಾರ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಭಿಯಂತರರ ಇವರ ಮೇಲೆ ಕ್ರಮ ತಗೆದುಕೊಳ್ಳಲು ಮನವಿ ಮಾಡಿದ್ದರು. ನಂತರ ಜಿಲ್ಲಾಧಿಕಾರಿಗಳಾದ ನಿತೀಶ ಪಾಟೀಲ್ ಹಾಗೂ ಯೋಜನಾ ನಿರ್ದೇಶಕರಾದ ಕಲಾದಗಿ ಇವರು ಕೂಡಿ ಜಿಲ್ಲಾ ಮಟ್ಟದ ತಂಡ ರಚನೆ ಮಾಡಿದ್ದರು ತನಿಖಾ ವರದಿಯನ್ನು ಕೊಡಲು ಆದೇಶ ಮಾಡಿದ್ದರು.