ಅಕ್ರಮ ಅರೋಪಕ್ಕೆ ನಗರಸಭೆ ಪೌರಾಯುಕ್ತರನ್ನೇ ಬಿಡುಗಡೆಗೊಳಿಸಿದ ಡಿ ಸಿ ಮೆಡಮ್ !
ಯಾದಗಿರಿ: ಯಾದಗಿರಿ ನಗರಸಬೆಯಲ್ಲಿ ಅಕ್ರಮ ಆರೋಪ ಎದುರಿಸುತ್ತಿರುವ ಪೌರಾಯುಕ್ತ ಸಂಗಪ್ಪ ಉಪಾಸೆ ಇವರನ್ನು ಪೌರಾಯುಕ್ತ ಹುದ್ದೆಯಿಂದ ಬಿಡುಗೊಳಿಸಲು ಯಾದಗಿರಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.
ಪೌರಾಯುಕ್ತ ಸಂಗಪ್ಪ ಉಪಾಸೆ ಇವರ ಮೇಲೆ ವ್ಯವಸಾಯ ಜಮೀನಿನಲ್ಲಿ ಖೊಟ್ಟಿ ಖಾತಾ ಸೃಷ್ಟಿಸಿ ಪಹಣಿಗಳನ್ನು ಹಂಚಿದ್ದರು ಹಾಗೂ ಸಾರ್ವಜನಿಕರೊಂದಿಗೆ ಸರಿಯಾಗಿ ಸೌಜನ್ಯದ ವರ್ತನೆ ಇರದೇ ಇರುವ ಆರೋಪವನ್ನು ಹೊರಿಸಲಾಗಿತ್ತು. ಈ ಕುರಿತು ಜಿಲ್ಲಾಧಿಕಾರಿಗಳಾದ ಬಿ ಸುಶೀಲಾ ಮೆಡಮ್ ಇವರು ನಗರಾಭಿವೃದ್ಧಿ ಯೋಜನಾ ನಿರ್ದೇಶಕರ ಮುಂದಾಳತ್ವದಲ್ಲಿ ಹಾಗೂ ಯಾದಗಿರಿ ಉಪ- ವಿಭಾಗಾಧಿಕಾರಿಗಳ ಮುಂದಾಳತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ಹಾಗೂ ಇವರನ್ನು ಬಿಡುಗಡೆಗೊಳಿಸುವದು ಸೂಕ್ತ ಎಂದು ನಿರ್ದರಿಸಿ ಜಿಲ್ಲಾಧಿಕಾರಿಗಳು ಪೌರಾಯುಕ್ತರನ್ನು ಬಿಡುಗಡೆಯ ಮಾಡಲು ಆದೇಶ ಮಾಡಿದ್ದಾರೆ.
ಅದೇ ರೀತಿ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣ ಪಂಚಾಯತಿಯಲ್ಲಿ ಕರ ವಸೂಲಿಗಾರ ಹಾಗೂ ಹೊರಗುತ್ತಿಗೆ ಲೋಡರ ಸಿಬ್ಬಂಧಿಗಳು ಕೂಡಿ ಅಕ್ರಮ ಖಾತಾ ಸೃಷ್ಟಿಸಿ, ಪಹಣಿ ಪತ್ರಗಳನ್ನು ಹಂಚಿಕೆ ಮಾಡಿದ ಕುರಿತು ಸುವರ್ಣ ಗಿರಿ ಟೈಮ್ಸ್ ಸುದ್ಧಿಯನ್ನು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.