ಬೆಳಗಾವಿ: NEP ಯನ್ನು ರದ್ದು ಮಾಡುವ ರಾಜ್ಯ ಸರ್ಕಾರದ ವಿರುದ್ಧ ಎಬಿವಿಪಿ ಪ್ರತಿಭಟನೆ.
ಬೆಳಗಾವಿ: ಸ್ವತಂತ್ರ ಭಾರತದ ಶಿಕ್ಷಣ ಪದ್ಧತಿಯ ಆರಂಭದಿಂದಲೂ ಬ್ರಿಟಿಷ್ ವಸಾಹತುಶಾಹಿ ಶಿಕ್ಷಣ ಪದ್ದತಿಯ ಮುಂದುವರಿದ ಭಾಗವಾಗಿದೆ, ಇದು ಹೆಚ್ಚು ಹಿಂದ ರಹಿತವಾಗಿ ಕಾಲ ಭಾಗವಾಗಿದೆ, ಅದು ಜಡ್ಡು ಹಿಡಿದು ಪರಿವರ್ತನ ರಹಿತವಾಗಿ ಕಾಲ ಧಾಹ್ಯವಾಗಿದೆ, ಭಾರತೀಯತೆಯ ಅಂಶವನ್ನು ಕಳೆದುಕೊಂಡು ಬ್ರಿಟಷ್ ಗುಲಾಮಗಿರಿಯ ಪಳೆಯುಳಕೆಯಾಗಿದೆ, ಎಂದು ಮುಂತಾದ ಟೀಕೆಗಳನ್ನು ಎದುರಿಸುತ್ತಲೇ ಬಂದಿದೆ.
ಆದರೆ ಪ್ರಸ್ತುತ ಕೇಂದ್ರ ಸರ್ಕಾರವು ಈ ಕುರಿತು ಕಳೆದ ಗಂಭೀರವಾದ ನಿಲುವಿನಿಂದ ಹಾಗೂ ದೃಢ ನಿರ್ಧಾರದಿಂದ ಈ ಎಲ್ಲಾ ಟೀಕೆಗಳಿಗೆ ಉತ್ತರವಾದ ಹಾಗೂ ಈ ಕೊರತೆಗಳಿಂದ ಮುಕ್ತವಾಗಿರುವಂತಹ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP 2020) ರೂಪಿಸಿದ್ದು ಪ್ರಶಂಸಾರ್ಹವಾಗಿದೆ, ಅಲ್ಲದೆ, ಇಡೀ ದೇಶದಲ್ಲಿ ನಮ್ಮ ಕರ್ನಾಟಕವು, ಅದನ್ನು ಮೊದಲ ಬಾರಿಗೆ 2020-2021 ರಲ್ಲಿ ಜಾರಿಗೊಳಸಿದ ರಾಜ್ಯವಾಗಿದೆ, ಎಂಬ ಹೆಮ್ಮೆಗೂ ಪಾತ್ರವಾಗಿದೆ.
ಇಂತಹ ಶಿಕ್ಷಣ ನೀತಿಯನ್ನು ಅದು ಜಾರಿಗೊಳ್ಳುತ್ತಿರುವ ಹಂತದಲ್ಲಿಯೇ ರದ್ದುಗೊಳಿಸಲು ಹೊರಟಿರುವ ಪ್ರಸಕ್ತ ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರ ಶಿಕ್ಷಣ ವಿರೋಧಿಯಾದದು, ಪ್ರರ್ವಾಗ್ರಹ ಪೀಡಿತವಾದುದು, ರಾಜಕೀಯ ಪ್ರೇರಿತವಾದುದು, ರಾಜ್ಯದ ವಿದ್ಯಾರ್ಥಿಗಳ ಹಿತಕ್ಕೆ ಮಾದಕವಾದದು ತಾರ್ಕಿಕವಾಗಿರದೆ ವಿವೇಚನಾರಹಿತವಾದುದು, ಆದ್ದರಿಂದಲೆ ಖಂಡನೀಯ ಎಂದು ಹೇಳಿ ಮನವಿಯನ್ನು ಸಲ್ಲಿಸಿದರು.
ಸಚಿವ ಹೀರೆಮಠ, ಪ್ರಶಾಂತ ಶೆಲ್ಲಿಕೇರಿ, ರೋಹಿತ ಉಮನಾಬಾದಿಮಠ, ಪ್ರಜ್ವಲ್ ಗುರುಬಸನ್ಯವರ, ದೇವೆಂದ್ರ ಸಮ್ಮನ್ಯವರ, ಸುಹಾಸ ಹುದ್ದಾರ, ಇನ್ನು ಹೆಚ್ಚು ವಿದ್ಯಾರ್ಥಿಗಳು ಹಾಜರು ಇದ್ದರು.