”ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು: ಸಾಹಿತಿ ಮಾರ್ತಾಂಡಪ್ಪ ಕತ್ತಿ.
ಧಾರವಾಡ: ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು. ಯೋಗ ದಿಂದ ಶರೀರ ಚೈತನ್ಯಗೊಳ್ಳುತ್ತದೆ. ಮನಸ್ಸು ಪ್ರಶಾಂತ ಗೊಳ್ಳುವುದರ ಜತೆಗೆ ಯೋಗವು ಧನಾತ್ಮಕ ಭಾವನೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇಂದಿನ ದಿನಮಾನ ಗಳಲ್ಲಿ ನಮ್ಮ ಒತ್ತಡದ ಜೀವನ ವನ್ನು ಆನಂದಮಯ ವಾಗಿಟ್ಟು ಕೊಂಡು ಸರಳವಾದ ಸುಂದರ ಜೀವನಕ್ಕೆ ಯೋಗ ಮುಖ್ಯ ಎಂದು ಸಾಹಿತಿ ಮಾರ್ತಾಂಡ ಪ್ಪ ಕತ್ತಿ ಹೇಳಿದರು.
ಅವರು ಕರ್ನಾಟಕ ವಿಶ್ವವಿದ್ಯಾಲ ಯದ ಯೋಗ ಅಧ್ಯಯನ ವಿಭಾಗ ಮತ್ತು ಸಾಂಸ್ಕೃತಿಕ ಲೋಕ ಆರ್ಟ್ ಆ್ಯಂಡ ಕಲ್ಚರಲ್ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ಲೋಕದ ಡ್ಯಾನ್ಸ್ ಕ್ಲಾಸನಲ್ಲಿ ಹಮ್ಮಿಕೊಂಡ 7 ದಿನಗಳ ಉಚಿತ ಯೋಗ ಶಿಬಿರದ ಉದ್ಘಾಟನೆ ಮಾಡಿ ಮಾತನಾ ಡುತ್ತಾ ಯೋಗ-ಉಪನಿಷತ್ತುಗಳು ತಿಳಿಸುವಂತೆ ಪ್ರತಿ ವ್ಯಕ್ತಿಯ ವ್ಯಕ್ತಿತ್ವವು ಐದು ಸ್ತರದಲ್ಲಿದೆ. ಅವು ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಹಾಗೂ ಆನಂದಮಯ ಎಂದು. ಅವುಗಳನ್ನೇ ಶಾರೀರಿಕ, ಮಾನಸಿಕ, ಬೌದ್ಧ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ, ನೈತಿಕ, ವ್ಯಕ್ತಿತ್ವ ಎಂದಿರುವರು ಪ್ರತಿಯೊಬ್ಬರ ಬದುಕಿನ ಉದ್ದೇಶ ಆನಂದ ಪ್ರಾಪ್ತಿಯೇ ಆಗಿದೆ ಹಾಗಾಗಿ ಯೋಗವ ನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಲು ತಮ್ಮಲ್ಲಿ ವಿನಂತಿ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾಂಸ್ಕೃತಿಕ ಲೋಕದ ಸಂಸ್ಥಾಪಕ ರಾದ ಸೈಯದ ಎ.ಎಮ್ ಮಾತನಾಡಿ ಜೀವನವೇ ಒಂದು ಯೋಗ ಹಾಗಾಗಿ ಉತ್ತೇಜ ನಯುಳ್ಳ ಜೀವನ ನಡೆಸ ಬೇಕಾದರೆ ಶಾರೀರಿಕ ಸದೃಡತೆ ಬೇಕು ಅದಕ್ಕೆ ಯೋಗ ಬೇಕು. ಅದರಂತೆ ಮಾನಸಿಕ ನೆಮ್ಮದಿಯನ್ನು ಕಂಡು ಕೊಳ್ಳಲು ಸಹಾಯಕ ವಾಗುತ್ತದೆ ಎಂದು ಹೇಳಿದರು.
ಪತ್ರಕರ್ತರು, ಸಮಾಜಸೇವಕರಾದ ಬಸವರಾಜ ಆನೆ ಗುಂದಿ , ಸಂಪನ್ಮೂಲ ವ್ಯಕ್ತಿ ಗೋರೆಸಾಬ ನದಾಫ ವೇದಿಕೆಯಲ್ಲಿ ಮಾತನಾಡಿದರು.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ, ಕಿರಣ ರಾಯಬಾಗಿ, ಸಂದೀಪ ಸಾದುರೆ, ನಿಂಗಪ್ಪ ಇಮ್ಮನ್ನವರ, ನಾಗೇಶ ಪಾಟೀಲ,ಪವಿತ್ರಾ ದಳವಾಯಿ ಯೋಗದ ಆಯಾಮ ಗಳನ್ನು ಕಲಿಸಿದರು.