”ಯಾರಿಗೆ ಎಷ್ಟು ಲಂಚ? ಆನ್ ಲೈನ್ ನಲ್ಲಿ ರೇಟ್ ಕಾರ್ಡ್ ಬಹಿರಂಗ: ಪೊಲೀಸ್ ಸಿಬ್ಬಂದಿ ಅಮಾನತು.
ಹೊಸದಿಲ್ಲಿ: ಯಾರಿಗೆ ಎಷ್ಟು ಲಂಚ ಎಂಬ ವಿವರವುಳ್ಳ ಪೊಲೀಸ್ ಠಾಣೆಯ ರೇಟ್ ಕಾರ್ಡ್ ಒಂದು ಆನ್ ಲೈನ್‌ನಲ್ಲಿ ಕಾಣಿಸಿಕೊಂಡಿ ದ್ದು ಭ್ರಷ್ಟಾಚಾರದ ಬಹಿರಂಗ ಪ್ರದರ್ಶನಕ್ಕೆ ಪೊಲೀಸ್ ಠಾಣೆಯ ಉಸ್ತುವಾರಿಯನ್ನು ಅಮಾನತು ಗೊಳಿಸಲಾಗಿದೆ.
ಗ್ರೇಟರ್ ನೋಯ್ಡಾದ ಜೇವರ್ ಪೊಲೀಸ್ ಠಾಣೆಗೆ ಸಂಬಂಧಿಸಿ ದ ನೀಮ್ಮಾ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಲಂಚ ನೀಡುವ ರೇಟ್ ಕಾರ್ಡ್‌ನ ಚಿತ್ರ ಆನ್ ಲೈನ್ ನಲ್ಲಿ ಕಾಣಿಸಿಕೊಂಡಿತ್ತು. ಯಾವ್ಯಾವ ಪೊಲೀಸ್ ಅಧಿಕಾರಿ ಗಳಿಗೆ ಎಷ್ಟು ಲಂಚನೀಡ ಬೇಕೆಂಬ ವಿವರ ಈ ರೇಟ್ ಕಾರ್ಡ್ ನಲ್ಲಿ ಇದೆ.
ಇದೇ ವೇಳೆ ‘ಯುವ ರಾಜಕಾರಣಿ’ ಮತ್ತು ಮಾಧ್ಯಮ ದವರಿಗೆ ನೀಡುತ್ತಿರುವ ಲಂಚದ ವಿರಗಳನ್ನು ಸಹ ಇದರಲ್ಲಿ ನಮೂದಿಸ ಲಾಗಿದೆ. ಈ ರೇಟ್ ಕಾರ್ಡ್ ಆನ್ ಲೈನ್ ನಲ್ಲಿ ಇಣುಕು ಹಾಕುತ್ತಿದ್ದಂತೆ ಮುಜುಗರಕ್ಕೀಡಾದ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡು ತನಿಖೆ ಆರಂಭಿಸಿದ್ದಾರೆ.
ರೇಟ್ ಕಾರ್ಡ್ ಗೆ ಸಂಬಂಧಿಸಿದಂತೆ ನೀಮ್ಮಾ ಠಾಣೆಯ ಉಸ್ತು ವಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಗೌತಮ್ ಬುದ್ಧ ನಗರ ಪೊಲೀಸ್ ಕಮಿಷನರ್ ಲಕ್ಷ್ಮಿಸಿಂಗ್ ತಿಳಿಸಿದ್ದಾರೆ.