ಬೆಳಗಾವಿಸುವರ್ಣ ಗಿರಿ ಟೈಮ್ಸ್
ಬಟವಡೆ ಫಾಲ್ಸ್ ಬಳಿಅರಣ್ಯ ಪ್ರದೇಶದಲ್ಲಿ ಮೋಜು: ನಾಲ್ವರು ಸಿಬ್ಬಂದಿಗಳ ವಿರುದ್ಧ ದೂರು ದಾಖಲಿಸಲು ಡಿಸಿ ಆದೇಶ.
ಬೆಳಗಾವಿ: ನಿರ್ಬಂಧನೆಯನ್ನು ಉಲ್ಲಂಘಿಸಿ ಬಟವಡೆ ಫಾಲ್ಸ್ ಬಳಿ ಅರಣ್ಯ ಪ್ರದೇಶದಲ್ಲಿ ಮೋಜು-ಮಸ್ತಿ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ಜನರ ವಿರುದ್ಧ ದೂರು ದಾಖಲಿಸಲಾಗಿದ್ದು, ಇನ್ನುಳಿದ ನಾಲ್ವರ ವಿರುದ್ಧವೂ ದೂರು ದಾಖಲಿಸುವಂತೆ ಬೆಳಗಾವಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ನಿರ್ಬಂಧವಿದ್ದರೂ ಬಟವಡೆ ಫಾಲ್ಸ್ ಬಳಿ ಅರಣ್ಯ ಪ್ರದೇಶದಲ್ಲಿ ಅಧಿಕಾರಿ, ವೈದ್ಯರ ತಂಡವೇ ಎಣ್ಣೆ ಪಾರ್ಟಿ ಮಾಡಿ ಮೋಜು ಮಸ್ತಿಯಲ್ಲಿ ತೊಡಗಿರುವ ಪ್ರಕರನಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರ ವಿರುದ್ಧ ಜಾಂಬೋಟಿ ಅರಣ್ಯ ವಲಯದಲ್ಲಿ ಕೇಸ್ ದಾಖಲಾಗಿದೆ.
ಉಳಿದ ನಾಲ್ವರು ಹೆಸ್ಕಾಂ ಸಿಬ್ಬಂದಿ ವಿರುದ್ಧವೂ ದೂರು ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿರ್ದೇಶನವನ್ನು ನೀಡಿದ್ದಾರೆ.