ಬೆಳಗಾವಿ: ಸೋರುತಿರುವ ಜಿಲ್ಲಾಧಿಕಾರಿಗಳ ಸಭಾಂಗಣದ ಮೇಲ್ಛಾವಣಿ.
ಬೆಳಗಾವಿ: ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ಬೆಳಗಾವಿ ಜಿಲ್ಲಾ ಅಧಿಕಾರಿಗಳ ಕಚೇರಿಯಲ್ಲಿ ಇರುವ ಸಭಾಂಗಣವು ಶಿಥಿಲಾವಸ್ಥೆಗೆ ತಲುಪಿದೆ. ಕಳೆದ ಒಂದು ವಾರದಿಂದ ಸುರಿತಾ ಇರುವ ಮಳೆಗೆ ಸಭಾಂಗಣದ ಮೇಲ್ಛಾಣಿಯಿಂದ ಮಳೆ ನೀರು ಸೋರುತ್ತಿದೆ. ಸಭಾಂಗಣದ ಆಸನ ಹಾಗೂ ಟೆಬಲ್ ಮೇಲೆ ನೀರು ನಿಂತು ಪುಟ್ಟ ಕೆರೆಯಂತಾಗಿದೆ.
ಶಿಥಿಲಗೊಂಡಿರುವ ಹಾಗೂ ಹಾನಿಗೊಳಗಾದ ಅಂತಹ ಕಟ್ಟಡಗಳನ್ನು ಪ್ರತಿವರ್ಷ ನಿರ್ವಹಣೆಗಾಗಿ ಲಕ್ಷ -ಲಕ್ಷ ರೂ ಖರ್ಚು ಮಾಡಿ ರಿಪೇರಿ ಮಾಡಿದರು ಕೂಡ ಕಟ್ಟಡಗಳು ಹಾಗೂ ಮೇಲ್ಛಾವಣಿ ಸೋರಿಕೆಯಾಗುತ್ತದೆ.
ಜಿಲ್ಲಾ ಅಧಿಕಾರಿಗಳ ಕಚೇರಿಯು ಪ್ರತಿ ವರ್ಷ ವಾರ್ಷಿಕ ನಿರ್ವಾಹಣೆ ಮತ್ತು ನವೀಕರಣ ಅಧಿಕಾರಿಗಳ ಲೋಪ -ದೋಷ & ಕಳಪೆ ಆಗಿರುವದರಿಂದ ಸೋರಲು ಕಾರಣ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಅಧ್ಯಕ್ಷರು ಅಖಿಲ ಭಾರತೀಯ ಭ್ರಷ್ಟಾಚಾರ ನಿರ್ಮೂಲನಾ ದಿಲ್ಲಿ ಶಾಖೆ ಕರ್ನಾಟಕ, ಅಪ್ಪಾಸಾಹೇಬ ಎಸ್ ಕುರಣೆ ರವರು ಪ್ರತಿಕ್ರಿಯಿಸಿದರು.
ಕಚೇರಿಯ ಕಾಮಗಾರಿಯ ಎರಡರಿಂದ ಮೂರು ಬಾರಿ ಹಂಚು, ಪತ್ರಾಸ ಹಾಕಿ ರಿಪೇರಿ ಮಾಡಿದರೂ ಮಳೆ ನೀರು ಸಭಾಂಗಣದಲ್ಲಿ ಬರುತ್ತಲ್ಲೇ ಇದೆ.ಇ ವಿಷಯ ಕುರಿತು ರಿಪೇರಿಗಾಗಿ PWD ಅಧಿಕಾರಿಗಳು ನಾಲ್ಕು ದಿನಗಳ ಹಿಂದೆ ತಿಳಿಸಲಾಗಿದೆ ಎಂದು ಕಾರ್ಯಾಲಯದ ಶಿರೆಸ್ತಾದರ ಪವಿತ್ರ ಕಿರಣ್ ಪ್ರತಿಕ್ರಿಯಿಸಿದರು.