ರಾಯಬಾಗ ಪಟ್ಟಣ ಪಂಚಾಯತಿಗೆ ಮುಖ್ಯಾಧಿಕಾರಿಗಳು ಬರಲು ಹಿಂದೇಟು ?
ಬೆಳಗಾವಿ: ರಾಜ್ಯದಲ್ಲಿ ಅತೀ ಹಿಂದುಳಿದ ತಾಲೂಕು ಎಂದು ಖ್ಯಾತಿಯನ್ನು ಪಡೆದ ರಾಯಬಾಗದ ಪಟ್ಟಣ ಪಂಚಾಯತಿಗೆ ಮುಖ್ಯಾಧಿಕಾರಿಗಳಾಗಿ ಬರಲು ಹಿಂದೇಟು ಹಾಕುತ್ತಿದ್ದಾರೆ.
ರಾಜ್ಯ ಸರಕಾರ ಮೊನ್ನೆ ಮೊನ್ನೆ ಬಸವಾರಜ್ ಸಿಗ್ಗಾವಿ ಎಂಬುವರನ್ನು ಹೊಸ ಮುಖ್ಯಾಧಿಕಾರಿಗಳನ್ನು ರಾಯಭಾಗಕ್ಕೆ ನೇಮಕಮಾಡಿ ಆದೇಶವನ್ನು ಮಾಡಲಾಯಿತು ಆದರೆ ಅವರು ಹಾಜರಾಗಲೇ ಇಲ್ಲಾ. ಕಾರಣ ಏನಿರಬಹುದು ? ಅನ್ನೊದನ್ನು ಹುಡಕುತ್ತಾ ಹೋದರೆ ಅಲ್ಲಿ ಅಮಾನತ್ತಾದವರ ಸಂಖ್ಯೆ !!
ರಾಯಬಾಗದಲ್ಲಿ ಇದೂವರೆಗೂ ಅಮಾನತ್ತಾದವರು ಒಟ್ಟು ಐದು ಜನ ಮುಖ್ಯಾಧಿಕಾರಿಗಳು ಅವರು ಎಸ್ ಕೆ ಬೆಳವಿ, ಸಂಪಗಾವ್, ಖತೀಬ್, ಬಿ.ಕೆ.ಅರಬಳ್ಳಿ ಹಾಗೂ ಇತ್ತೀಚಿಗೆ ಅಮಾನತ್ತಾದ ಸಂಜು ಮಾಂಗ. ಹೀಗೆ ಇವರೆಲ್ಲಾ ಒಂದಲ್ಲ ಒಂದು ಕಾರಣಕ್ಕೆ ಅಮಾನತ್ತಾದವರು. ಹೀಗಾಗಿ ಅಮಾನತ್ತಾದ ಸುದ್ದಿಯನ್ನು ತಿಳಿದ ಹೊಸ ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾಂವಿಯವರು ಅಧಿಕಾರ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ.
ಈ ಕುರಿತು ಸಾಮಾಜಿಕ ಹೊರಾಟಗಾರ & ವಕೀಲ ಸುರೇಂದ್ರ ಉಗಾರೆ ಇವರು ಅಮಾನತ್ತಾದ ಮುಖ್ಯಾಧಿಕಾರಿಗಳೆಲ್ಲರೂ ಮೊದ- ಮೊದಲು ಮುಗ್ದರಿದ್ದರು ಅವರಿಗೆ ಹಣದ ಮೋಹಕ್ಕೆ ಸೀಲುಕಿಸಿ ಅಮಾನತಾಗುವಂತೆ ಮಾಡಲಾಯಿತು. ಮುಖ್ಯಾಧಿಕಾರಿಗಳೆಲ್ಲಾ ಅಮಾನತ್ತಾದರೆ ಸಹಾಯಕ ಕಿರಿಯ ಅಭಿಯಂತರ ಹುದ್ದೆಗೆ ಬೇರೆ ಯಾರೂ ಕೂಡಾ ಬರಲ್ಲಾ. ಒಂದೊಮ್ಮೆ ಬಂದರೆ ಎಷ್ಟು ತಿಂಗಳು ಇರುತ್ತಾರೆ ಅನ್ನೊದು ಕೂಡಾ ಸತ್ಯ ಎಂದು ಪ್ರತಿಕ್ರಿಯಿಸುತ್ತಾರೆ.
ಈ ಕುರಿತು ಬೆಳಗಾವಿಯ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿಯವರು, ಅಮಾನತು ಆದ ಮುಖ್ಯಾಧಿಕಾರಿಗಳ ಹಾಗೂ ಹೊಸ ಮುಖ್ಯಧಿಕಾರಿಯು ಅಧಿಕಾರಿ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಇದರ ಬಗ್ಗೆ ಮಾಹಿತಿಯನ್ನು ಕೆಳಿದ್ದಾಗ ವಿಚಾರಣೆ ಮಾಡಿ ಹೇಳುತ್ತೇನೆ ಎಂದು ಪೋನ್ ಕಟ್ಟು ಮಾಡಿದರು’.