ಕರ್ನಾಟಕದ ಜನತೆಗೆ ಬಂಪರ್ ಗಿಫ್ಟ್! 6 ನೇ ಭಾಗ್ಯ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗಿನಿಂದಲೂ ರೈತಪರವಾದ ಅನೇಕ ಯೋಜನೆಗೆ ಚಾಲ್ತಿ ನೀಡುತ್ತಲೇ ಇದ್ದಾರೆ ಈಗಾಗಲೇ ಪಂಪ್ ಸೆಟ್ ಅಳವಡಿಕೆಗೆ ಸಬ್ಸಿಡಿ ವಿತರಣೆಗೆ ಮುಂದಾದ ಸರಕಾರ ಅದರೊಂದಿಗೆ ಹೊಸ ಯೋಜನೆಯೊಂದು ರೈತರ ಅಭಿವೃದ್ಧಿಗಾಗಿ ತರಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ಆಡಳಿತ ಪಕ್ಷದಲ್ಲಿ ಇದ್ದ ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ಅನೇಕ ಕಾಂಗ್ರೆಸ್ ಯೋಜನೆಗಳು ನೆಲಕಚ್ಚಿದ್ದು ಇದೀಗ ಒಂದೊಂದು ಯೋಜನೆ ಮತ್ತೆ ಜೀವ ಪಡೆಯುತ್ತಿದೆ. ಈ ಮೂಲಕ ಈಗಾಗಲೇ ಇಂದಿರ ಕ್ಯಾಂಟೀನ್ ಹಾಗೂ ಅನ್ನ ಭಾಗ್ಯ ಯೋಜನೆ ಮತ್ತೆ ಕಳೆ ಪಡೆಯುತ್ತಿದ್ದು ರೈತರ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರಕಾರ ಈ ಹಿಂದಿನ ಆಡಳಿತ ಅವಧಿಯಲ್ಲಿ ಜಾರಿಗೆ ತಂದ ಕೃಷಿ ಭಾಗ್ಯ ಯೋಜನೆಗೆ ಈಗ ಮರು ಚಾಲನೆ ಸಿಗುತ್ತಿದೆ. ಈ ಮೂಲಕ ಎಲ್ಲ ರೈತರ ಸರ್ವತೋಮುಖ ಅಭಿವೃದ್ಧಿ ಈ ಯೋಜನೆಯ ಮುಖ್ಯ ಉದ್ದೇಶ ಎನ್ನಬಹುದು.
ಯಾವುದು ಈ ಯೋಜನೆ?
ಈ ಹಿಂದೆ ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲ ರೈತರಿಗೆ 3 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿತ್ತು ಆದರೆ ಈಗ ಆ ಸಾಲದ ಮೊತ್ತವನ್ನು ಮೂರು ಲಕ್ಷದಿಂದ 5 ಲಕ್ಷಕ್ಕೆ ಏರಿಸಲಾಗಿದೆ. ಇದು ಶೂನ್ಯ ಬಡ್ಡಿಯಾದ ಕಾರಣ ರೈತರಿಗೆ ಬಡ್ಡಿಕಟ್ಟುವ ಸಮಸ್ಯೆ ಕೂಡ ಇರಲಾರದು.
ಸದನದಲ್ಲೂ ಕಲಾಪ:
ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಬೆಳವಣಿಗೆ ಅಂಶದ ಕುರಿತು ಸದನ ನಡೆಯುತ್ತಿದ್ದು ಈ ವೇಳೆ ಸುನೀಲ್ ಕುಮಾರ್ ಯೋಜನೆಯ ಬಗ್ಗೆ ಮಾತಾಡಿದ್ದಾರೆ. ಈ ವೇಳೆ ಮಾತಾಡಿದ್ದ ಅವರು ರಾಜ್ಯದಲ್ಲಿ ಈ ಹಿಂದೆ ಕಿಸಾನ್ ಸಮ್ಮಾನ್ ಯೋಜನೆ ಇತ್ತು ರೈತರ ಅಭಿವೃದ್ಧಿ ಗಾಗಿ ಇರುವ ಯೋಜನೆ ಹಾಗಾಗಿ ಇದು ಮತ್ತೆ ಅನುಷ್ಠಾನ ಆಗಬೇಕು ಎಂದಿದ್ದರು ಅದಕ್ಕೆ ಉತ್ತರಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಆಡಳಿತದಲ್ಲಿ ಜಾರಿಯಲ್ಲಿ ಇದ್ದ ಕೃಷಿ ಭಾಗ್ಯ ಮತ್ತೆ ಮರುಪರಿಶೀಲನೆ ಆಗಿ ಅದನ್ನು ಇನ್ನಷ್ಟು ಅಭಿವೃದ್ಧಿಯಾಗಿ ಜಾರಿ ಮಾಡ್ತೇವೆ ಎಂದಿದ್ದಾರೆ. ಈ ಒಂದು ಯೋಜನೆಯಿಂದಾಗಿ ರೈತರಿಗೆ ಬಾರಿ ಮಟ್ಟದ ಕೊಡುಗೆ ಸಿಕ್ಕಂತಾಗುತ್ತದೆ. ರೈತರಿಗೆ ಅನುಕೂಲವಾಗ ಲೆಂದು ಇದರೊಂದಿಗೆ ಇನ್ನು ಅನೇಕ ಯೋಜನೆ ಕೂಡ ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಮುಂದೆ ಬಂದಿದೆ.
