ಬೆಳಗಾವಿ: ಮುಂಗಾರು ಮಳೆ ವಿಫಲ ಬರ ಜಿಲ್ಲೆ ಘೊಷಣೆ ಮಾಡಲು ಪ್ರತಿಭಟನೆ.
ಬೆಳಗಾವಿ: ಜಿಲ್ಲೆಯಲ್ಲಿ 2023 ರ ಮುಂಗಾರು ಹಂಗಾಮ ಸಂಪೂರ್ಣ ವಿಫಲವಾಗಿದೆ ಮೇ ಮೊದಲ ವಾರ ಮಳೆಯಾಗಲಿಲ್ಲ. ಭೂಮಿ ಹದಗೊಳಿಸುವ ಹಂತವು ಸಿಗಲಿಲ್ಲ. ವಾಡಿಕೆಯಂತೆ ಮೇ ಕೊನೆಯವಾರ ಅಥವಾ ಜೂನ ಮೊದಲ ವಾರ ಬಿತ್ತನ ಆಗಬೇಕಾಗಿತ್ತು. ಬೆಳಗಾವಿ ತಾಲೂಕ ಮತ್ತು ಜಿಲ್ಲೆಯ ಮಣ್ಣಿನ ಗುಣ ಮತ್ತು ಹಮಾನಕ್ಕೆ ತಕ್ಕಂತ ಮಳೆಯಾಗಲಿಲ್ಲ. ಬಿತ್ತನೆಯೂ ಆಗಲಿಲ್ಲ. ರೈತರು ಮಳೆಗಾಗಿ ಕಂಗಾಲಾಗಿದ್ದಾರೆ ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕಾ ಅಧ್ಯಕ್ಷರು, ಬಸವರಾಜ ಹಾ. ಡೊಂಗರಗಾವಿ ರವರು ಹೇಳಿದರು.
ಜುಲೈ ಮೊದಲ ವಾರ ಕಳೆದರೂ ಬಿತ್ತನೆ ಆಗಲಿಲ್ಲ. ಅದರೆ ಕಬ್ಬು ಬೆಳೆ ಸಂಪೂರ್ಣ ಒಣಗಿ ಹಾಳಾಗಿದೆ, ರೈತರು ಬೀಜ ಗೊಬ್ಬರ ಖರೀದಿಸಿ ನಷ್ಟ ಅನುಭವಿಸಿದ್ದಾರೆ.
ಎಲ್ಲಡೆ ನೀರಿಗಾಗಿ ಹಾಹಾಕಾರ ಉಂಟಾಗಿದೆ ಹಾಗೂ ಸಮರ್ಪಕವಾಗಿ ಕರೆಂಟ್ ಪೂರೈಕೆಯೂ ಆಗುತ್ತಿಲ್ಲ. ಕೃಷಿ ಚಟುವಟಿಕೆ ಇಲ್ಲದರಿಂದ ರೈತರು ವಲಸೆ ಹೋಗುತ್ತಿದ್ದಾರೆ, ಕೃಷಿ ಚಟುವಟಿಕ ಬಿಟ್ಟು ಗಾರೆ ಕಟ್ಟಡ ಕಾರ್ಯಗಳಿಗೆ ಪರ ಊರುಗಳಿಗೆ ಹೋಗುತ್ತಿದ್ದಾರೆ. ಕಳೆದ ವರ್ಷ ಬೆಳ ವಿಮ ತುಂಬಿದ ರೈತರಿಗೂ ವಿಮಾ ವರಿಹಾರ ಕೊಡಲಿಲ್ಲ. ಇದರಿಂದ ಸರಕಾರ ಮತ್ತು ವಿಮಾ ಕಂಪನಿ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ.
ಯಾವದೇ ಅಧಿಕಾರಿಗಳು ಗ್ರಾಮಕ್ಕೆ ಬಂದು ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ಹಾಗೂ ಚುನಾಯಿತ ಸದಸ್ಯರು, ಶಾಸಕರು, ಸಂಸದರು ಹಾಗೂ ಯಾರು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಪ್ರತಿ ವರ್ಷ ಬಿತ್ತನೆ ಸೋಯಾ ಬೀಜ ಕೊಡುತ್ತಿದ್ದರು. ಈ ವರ್ಷ ಬಿತ್ತನೆ ಬೀಜವನ್ನು ಕೊಡುತ್ತಿಲ್ಲ, ಈ ಎಲ್ಲ ಸಮಸ್ಯೆಗಳನ್ನು ಕೂಡಲೇ ಗಮನಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಬೆಳಗಾವಿ ಜಿಲ್ಲೆಯ ಮತ್ತು ತಾಲೂಕು ಸಂಪೂರ್ಣ ಬರ ಪೀಡಿತ ಪುದೇಶವೆಂದು ಘೋಷಿಸಿ, ಪರಿಹಾರ ಒದಗಿಸಬೇಕು ಎಂದು ಹೇಳಿ ಮನವಿಯನ್ನು ಮಾಡಿದರು.