ಆದಾಯ ಮೀರಿದ ಆಸ್ತಿ ಗಳಿಕೆ: ನಿವೃತ್ತಿ ನ್ಯಾಯಾಧೀಶರು, ಕುಟುಂಬ ಸಹಿತ ಮೂವರಿಗೆ ಜೈಲು ಶಿಕ್ಷೆ.
ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಡಿ ನಿವೃತ್ತ ನ್ಯಾಯಾಧೀಶ ಹಾಗೂ ಅವರ ಕುಟುಂಬದ ಮೂವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ನೀಡಿ ತೀರ್ಪನ್ನು ನೀಡಿದೆ.
ಆಕ್ರಮ ಆಸ್ತಿ ಗಳಿಕೆ ಆರೋಪದಡಿಯಲ್ಲಿ ನಿವೃತ್ತ ನ್ಯಾಯಾಧೀಶರಾದ ವೀರಭದ್ರಪ್ಪ ವಿರುದ್ಧ 2013 ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ಸಿಬಿಐ ನ್ಯಾಯಾಲಯದಲ್ಲಿ ಸಡೆಸಿತ್ತು.
ಪ್ರಕರಣದ ಬಗ್ಗೆ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು 2014 ರಲ್ಲಿ ಆರೋಪಿ ನಿವೃತ್ತ ನ್ಯಾಯಾಧೀಶರು ಮತ್ತು ಕುಟುಂಬದ ಸದಸ್ಯರು ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದರು.
ನ್ಯಾಯಾಧೀಶ ವೀರಭದ್ರಪ್ಪ 2002-2013 ರ ಅವಧಿಯಲ್ಲಿ ಬೆಂಗಳೂರು, ಮುಂಬೈ ಹಾಗೂ ದೆಹಲಿ ವಿಭಾಗದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಸದಸ್ಯರು ಹಾಗೂ ಉಪಾಧ್ಯಕ್ಷ ಹುದ್ದೆಯಲ್ಲಿ ಕಾಯನಿವಹಿಸಿದರು.
ಪ್ರಕರಣ ವಿಚಾರಣೆ ನಡೆಸಿದ 34 ನೇ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್ ಮೋಹನ್ ನೇತೃತ್ವದ ನ್ಯಾಯಪೀಠ ನಿವೃತ್ತ ನ್ಯಾಯಾಧೀಶ ಜೆ.ಇ.ವೀರಭದ್ರಪ್ಪ ಹಾಗೂ ಅವರ ಕುಟುಂಬದ ಇಬ್ಬರು ಸದಸ್ಯರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 1.5 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪನ್ನು ನೀಡಿದೆ.
ಜೊತೆಗೆ ಆರೋಪಗಳಿಗೆ ಸೇರಿದ ಸುಮಾರು 1.25 ಕೋಟಿ ರೂಪಾಯಿ ಬೆಲೆ ಬಾಳುವ ಜಮೀನು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸಿಬಿಐ ಗೆ ವಿಶೇಷ ನ್ಯಾಯಾಲಯವು ಅದೇಶಿದೆ.