ರಾಯಬಾಗ: ಪಟ್ಟಣ ಪಂಚಾಯತಿಯ ಸ್ವಯಂ ಘೋಷಿತ ಆಸ್ತಿ ತೆರಿಗೆ ಪ್ರಕರಣ: ತನಿಖೆಗೆ ಒತ್ತಾಯ.

ಬೆಳಗಾವಿ: ರಾಯಬಾಗ ಪಟ್ಟಣ ಪಂಚಾಯತಿಯಲ್ಲಿ ಸ್ವಘೋಷಿತ ಆಸ್ತಿ ಪ್ರಕರಣದಲ್ಲಿ ಅಧಿಕಾರಿಗಳು ಲಕ್ಷ ಲಕ್ಷ ರೂಗಳನ್ನು ಲೂಟಿ ಹೊಡೆದಿದ್ದಾರೆ ತನಿಖೆಗೆ ಒಳಪಡಿಸಲು ಮಾಹಿತಿ ಹಕ್ಕು & ಸಾಮಾಜಿಕ ಹೊರಾಟಗಾರ ಸುರೇಂದ್ರ ಉಗಾರೆ ಇವರು ಪೌರಾಡಳಿತ ನಿರ್ದೇಶನಾಲಯಕ್ಕೆ ಮನವಿ ಮಾಡಿದ್ದಾರೆ.
ರಾಯಬಾಗ ಪಟ್ಟಣ ಪಂಚಾಯಿಯಲ್ಲಿ 2017 ರಿಂದ 2022 ರವಗೆ ಅಕ್ರಮ ನಡೆದಿದ್ದು ಅದರಲ್ಲಿ ಒಂದು ಮನೆಗೆ ಸಂಬಂದಿಸಿದ ಎಲ್ಲಾ ದಾಖಲಾತಿಗಳ ಸಮೇತ ನಿರ್ದೇಶನಾಲಯಕ್ಕೆ ವಿನಂತಿಸಿದ್ದು ಅದರ ಪ್ರಕಾರ ಒಂದು ಮನೆಗೆ ಮೂರು ಸಾವಿರ ಕ್ಕಿಂತಲ್ಲೂ ಹೆಚ್ಚಿನ ಆಸ್ತಿ ಕರವನ್ನು ತೆರಿಗೆ ರೂಪದಲ್ಲಿ ಕಟೈಇಸಿಕೊಳ್ಳಬೇಕಾಗಿತ್ತು. ಆದರೆ ಅದರಲ್ಲಿ ಕೇವಲ 900 ರೂ ತೋರಿಸಿದ್ದಾರೆ. ಇದರಿಂದಾಗಿ ಒಟ್ಟಾರೆ ತೆರಿಗೆಯಲ್ಲಿ ಅಧಿಕಾರಿಗಳು ಲಕ್ಷ ಲಕ್ಷ ಗಟ್ಟಲೆ ಸರ್ಕಾರಕ್ಕೆ ಜಮಾ ಮಾಡಿಸದೇ ನೇರವಾಗಿ ತಮ್ಮ ಪಾಕೇಟಗೆ ಇಳಿಸಿಕೊಂಡಿದ್ದಾರೆ.
ಆದ್ದರಿಂದ ಸನ್ 2017 -18 ರಿಂದ ಇಲ್ಲಿಯವರೆಗೆ ಸ್ವಘೋಷಿತ ತೆರಿಗೆಯ ಬಗ್ಗೆ ಸಿ.ಆಯ್.ಡಿ.ಮುಖಾಂತರ ತನಿಖೆ ಮಾಡಿಸಬೇಕು ಎಂದು ಸುರೇಂದ್ರರವರು ನಿರ್ದೇಶನಾಲಯಕ್ಕೆ ವಿನಂತಿಸಿಕೊಂಡಾದ್ದಾರೆ.