ಚಿಕ್ಕೋಡಿ ಸಾಮಾಜಿಕ ಅರಣ್ಯ ಇಲಾಖೆ: ನರೆಗಾ ಕಾಮಗಾರಿ ಮಾಡದೇ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಅಧಿಕಾರಿಗಳು..!?
ಬೆಳಗಾವಿ: ಕಾಮಗಾರಿ ಮಾಡದೇ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದರ ಬಗ್ಗೆ ಚಿಕ್ಕೋಡಿ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಬೆಳಕಿಗೆ ಬಂದಿದ್ದು ಈ ಕುರಿತು ಕ್ರಮ ತಗೆದುಕೊಳ್ಳಲು ಬೆಳಗಾವಿ ಜಿಲ್ಲಾ ಪಂಚಾಯತ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಸಾಮಾಜಿಕ ಅರಣ್ಯವಲಯದ ಅಧಿಕಾರಿಗಳು ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾತ್ಮಾರೆ ತೋಟದ ಶಾಲೆಯಲ್ಲಿ ಗಿಡ ನೆಡುವ ಕಾಮಗಾರಿಯನ್ನು ಕೈಕೊಂಡಿದ್ದಾರೆ ಅದು ದಿನಾಂಕ ೩/೧೦/೨೦೨೪ ರಿಂದ ೧೩/೧೦/೨೦೨೪ ರವರೆಗೆ ಕಾಮಗಾರಿ ಮಾಡಿದ್ದಾರೆಂದು ನರೆಗಾ ಅಂತರಜಾಲದಲ್ಲಿ ಹಾಕಿದ್ದಾರೆ. ಅದರ ಪ್ರಕಾರ ದಿನಾಲು ೩೦ ಕೂಲಿ ಆಳುಗಳನ್ನು ತೋರಿಸಿದ್ದಾರೆ. ಇದು ಅಂತರಜಾಲದಲ್ಲಿ ಕೂಡಾ ಲಭ್ಯವಿದೆ.
ಆದರೆ ವಾಸ್ತವವಾಗಿ ಅಲ್ಲಿ ಕಾಮಗಾರಿಯನ್ನು ಮಾಡೇ ಇಲ್ಲಾ. ಸ್ಥಾನಿಕವಾಗಿ ಅಲ್ಲಿ ನೋಡಿದರೆ ತಗ್ಗು ಇಲ್ಲಾ ಗಿಡಾನು ಇಲ್ಲಾ. ಆದರೂ ಅಧಿಕಾರಿಗಳು ಶಾಲೆಯ ಆವರಣದಲ್ಲಿ ಗಿಡ ನೇಡುವ ಯೋಜನೆಯನ್ನು ಕೈಕೊಂಡಿದ್ದಾರೆಂದು ಆರೋಪಿಸಿದ್ದಾರೆ. ಅಧಿಕಾರಿಗಳು ಕಾಮಗಾರಿ ಮಾಡದೇ ಅದು ಹೇಗೆ ಅಂತರಜಾಲದಲ್ಲಿ ಹಾಕಿದರು ? ಇದು ಒಬ್ಬರಿಂದ ಆಗುವ ಕೆಲಸವಲ್ಲಾ ಇದಕ್ಕೆ ಮೇಲಾಧಿಕಾರಿಗಳ ಸಹಕಾರ ಇದ್ದಾಗ ಮಾತ್ರ ಇಂತಹ ಅಕ್ರಮ ಮಾಡಲು ಸಾಧ್ಯ ಎಂದು ಪರಿಸರವಾದಿ ಸುರೇಂದ್ರ ಉಗಾರೆ ಇವರು ಹೇಳುತ್ತಾರೆ.
ಕಾಮಗಾರಿ ಮಾಡದೇ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿದ ಅರಣ್ಯ ಅಧಿಕಾರಿಗಳಾದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ, ವಲಯ ಅರಣ್ಯ ಅಧಿಕಾರಿ, ಸಹಾಯಕ ವಲಯ ಅಧಿಕಾರಿ ಮತ್ತು ಪಂಚಾಯತ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಹಾಗು ಅಧಿಕಾರಿಗಳಿಗೆ ಅಕ್ರಮ ಮಾಡಲು ಸಾತ ಮಾಡಿದ ಜಾಬ್ ಕಾರ್ಡಗಳನ್ನು ಕಪ್ಪ ಪಟ್ಟಿಗೆ ಸೇರಿಸಬೇಕು ಎಂದು ದಾಖಲೆಗಳ ಸಮೇತ ಇಂದು ಬೆಳಗಾವಿ ಜಿಲ್ಲಾ ಪಂಚಾಯತಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.