ಲಿಂಗಸೂರು ತಾಲೂಕ ಪಂಚಾಯತಿಯಲ್ಲಿ ದೊಡ್ಡ ಮೊತ್ತದ ಭ್ರಷ್ಟಾಚಾರ !?
ರಾಯಚೂರು; ಜಿಲ್ಲೆಯ ಲಿಂಗಸೂರು ತಾಲೂಕಿನ ಅಮರಪ್ಪ ಕಾರ್ಯನಿರ್ವಾಹಕ ಅಧಿಕಾರಿ ಇವರು, ತಾಲ್ಲೂಕಿನಲ್ಲಿ ಬ್ರಷ್ಟಚಾರದಲ್ಲಿ ತೊಡಗಿದ್ದು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಯ ಕಡೆಗೆ ಗಮನ ಹರಿಸದೆ ಕೇವಲ ಹಣ ಮಾಡುವ ಕಡೆಗೆ ಗಮನ ಹರಿಸಿದ್ದಾರೆ ಎಂದು ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳು ಬೆಂಗಳೂರಿನ ಆಯುಕ್ತರಿಗೆ ತನಿಖೆ ಮಾಡಲು ಒತ್ತಾಯಿದ್ದಾರೆ.
ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಯಾದ 2023-24ನೇ ಸಾಲಿನ ಮೊದಲೇ ಹಂತದ ನರೇಗಾ ಆಡಳಿತಾತ್ಮಕ ವೆಚ್ಚದ ಮೊತ್ತ 16.28 ಲಕ್ಷ ರೂ.ಗಳನ್ನು ಗ್ರಾಮ ಪಂಚಾಯತಗಳಿಗೆ ನೀಡದೇ ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಹೆದರಿಸಿ, ಇವರು ಸೂಚಿಸಿದ ವೆಂಡರ್ ಗಳ ರಶಿಧಿಗಳಿಗೆ ಬಲವಂತವಾಗಿ ಸಹಿ ಮಾಡಿಸಿದ್ದಾರೆ ಮತ್ತು ಇವರು ವೆಂಡರ್ ಗಳಿಗೆ ಹಣ ಪಾವತಿಸುವಂತೆ ಮಾಡಿ ವೆಂಡರ್ ಗಳಿಂದ ಹಣವನ್ನು ಬಳಸಿಕೊಂಡು ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ಮಾಡಿರುತ್ತಾರೆ ಎಂದು ಆರೋಪಿಸಿದ್ದಾರೆ.
ತಾಲೂಕಿನಲ್ಲಿ 2024-25ನೇ ಸಾಲಿನಲ್ಲಿ ಬಿಡುಗಡೆಯಾದ ಎರಡನೇ ಹಂತದ ಗ್ರಾಮ ಪಂಚಾಯತಗಳ ಆಡಳಿತಾತ್ಮಕ ವೆಚ್ಚವನ್ನು ಸಹ ಪಾವತಿಮಾಡುವ ಸಲುವಾಗಿ ಇವರನ್ನು ಬೇರೆ ಕಡೆಗೆ ವರ್ಗಾವಣೆಯ ಆದೇಶವಾದರೂ ಸಹಿತ ಲಿಂಗಸೂರು ತಾಲೂಕಾ ಪಂಚಾಯತಿಲ್ಲಿಯೇ ಕರ್ತವ್ಯ ಮಾಡುತ್ತಿದ್ದು ಹಣದ ಹಿಂದೆ ಬಿದ್ದು ಕಾರ್ಯನಿರ್ವಹಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಲಿಂಗಸೂರು ತಾಲೂಕಿನ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಯಾದ ಅಮರಪ್ಪ ಇವರು ತಾಲೂಕಿನಿಂದ ಬೇರೆ ಕಡೆ ವರ್ಗಾವಣೆಯಾಗಿ ಎರಡು ವಾರಗಳು ಕಳೆದರು ಇನ್ನೂ ಕಾರ್ಯನಿರ್ವಾಹಕ ಹುದ್ದೆಯಲ್ಲಿ ಮುಂದುವರೆದಿರುವುದು, ಅವರು ಬ್ರಹ್ಮಚಾರಕ್ಕೆ ಹಿಂಬದಿಯಿಂದ ರಾಯಚೂರು ಜಿಲ್ಲಾ ಆಡಳಿತ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಬೆಂಬಲವಿದೆ ಎನ್ನುವುದು ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಆದ್ದರಿಂದ ಅಮರಪ್ಪ ಇವರ ಮೇಲಿರುವ ಆರೋಪಗಳ ಕುರಿತು ತನಿಖೆ ಮಾಡಿ ಆಡಳಿತಾತ್ಮಕ ವೆಚ್ಚವನ್ನು ನಮ್ಮ ಪಂಚಾಯತಗಳಿಗೆ ದೊರಕಿಸಿ ಕೊಡಬೇಕು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ಮಾನ್ಯ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿಗಳು ರಾಯಚೂರು ಇವರು ಸಹಿತ ಭಾಗಿಯಾಗಿರುವ ಕುರಿತು ಸಂದೇಹ ಮೂಡುವುದಲ್ಲದೇ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತಿಯ ಮುಂದೆ ಧರಣಿ ಹಮ್ಮಿಕೊಳ್ಳುತ್ತೆವೆ ಎಂದು ಲಿಂಗಸೂರು ತಾಲೂಕಿನ ಗ್ರಾಮ ಪಂಚಾಯತ ಅಧ್ಯಕ್ಷರುಗಳು ಆಯುಕ್ತರಿಗೆ ಎಚ್ಚರಿಕೆ ನೀಡಿದ್ದಾರೆ.