ವಿಜಯಪುರಸುವರ್ಣ ಗಿರಿ ಟೈಮ್ಸ್
ವಿಜಯಪುರ ವಕೀಲ ಮೇಲಿನಕೇರಿ ಕೊಲೆಯನ್ನು ಖಂಡಿಸಿ ಪ್ರತಿಭಟನೆ & ಮನವಿ
ಬೆಳಗಾವಿ: ವಿಜಯಪೂರದ ಯುವ ವಕೀಲ ರವಿ ಮೇಲಿನಕೇರಿಯ ಕೊಲೆಯನ್ನು ಖಂಡಿಸಿ ಇಂದು ಬೆಳಗಾವಿಯಲ್ಲಿ ವಕೀಲರು ಪ್ರತಿಭಟಣೆ ಮಾಡಿ ಜಿಲ್ಲಾಧಿಕಾರಿಗಳ ಪರವಾಗಿ ಹೆಚ್ಚುವರಿ ಡಿಸಿ ಇವರಿಗೆ ಮನವಿ ಸಲ್ಲಿಸಿದರು.
ಕಳೆದವಾರ ವಿಜಯಪೂರದಲ್ಲಿ ಯುವ ಜಿಲ್ಲಾ ನ್ಯಾಯವಾದಿ ರವಿ ಮೇಲಿನಕೇರಿಯನ್ನು ನಂಬರ್ ರಹಿತ ಕಾರೊಂದು ಹಾಯ್ದು ಕೊಂದಿತ್ತಲ್ಲದೇ ಸುಮಾರು ಮಿಟರಗಳವರೆಗೆ ಜಗ್ಗಿಕೊಂಡಿ ಹೊಗಿತ್ತು. ಇ ಕೃತ್ಯದ ಕುರಿತು ಇಂದು ಬೆಳಗಾವಿಯಲ್ಲಿ ಜಿಲ್ಲಾ ವಕೀಲರು ಬೃಹತ್ ಪ್ರತಿಭಟನೆ ಮಾಡಿ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದಿದ್ದು. ಕೃತ್ಯಕ್ಕೆ ಸಂಬಂದಿಸಿದಂತೆ ಪ್ರಾಮಾಣಿಕ ತನಿಖೆ ಮಾಡಬೆಕೆಂದು ಜಿಲ್ಲಾದಿಕಾರಿಗಳ ಕಾರ್ಯಾಲಯದ ಮೂಲಕ ಮನವಿಯನ್ನು ಸಲ್ಲಿಸಿದರು.
ಈ ಪ್ರತಿಭಟನೆಯ ಸಮಯದಯಲ್ಲಿ ಬೆಳಗಾವಿ ವಕೀಲರ ಸಂಘದ ಪದಾದಿಕಾರಿಗಳು ಮತ್ತು ಹಿರಿಯ ವಕೀಲರು, ಸಂಘದ ಸದಸ್ಯರೆಲ್ಲರು ಪಾಲುಗೊಂಡು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಬಂದು ಮನವಿ ಸಲ್ಲಿಸಿದರು.