ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಭಾರಿ ಗೋಲ್ ಮಾಲ್ ಎರಡೇ ದಿನದಲ್ಲಿ ಲಕ್ಷ ಲಕ್ಷ ಲೂಟಿ !?

ಬಿಗ್ ಬ್ರೆಕಿಂಗ್ಸ್
ಬೆಳಗಾವಿ: ಜಿಲ್ಲೆಯ ಒಂದು ಗ್ರಾಮ ಪಂಚಾಯತಿಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಭಾರಿ ಗೋಲ್-ಮಾಲ್ ಆಗಿದ್ದು ಅವರ ಕ್ರಮ ತಗೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಜಿಲ್ಲೆಯ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮ ಪಂಚಾಯತಿಯ ಮಹಾತ್ಮ ಗಾಂಧಿ ಉಧ್ಯೋಗ ಖಾತ್ರಿಯ ಯೋಜನೆಯಲ್ಲಿ ಪಂಚಾಯತಿಯ ಅಧಿಕಾರಿಗಳು ಹೂಳುವೆತ್ತುವ ೩೭ ಕಾಮಗಾರಿಗೆ ಅಕ್ರಮ ಹಾಜರಾತಿಯನ್ನು ತೋರಿಸಿ ಹಣ ಹೊಡೆಯುವ ತಂತ್ರ ಮಾಡಿದ್ದಾರೆಂದು ಸಮಾಜ ಸೇವಕ ಹನಮಂತ ಭಿರಡೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಉಧೋಗ ಖಾತ್ರಿಯ ಯೋಜನೆಯ ಒಟ್ಟು ೩೭ ಕಾಮಗಾರಿಗಳನ್ನು ಮಾಡದೇ ಇದ್ದರೂ ಕಾಮಗಾರಿ ಮಾಡುತ್ತಿದ್ದಂತೆ ಫೊಟೊ ಹಾಕಿದ್ದಾರೆ. ಅದರಲ್ಲಿ ಸುಮಾರು ೧೦೦ ಕ್ಕು ಹೆಚ್ಚು ಮಹಿಳೆಯರ ಹೆಸರುಗಳಲ್ಲಿ ಹಣ ಹೊಡೆಯಲು ಅಕ್ರಮ ದಾಖಲಾತಿ ಮಾಡಿದ್ದು ಬೆಳಕಿಗೆ ಬಂದಿದೆ ಎಂದು ಉಲ್ಲೆಖಿಸಿದ್ದಾರೆ.


ಅದರ ಜೊತೆ ಅಧಿಕಾರಿಗಳು ಕೇವಲ ಎರಡು ದಿನಗಳಲ್ಲಿ ಲಕ್ಷ ಲಕ್ಷ ಹೊಡೆಯುವ ಅಕ್ರಮಕ್ಕೆ ಕೈಹಾಕಿದ್ದಾರೆ ಎಂದು ಆರೋಪಿಸಿದ್ದರೆ. ಪಂಚಾಯತಿಯ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷ ಹಾಗು ಫೊಟೊ ಅಪಲೋಡ್ ಮಾಡಿದವನ ಮೇಲೆ ಕ್ರಮ ತಗೋಬೇಕು ಎಂದು ಜಿಲ್ಲಾ ಪಂಚಾಯತಿಗೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.


