ಮಂಗಳಸೂತ್ರ ವಾರ್: ಸ್ಟ್ರಾಂಗಾಗಿ ಕಿಕ್ ಕೊಟ್ಟ ಪ್ರಕಾಶ್ ರಾಜ್.
ಬೆಂಗಳೂರು: ಪ್ರದಾನಿಗಳ ರಾಜಸ್ತಾನದಲ್ಲಿ ಹೇಳಿದ ಮಂಗಳ ಸೂತ್ರದ ವಾರಗೆ ಬಹುಬಾಷ್ಯಾ ಚಿತ್ರ ನಟ ಮತ್ತು ಸಾಮಾಜಿಕ ಹೊರಾಟಗಾರ ಪ್ರಕಾಶ್ ರಾಜ್ ಸ್ಟ್ರಾಂಗಾಗಿ ಕಿಕ್ ಕೊಟ್ಟು ಪ್ರದಾನಿಗಳನ್ನು ಕೆಣಕಿದ್ದಾರೆ.
ಅವರು ತಮ್ಮ ಎಕ್ಸ್ ನಲ್ಲಿ
“ಮೂರೂ ಬಿಟ್ಟ ಮಹಾಪ್ರಭುಗಳ ಕೆಂಗಣ್ಣು ಮಂಗಳಸೂತ್ರದ ಮೇಲೆ ಬಿದ್ದಿದೆ, ಆಯ್ತು ಮಂಗಳಸೂತ್ರದ ಬಗ್ಗೆಯೇ ಮಾತಾಡೋಣ.
ಪುಲ್ವಾಮಾದ 40 ಸೈನಿಕರ ಮಡದಿಯರ ಮಂಗಳಸೂತ್ರ ಕಿತ್ತವರು ಯಾರು ?
ದೆಹಲಿ ಗಡಿಯಲ್ಲಿ ಪ್ರತಿಭಟನಾ ನಿರತ ನೂರಾರು ರೈತರ ಸಾವಾಯ್ತಲ್ಲ, ಆ ಮನೆಗಳ ಮಂಗಳಸೂತ್ರ ಕಿತ್ತವರು ಯಾರು ?
ಲಾಕ್’ಡೌನ್ ಮಹಾವಲಸೆಯಲ್ಲಿ ರಸ್ತೆಯಲ್ಲೇ ಪ್ರಾಣ ಬಿಟ್ಟ ಲೆಕ್ಕವಿಕ್ಕದಷ್ಟು ಕಾರ್ಮಿಕರ ಪತ್ನಿಯರ ಮಂಗಳಸೂತ್ರ ಕಿತ್ತವರು ಯಾರು ?
ನೋಟ್ ಬ್ಯಾನ್ ನಿಂದ ATM ಕ್ಯೂನಲ್ಲೇ ಪ್ರಾಣ ಕಳೆದುಕೊಂಡ ಮನೆಗಳ ಮಂಗಳಸೂತ್ರ ಕಿತ್ತವರು ಯಾರು ?
ಮಣಿಪುರದ ಗಲಭೆಯಲ್ಲಿ ಹತ್ಯೆಯಾದ ಮನೆಗಳ ಮಂಗಳಸೂತ್ರ ಕಿತ್ತವರು ಯಾರು ?
ಎಂದು ಪ್ರದಾನಿ ಮೋದಿಯವರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಮೇಲೆ ಹಾಕಿ ಪೊಸ್ಟ್ ಮಾಡಿದ್ದಾರೆ.
ಪ್ರಕಾಶ್ ರಾಜ್ ಅವರ ಈ ಪೊಸ್ಟ್ ನೆಟ್ಟಿಗರನ್ನು ಬಡಿದೆಬ್ಬಿಸಿದೆ ಅಷ್ಟೇ ಅಲ್ಲಾ ಆಡಳಿತ ವರ್ಗವನ್ನು ಪ್ರಶ್ನೆ ಹೇಗೆ ಮಾಡಬೇಕು ಎಂದು ಎಚ್ಚರಿಸಿದಂತಾಗಿದೆ..