ಬೆಂಗಳೂರು ಗ್ರಾಮಾಂತರಸುವರ್ಣ ಗಿರಿ ಟೈಮ್ಸ್
ದಾಖಲೆ ಇಲ್ಲದ 2 ಲಕ್ಷ ನಗದು ವಶಕ್ಕೆ !

ದೊಡ್ಡಬಳ್ಳಾಪುರ: 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಕಾರ್ಯಪ್ರವೃತ್ತರಾದ ಚುನಾವಣಾಧಿಕಾರಿಗಳು ಇದೀಗ ದಾಖಲೆ ಇಲ್ಲದ 2 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ.
ದೊಡ್ಡಬಳ್ಳಾಪುರದ ಮಧುರೆಯ ಕಿರಣ್ ಕುಮಾರ್ ಗೆ ಸೇರಿದ 2 ಲಕ್ಷ ನಗದು ಇದಾಗಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆಯ ಸ್ಥಿರ ಕಣ್ಗಾವಲು ದಳದ ಕಾರ್ಯಾಚರಣೆ ವೇಳೆ ನಗದು ಪತ್ತೆಯಾಗಿದೆ.
ಸೂಕ್ತ ದಾಖಲೆಗಳಿಲ್ಲದ ಕಾರಣ ನಗದು ವಶಕ್ಕೆ ಪಡೆಯಲಾಗಿದೆ. ಈ ವೇಳೆ ದೊಡ್ಡಬೆಳವಂಗಲ ಠಾಣೆ ಪಿಎಸ್‌ಐ ರುದ್ರಮೂರ್ತಿ ಸಿಬ್ಬಂದಿ ಸಮಕ್ಷಮ ನಗದು ವಶಕ್ಕೆ ಪಡೆದಿದ್ದಾರೆ. KA52 N 3541 ಕಾರಿನಲ್ಲಿ ದಾಖಲೆಗಳಿಲ್ಲದೆ ನಗದು ಸಾಗಿಸಲಾಗುತ್ತಿತ್ತು.
ಇನ್ನೂ ಘಟನೆ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.