ಬೆಂಗಳೂರುಸುವರ್ಣ ಗಿರಿ ಟೈಮ್ಸ್
ನಿಮ್ಮ ಮಕ್ಕಳಿಗೆ ಧಾರ್ಮಿಕತೆಯನ್ನು ಬೋಧಿಸಬೇಡಿ: ರಾಜ್ಯ ಸರಕಾರ ಆದೇಶ !

ಬೆಂಗಳೂರು: ರಾಜ್ಯ ಮುಖ್ಯಮಂತ್ರಿ ಕಾರ್ಯಾಲಯದ X ದಲ್ಲಿ ನಿಮ್ಮ ಮಕ್ಕಳಿಗೆ ಧಾರ್ಮಿಕತೆಯನ್ನು ಬೋಧಿಸಬೇಡಿ. ಅವರು ಮೂಢನಂಬಿಕೆಯ ಗುಲಾಮರಾಗುತ್ತಾರೆ. ಅವರಿಗೆ ಶಿಕ್ಷಣ ಕೊಡಿ, ಗುಲಾಮಗಿರಿಯನ್ನು ಮೆಟ್ಟಿ ನಿಲ್ಲುತ್ತಾರೆ ಎಂದು ಡಾ ಅಂಬೇಡ್ಕರರ ಹೇಳಿಕೆಯನ್ನು ಮುಖ್ಯ ಮಂತ್ರಿಯವರ ಖಾತೆ ಸಿ.ಎಮ್ ಕರ್ನಾಟಕದಲ್ಲಿ ಟ್ವೀಟ್ ಮಾಡಿದೆ.

ರಾಜ್ಯದ ಮುಖ್ಯ ಮಂತ್ರಿಯ ಹೆಸರಲ್ಲಿರುವ ಸಿ ಎಂ ಖಾತೆಯ ತಮ್ಮ X ಖಾತೆಯ ಜಾಲತಾನದ ಮೂಲಕ ಡಾ ಅಂಬೇಡ್ಕರರ ಫೋಟೋ ಅವರ ಹೇಳಿಕೆಯನ್ನು ಹಾಕಿ ಪೊಸ್ಟ ಮಾಡಲಾಗಿದೆ. ಪೊಸ್ಟ ಮಾಡಿದ ತಕ್ಷಣ ರಾಜ್ಯದ ಜನರೇ ರಿಟ್ವೀಟ್ ಮಾಡುತ್ತಿದ್ದಾರೆ. ಈ ಹೇಳಿಕೆ ನೇರವಾಗಿ ಪರಿವಾರ ಪಕ್ಷಕ್ಕೆ ಸೆಡ್ಡು ಹೊಡೆದಿದೆ.
ಪೊಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರೂ ಕೂಡಾ ಕೆಲವು ಫೊಟೊಗಳ ಸಮೇತ ಕೌಂಟರ್ ಕೊಡುತ್ತಿದ್ದಾರೆ. ಅದರೆ ಈ ಪೊಸ್ಟ್ ಎಲ್ಲಿಗೆ ಹೋಗಿ ನಿಲ್ಲುತ್ತೆ ಕಾದು ನೋಡಬೇಕು.