‘ಪ್ರೇಮಿಗಳ ದಿನ’ದಂದೇ ಮೂರು ಪ್ರೇಮಿಗಳ ಮೇಲೆ ಪೊಕ್ಸೊ ಪ್ರಕರಣ: ಹಿಂಡಲಗಾ ಜೈಲು ಪಾಲಾದ ಮುರು ಯುವಕರು.
ಬೆಳಗಾವಿ: ಪ್ರೇಮಿಗಳ ದಿನದಂದೇ ಪ್ರೇಮಿಗಳ ದಿನ ಆಚರಣೆ ಮಾಡಲು ಹೋಗಿ ಮೂವರು ಯುವಕರು ಜೈಲು ಪಾಲಾದ ಘಟನೆ ಜಿಲ್ಲೆಯ ರಾಯಬಾಗ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಠಾಣಾ ವ್ಯಾಪ್ತಿಯ ಕಂಕಣವಾಡಿಯ ಪಟ್ಟಣದಲ್ಲಿ ಮೂರು ಜನಾ ಹೈಸ್ಕೂಲ ಹುಡಗಿಯರು ಹಾಗೂ ಅದೇ ಪಟ್ಟಣದ ಮೂರು ಯುವಕರು ಪ್ರೇಮಿಗಳ ದಿನ ಮಾಡಲು ಎಲ್ಲರೂ ಕೂಡಿ ಕಾರಿನಲ್ಲಿ ಗೋಕಾಕ ತಾಲೂಕಿನ ದೂಪದಾಳ ಡ್ಯಾಂ ನಲ್ಲಿ ಗಾರ್ಡನಲ್ಲಿ ‘ಪ್ರೇಮಿಗಳ ದಿನ’ ಆಚರಿಸಿದ್ದಾರೆ.
ಆದರೆ, ಮಾಹಿತಿಯ ಪ್ರಕಾರ ಪ್ರೇಮಿಗಳ ದಿನಾಚರಣೆಯ ವಿಷಯ ತಿಳಿಯುತ್ತಿದ್ದಂತೆ ಮೂರು ಬಾಲೆಯರ ತಂದೆ-ತಾಯಿಗಳು ಎಲ್ಲರೂ ಕೂಡಿ ರಾಯಬಾಗ ಠಾಣೆಯಲ್ಲಿ ಶಾಲೆಗೆ ಹೋಗ್ತಿದ್ದ ಹುಡಗಿಯರನ್ನು ಕಿಡ್ನಾಪ್ ಹಾಗೂ ಅತ್ಯಾಚಾರ ಮಾಡಿದ್ದಾರೆಂದ ಪ್ರಕರಣದ ಕುರಿತು ದೂರು ನೀಡಿದ್ದು ರಾಯಬಾಗ ಪೊಲೀಸರು ಪೊಕ್ಸೊ ಹಾಗೂ ಕಿಡ್ನಾಪ್ ಪ್ರಕರಣ ದಾಖಲು ಮಾಡಿದ್ದಾರೆ.
ಪ್ರಕರಣವನ್ನು ದಾಕಲಿಸಿಕೊಂಡ ರಾಯಬಾಗ ಪೊಲೀಸರು ತನಿಖೆಯನ್ನು ಕೈಗಿತ್ತಿಕೊಂಡು ಮೂರು ಯುವ ಪ್ರೇಮಿಗಳನ್ನು ಜೈಲಿಗೆ ತಳಿದ್ದಾರೆ. ಪ್ರೇಮಿಗಳ ದಿನಾಚರಣೆ ಮಾಡಿದ ೩ ಯುವಕರು ಮಾತ್ರ ಈಗ ಹಿಂಡಲಗಾ ಜೈಲಲ್ಲಿ ಜೈಲಿನ ‘ಖಡಕ್ ರೊಟ್ಟಿ’ ತಿನ್ನುತ್ತಿದ್ದಾರೆ ಅಷ್ಟೇ.