ವಿಶ್ವ ಸಾಮಾಜಿಕ ನ್ಯಾಯ ದಿನ.
ಇಂದು ಜಾಗತಿಕ ಸಾಮಾಜಿಕ ನ್ಯಾಯ ದಿನ. ಈ ದಿನವನ್ನು ವಿಶ್ವ ಸಂಸ್ಥೆಯನ್ನೊಳಗೊಂಡಂತೆ ಜಾಗತಿಕವಾಗಿ ಎಲ್ಲ ಕಡೆ ವಿಶಿಷ್ಟವಾಗಿ ಆಚರಿಸಲಾಗುತ್ತದೆ.
ನಾವು, ನಮಗೆ ಶಾಂತಿ -ಸಹಬಾಳ್ವೆಯ ಬದುಕು ಬೇಕಾಗಿದ್ದರೆ ನಾವು ಸಾಮಾಜೀಕ ನ್ಯಾಯವನ್ನು ಎತ್ತಿ ಹಿಡಿಯಲೇಬೇಕಾಗುತ್ತದೆ. ಲಿಂಗ ಅಸಮಾನತೆ ಮತ್ತು ಬಣ್ಣ, ಜಾತಿ, ಧರ್ಮ, ಜನಾOಗ, ಪ್ರದೇಶದಂತ ಆಧಾರದಲ್ಲಿ ಇಂದಿಗೂ ತಾರತಮ್ಯಗಳು ಜೀವಂತವಿವೆ. ಇಂಥಹ ತಾರತಮ್ಯಗಳ ಜೊತೆ ವರ್ಗ ಆಧಾರಿತ ತಾರತಮ್ಯಗಳು ಸಹ ಬ್ರುಹದಾಕಾರವಾಗಿ ತಲೆಎತ್ತಿ ನಿಂತಿವೆ. ಹೀಗಾಗಿ ಅಸಮಾನ ಪರಿಸ್ಥಿತಿಯ ದುರ್ಲಾಭ ಪಡೆದ ಕೆಲವೇ ಕೆಲ ಬೆರಳೆಣಿಕೆಯ ಜನ ಪ್ರಪಂಚದ /ದೇಶದ ಮೇಲೆ ಪ್ರಾಭಲ್ಯ ಮೆರೆದಿದ್ದಾರೆ. ಇದರಿಂದಾಗಿ ಬಹುಪಾಲು ಜನ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇಂಥಹ ಸಂಕಷ್ಟಗಳಿಂದ ಅಮಾಯಕ ಜನತೆಯನ್ನು ಬಿಡುಗಡೆಗೊಳಿಸಬೇಕೆಂದರೆ ಮೊದಲು ಕೆಲವರ ಹತ್ತಿರವಿರುವ ಪ್ರಾಭಲ್ಯಗಳನ್ನೆಲ್ಲ ನಾಶಪಡಿಸಬೇಕು.
ನಾಶಪಡಿಸುವುದಕ್ಕೆ ನಾವು ರಕ್ತ ಕ್ರಾಂತಿ ಮಾಡಬೇಕಿಲ್ಲ. ಅಥವಾ ಯಾರನ್ನೂ ಕೊಲ್ಲಬೇಕಾಗಿಲ್ಲ. ಕೇವಲ ನಾವು ಮಾಡಬೇಕಾಗಿದ್ದೇಂದರೆ ಮಾನವ ಹಕ್ಕುಗಳನ್ನು ಮತ್ತು ಮೂಲ ಭೂತ ಹಕ್ಕುಗಳನ್ನು ಎಲ್ಲರಿಗೂ ದೊರಕಿಸಿಕೊಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.
ಪ್ರತಿಯೊಬ್ಬರು ಒಳ್ಳೆಯ ಬದುಕು ಕಟ್ಟಿಕೊಂಡು ಗೌರವಾನ್ವಿತವಾಗಿ ಬದುಕಲು ಅಗತ್ಯವಿರುವ ಹಕ್ಕುಗಳನ್ನು ಮತ್ತು ಅವಕಾಶಗಳನ್ನು ಕಲ್ಪಿಸಿಕೊಡುವ ಧ್ಯೆಯೋದ್ದೇಶವೇ ಈ ಸಾಮಾಜೀಕ ನ್ಯಾಯದ ಪರಿಕಲ್ಪನೆಯಲ್ಲಿ ಅಡಕವಾಗಿದೆ. ಎಲ್ಲರಿಗೂ ಆರೋಗ್ಯ, ಮನೆ, ಶಿಕ್ಷಣ, ಆಹಾರ ಮತ್ತು ಇತರ ಸಾಮಾಜೀಕ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಿಕೊಡುವುದಾಗಿದೆ. ಇದರಿಂದಾಗಿ ಎಲ್ಲರ ಉತ್ತಮ ಭವಿಷ್ಯವನ್ನು ರೂಪಿಸಿ ಉತ್ತಮ ಜಗತ್ತನ್ನಾಗಿಸುವುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂಥಹ ಮಾನವೀಯ ಕಾರ್ಯಗಳಿಗೆ ಕೆಲ ವ್ಯಕ್ತಿ ಮತ್ತು ಗುಂಪುಗಳಿಂದ ಬೆದರಿಕೆಗಳಿವೆ. ಆ ಬೆದರಿಕೆಗಳನ್ನು ಮೆಟ್ಟಿ ನಿಂತು ಸಾಮಾಜೀಕ ನ್ಯಾಯ ಸ್ಥಾಪಿಸುವಂತ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಏಕೇಂದರೆ “IF YOU WANT PEACE, CULTIVATE SOCIAL JUSTICE “
ಡಾ.ಗೌತಮ್ ಬನಸೋಡೆ.