ಆರ್.ಸಿ.ಯುನ ಬೆಳಗಾವಿಯಲ್ಲಿ ಅಮೃತಮತಿ ಚಲನ ಚಿತ್ರಕ್ಕೆ ಚಾಲನೆ.
ಬೆಳಗಾವಿ: ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಇಂದು ಡಾ ಬರಗೂರ ರಾಮಚಂದ್ರಪ್ಪ ನಿರ್ದೇಶನದ ಅಮೃತಮತಿ ಚಲನಚಿತ್ರಕ್ಕೆ ಹಂಗಾಮಿ ಉಪಕುಲಪತಿ ನಾಗನ್ನವರ ಇಂದು ಚಾಲನೆ ನೀಡಿದರು.
ಈ ಸಮಯದಲ್ಲಿ ಚಿಂತಕ ಡಾ. ಯಲ್ಲಪ್ಪ ಹಿಮ್ಮಡಿಯವರು ಹದಿಮೂರನೇಯ ಶತಮಾನದ ಕವಿ ಜನ್ನಕವಿಯ ಪೆನ್ನಿನಲ್ಲಿ ಮೂಡಿ ಬಂದ ಅಮೃತಮತಿಯ ಪಾತ್ರವನ್ನು ಸಿನೇಮಾಗೆ ಅಳವಡಿಸಿ, ಅದನ್ನು ಚೆನ್ನಾಗಿ ಮೂಡಿಬರುವಂತೆ ನಿರ್ದೇಶನ ಮಾಡಿದ್ದಾರೆ. ಅದೇ ಅಲ್ಲದೇ ಮೊದಲಿಂದಲೂ ನಿರ್ದೇಶಕ ಬರಗೂರ ಇವರು ನಿರ್ಲಕ್ಷಕ್ಕೆ ಒಳಗಾದವರ ಬಗ್ಗೆ ಬರೆದಿದ್ದು ಮತ್ತು ಚಲನ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಅದರಲ್ಲಿ ವಿಶೇಷ ವಾಗಿ ಮಹಿಳೆಯ ಪರವಾಗಿಯೇ ಜಾಸ್ತೀನೇ ಇವೆ ಅವುಗಳಲ್ಲಿ ತಾಯಿ, ಕಸ್ತೂರಿ ಬಾ ಪ್ರಾಮುಖ್ಯತೆ ಪಡೆದಿವೆ.
ವಿವಿಯಲ್ಲಿ “ಯೋಜನೆ ಮೇಲ್ವಿಚಾರಣೆ ಮತ್ತು ಮೌಲ್ಯ ಮಾಪನ ಮಂಡಳಿ (PMEB) ಆಶ್ರಯದಲ್ಲಿ ಆಯೋಜಿಸಿದ್ದ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ “ಅಮೃತಮತಿ”ಚಲನ ಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಕುಲಪತಿಗಳಾದ ಡಾ. ವಿಜಯ್ ನಾಗನ್ನವರ ಅವರು ಚಾಲನೆ ನೀಡಿದರು.
ಈ ಸಮಯದಲ್ಲಿ ಚಿಂತಕ ಡಾ ವಾಯ್ ಬಿ ಹಿಮ್ಮಡಿ, PMEB ನಿರ್ದೇಶಕರಾದ ಡಾ. ಅಶೋಕ ಡಿಸೋಜಾ, ಡಾ. ಪಿ ನಾಗರಾಜ್, ಡಾ. ಕವಿತಾ ಕುಸುಗಲ್ ಇತರರು ವೇದಿಕೆ ಮೇಲೆ ಇದ್ದರು.