Notice: Function _load_textdomain_just_in_time was called incorrectly. Translation loading for the loginizer domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home2/suvarnagiritimes/public_html/wp-includes/functions.php on line 6114
“ಮುಸ್ಲಿಮ್ V/s ಕಮ್ಯುನಿಸಮ್ “ಮುಸ್ಲಿಮ್ ಬಂದುಗಳಿಗಾಗಿ…!? - suvarna giri times
ಅಂಕಣಸುವರ್ಣ ಗಿರಿ ಟೈಮ್ಸ್

“ಮುಸ್ಲಿಮ್ V/s ಕಮ್ಯುನಿಸಮ್ “ಮುಸ್ಲಿಮ್ ಬಂದುಗಳಿಗಾಗಿ…!?

ನಿನ್ನೆ ನನ್ನ ಮುಸ್ಲಿಮ್ ಬಂದುವೊಬ್ಬ ನನ್ನ State dalit thinkers forum ಎಂಬ group ಗೆ ಒಂದು ಮಾಹಿತಿ ಕಳುಹಿಸಿದ್ದ. ಅದು ಸ್ವತಂತ್ರ ಭಾರತದ ರಾಜ್ಯಾಧಿಕಾರದಲ್ಲಿರುವ ಮುಸ್ಲಿಮರ ಚಿತ್ರಣ ತೋರಿಸುವಂತಿತ್ತು. ಮತ್ತು ಈ ದೇಶದ ಸಂಸತ್ತಿನಲ್ಲಿ ಮುಸ್ಲಿಮರ ಜನಸಂಖ್ಯೆಗನುಗುಣವಾಗಿ ಸ್ಥಾನಗಳು ಸಿಕ್ಕಿಲ್ಲವೆOಬುದನ್ನು ತೋರಿಸಲು ನಿಖರ ಅಂಕಿ -ಸಂಖ್ಯೆಗಳನ್ನೊಳಗೊಂಡಿದ್ದ ಆ ಮಾಹಿತಿಯನ್ನು ಹಂಚಿಕೊಂಡಿದ್ದರು.

ನಾನು ನೇರವಾಗಿ ಹೇಳಬೇಕೆOದರೆ ಮುಸ್ಲಿಮರ ಈ ಪರಿಸ್ಥಿತಿಗೆ ಕಮ್ಯುನಿಸಮ್ ಕಾರಣವೆಂದು ಹೇಳುತ್ತೇನೆ. ಏಕೆಂದರೆ ಈ ದೇಶದ ಮುಸ್ಲಿಮರು ಹೆಚ್ಚಿರುವ ಕಡೆಗಳಲ್ಲೆಲ್ಲ 30-40 ವರ್ಷಗಳವರೆಗೆ ಕಮ್ಯುನಿಸ್ಟ್ ಸರ್ಕಾರಗಳಿವೆ. ಆದರೆ ಒಬ್ಬೇ ಒಬ್ಬ ಮುಸ್ಲಿಮನನ್ನು ಮುಖ್ಯಮಂತ್ರಿ ಮಾಡಲಿಲ್ಲ. ಸಹಜವಾಗಿ ವಿಸ್ವಾಸಕ್ಕೆ ತೆಗೆದುಕೊಳ್ಳಲು ಮತ್ತು ಕೈಬಿಟ್ಟಾರೆOಬ ಭಯದಿಂದ ಕೆಲವೊOದಿಷ್ಟು ಸೌಲತ್ತುಗಳನ್ನು ಕೊಟ್ಟಿರುತ್ತಾರೆ. ಅದನ್ನೇ ಹೇಳಿಕೊಂಡು ತಿರುಗುವುದರಲ್ಲಿ ಅರ್ಥವಿಲ್ಲ. ಈ ಸೌಲಭ್ಯಗನ್ನು ಒತ್ತಟ್ಟಿಗಿಟ್ಟು ಅವರ ಬದುಕಿನ ಮೇಲೆ ಹೇಗೆ ದುಸ್ಪರಿನಾಮ ಬೀರುತ್ತದೆಂದು ಹೇಳುತ್ತೇನೆ.

ಮುಖ್ಯವಾಗಿ ಕಮ್ಯುನಿಸ್ಟ್ ಸಿದ್ದಾಂತ ಬಡವ ಮತ್ತು ಶ್ರೀಮಂತ ಎಂದು ಎರಡು ವರ್ಗಗಳನ್ನು ಸೃಷ್ಟಿಸುತ್ತದೆ. ಇನ್ನು ಧರ್ಮವನ್ನು ಅಪೀಮುಗೆ ಹೋಲಿಸಿ ಧರ್ಮದ ಅಸ್ಥಿತ್ವವನ್ನೇ ನಾಶಮಾಡಲು ನೋಡುತ್ತದೆ. ಇವೆರಡರ ಮೇಲೆ ನಿಂತ ಆ ಸಿದ್ದಾOತವನ್ನು ಭಾರತೀಯ ಮುಸ್ಲಿಮರು ಹೇಗೆ ಒಪ್ಪಿಕೊOಡು ಬಂದರೆOಬುದೇ ಆಶ್ಚರ್ಯ ! ಸೋಜಿಗದ ವಿಷಯ !!

ಮುಸ್ಲಿಮರು ಒಪ್ಪಿಕೊಳ್ಳುವುದಾದರೆ ನನ್ನ ಎರಡು ವಿಚಾರಗಳತ್ತ ಸ್ವಲ್ಪ ಗಮನಹರಿಸಿ. ಅದು;
1) A) ಬಡವ
B) ಶ್ರೀಮಂತ ಹೀಗೆ ಮುಸ್ಲಿಮರಲ್ಲಿಯೇ ಎರಡು ಗುಂಪುಗಳನ್ನು ಸೃಷ್ಟಿಸಲು ಸಾಧ್ಯವಿದೆಯೇ ? ಸಾದ್ಯವಿಲ್ಲದಿದ್ದಾಗ್ಯೂ ಸಿದ್ದಾಂತದ ಹೆಸರಿನಲ್ಲಿ ಮುಸ್ಲಿಮರಲ್ಲಿಯೇ ಎರಡು ಗುಂಪುಗಳನ್ನು ಸೃಷ್ಟಿಸಿ ಮುಸ್ಲಿಮರ ಏಕತೆಯನ್ನು ಒಡೆಯುವುದು. ಇದು ಭಾರತದ ಕಮ್ಯುನಿಸ್ಟ್ ನಾಯಕರ ಉದ್ದೇಶ !

2) ವರ್ಗ ಆಧಾರಿತ ಮತು ಧರ್ಮದ ನಿಷ್ಟೆಗೆ ವಿರುದ್ದವಾದ ಕಮ್ಯುನಿಸ್ಟ್ ಸಿದ್ದಾಂತ ಮುಸ್ಲಿಮರ ಒಂದು ವರ್ಗವನ್ನು ತನ್ನದೇ ಧರ್ಮದ ನಿಷ್ಟೆಯಿಂದ ದೂರ ಉಳಿಯುವಂತೆ ಮಾಡುವುದು ! ಇವೆಲ್ಲ ಸಂಚುಗಳಿಗೆ ಬಲಿಯಾಗಿದ್ದರಿOದ ಮುಸ್ಲಿಮ್ ಒಂದು ರಾಜಕೀಯ ಶಕ್ತಿಯಾಗಿ ಬೆಳೆಯಲಿಲ್ಲ. ಕನಿಷ್ಠ ಮಟ್ಟದ ಕೂಗೂ ಇಲ್ಲ.

ಹೈದರಾಬಾದದಲ್ಲಿರುವ ಒವೈಸಿ ಬ್ರದರ್ಸ್ ಮತ್ತು ಉತ್ತರ ಪ್ರದೇಶದಲ್ಲಿರುವ ಸಮಾಜವಾದಿ ಪಕ್ಷದ ಆಜಮ್ ಖಾನ್ ಅಬ್ಬರಿಸುವಂತ ಶಕ್ತಿ ಕಮ್ಯುನಿಸ್ಟ್ ರಾಜ್ಯಗಳಲ್ಲೆಕಿಲ್ಲ !? ಕನಿಷ್ಠ ಮಟ್ಟದ ಕೂಗೂ ಇಲ್ಲದ ಪರಿಸ್ಥಿತಿ ನೋಡುತ್ತಿದ್ದೆವೆಂದರೆ ಎನಿದರರ್ಥ ? ಮುಸ್ಲಿಮ್ ಸೋದರರು ವಿಚಾರಮಾಡಬೇಕಾಗಿದೆ.

ಡಾ.ಗೌತಮ್ ಬನಸೋಡೆ.

Related Articles

Leave a Reply

Your email address will not be published. Required fields are marked *

Back to top button