ಬೆಳಗಾವಿಸುವರ್ಣ ಗಿರಿ ಟೈಮ್ಸ್
ಅಂಗನವಾಡಿ ಸಹಾಯಕಿಯ ಮೇಲೆ ಮಾರಣಾಂತಿಕ ಹಲ್ಲೆ !!
ಬೆಳಗಾವಿ : ಅಂಗನವಾಡಿಯ ಮಕ್ಕಳು ಪಕ್ಕದ ಮನೆಯವರ ಆವರಣದಲ್ಲಿದ್ದ ಹೂ ಕಿತ್ತ ಕಾರಣಕ್ಕೆ ಅಂಗನವಾಡಿ ಸಹಾಯಕಿಯ ಮೂಗು ಕತ್ತರಿಸಿದ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುಗಂಧಾ ಮೋರೆ(50) ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಮಹಿಳೆ. ಜ.1ರಂದು ಅಂಗನವಾಡಿ ಕೇಂದ್ರದ ಮುಂದೆ ಘಟನೆ ನಡೆದಿದ್ದು, ಕಲ್ಯಾಣಿ ಮೋರೆ ಎಂಬಾತನ ಮನೆಯ ಮುಂದಿನ ಹೂ ಕಿತ್ತ ಆರೋಪದಲ್ಲಿ ಮಹಿಳೆಯ ಮೂಗು ಕತ್ತರಿಸಿದ್ದಾರೆ. ಮೂಗು ಕಟ್ ಆಗಿ ಶ್ವಾಸಕೋಶದಲ್ಲಿ ರಕ್ತ ಹೋಗಿ ಸಾವು ಬದುಕಿನ ಮಧ್ಯೆ ಮಹಿಳೆ ಹೋರಾಡುತ್ತಿದ್ದಾಳೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.