ತಮಿಳುನಾಡುಸುವರ್ಣ ಗಿರಿ ಟೈಮ್ಸ್

ತಮಿಳುನಾಡು ಮಹಿಳೆ ಹಿಂದಿ ಗೊತ್ತಿಲ್ಲ ಅಂದಿದ್ದಕ್ಕೆ CISF ಸಿಬ್ಬಂದಿ ಅಪಹಾಸ್ಯ: ಸಿಎಂ ಎಂ.ಕೆ‌ ಸ್ಟಾಲಿನ್ ಕೆಂಡ

ತಮಿಳುನಾಡು: ತಮಿಳುನಾಡು ಮೂಲದ ಮಹಿಳೆ ಹಿಂದಿ ಗೊತ್ತಿಲ್ಲ ಅಂದಿದ್ದಕ್ಕೆ CISF ಸಿಬ್ಬಂದಿ ಅಪಹಾಸ್ಯ ಮಾಡಿರೋ ಘಟನೆ ಗೋವಾದ ಡಾಬೊಲಿಮ್‌ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಈ ಬಗ್ಗೆ ಕೆಂಡವಾಗಿರೋ ತಮಿಳುನಾಡು ಸಿಎಂ ಎಂ.ಕೆ‌ ಸ್ಟಾಲಿನ್ ಇದು ಕೇಂದ್ರ ಸರ್ಕಾರದ ವ್ಯವಸ್ಥಿತವಾದ ಹಿಂದಿ ಹೇರಿಕೆಯನ್ನ ತೋರಿಸುತ್ತೆ ಅಂತ ಕಿಡಿಕಾರಿದ್ದಾರೆ.

ಶರ್ಮಿಳಾ ರಾಜಶೇಖರ್ ಅನ್ನೋ‌ ಮಹಿಳೆಗೆ ಗೋವಾ ಏರ್‌ಪೋರ್ಟ್‌ನಲ್ಲಿದ್ದ CISF ಅಧಿಕಾರಿಗಳು ತಪಾಸಣೆ ವೇಳೆ ಹಿಂದಿಯಲ್ಲಿ ಸೂಚನೆ ನೀಡಿದ್ದಾರೆ. ನನಗೆ ಹಿಂದಿ ಗೊತ್ತಿಲ್ಲ ಅಂತ ಶರ್ಮಿಳ ಹೇಳಿದ್ದಾರೆ. ಆಗ ಅವರನ್ನ ಅಪಹಾಸ್ಯ ಮಾಡಿದ ಅಧಿಕಾರಿಗಳು, ʻತಮಿಳುನಾಡು ಭಾರತದಲ್ಲಿದೆ. ನೀನು ರಾಷ್ಟ್ರಭಾಷೆ ಹಿಂದಿ ಕಲಿʼ ಅಂತ ಲೇವಡಿ ಮಾಡಿದ್ದಾರೆ. ಈ ಬಗ್ಗೆ ಶರ್ಮಿಳಾ ಏರ್‌ಪೋರ್ಟ್‌ನಲ್ಲಿದ್ದ ಕುಂದು ಕೊರತೆ ಅಧಿಕಾರಿಗಳ ಬಳಿ ಕಂಪ್ಲೈಂಟ್‌ ನೀಡಿರೋದಾಗಿ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button