ಯಾದಗಿರಿಸುವರ್ಣ ಗಿರಿ ಟೈಮ್ಸ್
KSRTC ಬಸ್ಸಿನಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ !!

ಶಹಾಪುರ: ಚಲಿಸುತ್ತಿದ್ದ ಬಸ್ಸಿನಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಶಹಾಪುರದಲ್ಲಿ ನಡೆದಿದೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಾರ್ಗ ಮಧ್ಯೆದಲ್ಲಿಯೇ ಬಸ್ಸಿನಲ್ಲಿದ್ದ ಮಹಿಳಾ ಪ್ರಯಾಣಿಕರೇ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಬಸ್ಸಿನಲ್ಲಿರುವ ಪುರುಷರ ಪ್ರಯಾಣಿಕರನ್ನು ಕೆಳಗಿಳಿಸಿ ಹೆರಿಗೆಗೆ ಸಹಕರಿಸಿದ್ದಾರೆ.
ಹೆರಿಗೆ ಸಮಯದಲ್ಲಿ ಬಾಣಂತಿಯ ಹತ್ತಿರ ಯಾವುದೇ ಬಟ್ಟೆಗಳು ಇಲ್ಲದ ಕಾರಣ ಪುರುಷ ಪ್ರಯಾಣಿಕರೋಬ್ಬರು ತಮ್ಮ ಹೊಸ ಟವೆಲ್ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ತಕ್ಷಣ ಬಾಣಂತಿ- ಮಗುವನ್ನು ಶಹಪೂರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರ ಪ್ರದೇಶ ಮೂಲದ ಬಲೂನ್ ಮಾರಾಟಗಾರರಾದ ಅಜಯ್ ಹಾಗೂ ಪಿಂಕಿ ದಂಪತಿಗೆ ಈ ಮಗು ಜನಿಸಿದೆ.
ತಕ್ಷಣ ಚಾಲಕ ನೀಲಕಂಠ ಸ್ವಾಮಿ, ಕಂಡಕ್ಟರ್ ಖೆಮುನಾಯಕ್ ಅವರ ನೆರವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.