ಬೆಳಗಾವಿಸುವರ್ಣ ಗಿರಿ ಟೈಮ್ಸ್

ಕಾಕತಿ ಪಿಐ ವಿಜಯಕುಮಾರ ಸಿನ್ನೂರ ಅಮಾನತ್ತು !!

ಬೆಳಗಾವಿ: ಕಾಕತಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿನ ಹೊಸವಂಟಮೂರಿ ಗ್ರಾಮದಲ್ಲಿ ಮಹಿಳೆಯೊಂದಿಗೆ ನಡೆದ ಅಮಾನವೀಯ ಘಟನೆಯಲ್ಲಿ ಕಾಕತಿ ಪಿಐ ವಿಜಯಕುಮಾರ ಸಿನ್ನೂರ ಒಬ್ಬ ಪೊಲೀಸ್ ಅಧಿಕಾರಿಯಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳದೆ, ಉದ್ದೇಶಪೂರ್ವಕವಾಗಿ ಬೇಜವಾಬ್ದಾರಿ ತೋರಿಸಿದ್ದಕ್ಕೆ ಇಂದು ಅವರನ್ನು ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಸೇವೆಯಿಂದ ಅಮಾನತ್ತು ಮಾಡಲಾಗಿದೆ.

ಈ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ಕೆಲಸ ಮಾಡಿದ್ದರೆ ಈ ಪ್ರಕರಣ ಇಷ್ಟೊಂದು ದೊಡ್ಡದಾಗಿ ಆಗುತ್ತಿರಲಿಲ್ಲ ಎಂದು ಪೊಲೀಸ್‌ ಇಲಾಖೆಗೆ ಹೈಕೋರ್ಟ್‌ ಚಾಟಿ ಬಿಸಿ ಅಧಿಕಾರಿಯ ಕರ್ತವ್ಯಲೋಪದ ಬಗ್ಗೆ ವರದಿ ಕೇಳಿತ್ತು. ಇದರಿಂದಾಗಿ ಇಲಾಖೆಗೆ ಕಳಂಕ ಬಂದ ಹಿನ್ನಲೆಯಲ್ಲಿ ಉದ್ದೇಶ ಪೂರ್ವಕವಾಗಿ ಬೆಜವಾಬ್ದಾರಿ ತೋರಿದ್ದ ಕಾಕತಿ ಪಿಐ ಸಿನ್ನೂರ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button