ಮಧ್ಯಪ್ರದೇಶಸುವರ್ಣ ಗಿರಿ ಟೈಮ್ಸ್
ಭ್ರಾಹ್ಮಣರನ್ನು ‘ಬಡೆ ಪಪ್ಪಾ’ ಎಂದು ಕರೆಯದಿದ್ದಕ್ಕೆ ಮೂರು ದಲೀತರಿಗೆ ತಳಿತ.
ಮೊರೆನಾ: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನೈತಿಕ ಪೊಲೀಸಗಿರಿ ನಡೆದಿದ್ದು ಭ್ರಾಹ್ಮಣರನ್ನು ಬಡೆ ಪಪ್ಪಾ ಎಂದು ಕರೆಯದಿದ್ದಕ್ಕೆ ಮೂರು ಜನ ದಲೀತ ಯುವಕರಿಗೆ ತಳಿಸಿದ ಘಟನೆ ನಡೆದಿದೆ.
ಮಹುವಾ ಠಾಣೆಯ ಕಿಸ್ರೊಲಿ ಹಳ್ಳಿಯಲ್ಲಿ ಮೇಲ್ವರ್ಗದ ವಿವೇಕ ಶರ್ಮಾ, ವಿಶಾಲ ಶರ್ಮಾ, ಪವನ್ ಖುಡಸಿಯಾ ಹಾಗೂ ಜೀತು ಎಂಬುವರು ಕೂಡಿಕೊಂಡು ಮೂರು ಜನ ದಲೀತ ಯುವಕರನ್ನು ಬಡೆಪಪ್ಪಾ ಎಂದು ಕರೆಯದಿದ್ದಾಗ ಆ ಮೂವರು ದಲೀತರನ್ನು ಜೀಪಿನ ಮುಂದೆ ಕೂಡ್ರಿಸಿ ಹೊಡೆದಿದ್ದಾರೆ.
ಘಟನೆ ಸಾಮಾಜಿಕ ಜಾಲತಾಂಗಳಲ್ಲಿ ವೈರಲ್ ಆಗುತ್ತಿದ್ದಂತೆ ಘಟನೆ ಸ್ಥಳಕ್ಕೆ ಭೆಟ್ಟಿ ನೀಡಿ ಮೇಲ್ವರ್ಗದ ಕಿಡಿಗೇಡಿಗಳಾದ ವಿವೇಕ ಶರ್ಮಾ, ವಿಶಾಲ ಶರ್ಮಾ, ಪವನ್ ಖುಡಸಿಯಾ ಹಾಗೂ ಜೀತು ಎಂಬುವರನ್ನು ಬಂದಿಸಿದ್ದು ಇ ಕುರಿತು ಜಿಲ್ಲೆಯ ಎಸ್ಪಿ ಬಂದನದ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.