Notice: Function _load_textdomain_just_in_time was called incorrectly. Translation loading for the loginizer domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home2/suvarnagiritimes/public_html/wp-includes/functions.php on line 6114
ಇಂದು ಡಿಸೆಂಬರ್ 10 ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ ವಿಶ್ವದೆಲ್ಲೆಡೆ ಆಚರಣೆ !! - suvarna giri times
ಅಂಕಣಸುವರ್ಣ ಗಿರಿ ಟೈಮ್ಸ್

ಇಂದು ಡಿಸೆಂಬರ್ 10 ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ ವಿಶ್ವದೆಲ್ಲೆಡೆ ಆಚರಣೆ !!

“All human beings are born free and equal in dignity and rights “ಹೀಗೆ ಕಲಮು-1 ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ…
ಒಟ್ಟು 30 ಕಲಮುಗಳಲ್ಲಿ ಜಾಗತಿಕ ಮೂಲಭೂತ ಹಕ್ಕುಗಳನ್ನು ಖಾತ್ರಿಪಡಿಸಿ ಯಾರೊಬ್ಬರು ಸಹ ಧರ್ಮ,ಜಾತಿ,ಲಿಂಗ,ಪ್ರದೇಶ,ಬಣ್ಣ,ಅಂತಸ್ತು, ಜನಾಂಗ ಇತ್ಯಾದಿ ಆಧಾರದಲ್ಲಿ ತಾರತಮ್ಯಕ್ಕೊಳಗಾಗದಂತೆ ರಕ್ಷಣೆ ನೀಡುವ ಮೂಲೊದ್ದೇಶ ಹೊಂದಿದೆ.

ಈ ವಿಶ್ವ ಮಾನವ ಹಕ್ಕುಗಳ ಘೋಷಣೆ ( Universal Declaration of Human Rights)1948 ರ ಮೂಲ ಉದ್ದೇಶ ಮತ್ತು ಗುರಿ ಎಂದರೆ ಮಾನವ ಜನಾಂಗವನ್ನು ಬ್ರಾತ್ರೃತ್ವದಡಿಯಲ್ಲಿ ಒಂದುಗೂಡಿಸುವುದಾಗಿದೆ.ಈ ತಳಹದಿಯಲ್ಲಿ ನೈಸರ್ಗಿಕವಾಗಿ ಪ್ರದತ್ತವಾದ ಹಕ್ಕುಗಳನ್ನು ಯಾವುದೇ ನಿರ್ಬಂಧವಿಲ್ಲದೆ ವ್ಯಕ್ತಿಗತವಾಗಿ ರಕ್ಷಣೆ ಪಡೆದು ಎಲ್ಲರೂ ಗೌರವಾನ್ವಿತವಾಗಿ ಬದುಕುವುದು.

ಮಾನವ ಹಕ್ಕುಗಳ ಘೋಷಣೆ ಒಳಗೊಂಡಿರುವ ಈ ಉದಾತ್ತ-ದ್ಯೆಯೊದ್ದೇಶಗಳನ್ನು ರಚಿಸಿದ (Drafters) ಮಹನಿಯರಿಗೆ (ಫೋಟೋದಲ್ಲಿರುವವರು) ನಮಿಸುತ್ತ ಹಾಗೂ ಇಂತಹ ಒಂದು ಮಹಾನ್ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲರನ್ನೂ ನೆನೆಯುತ್ತ, ನಾವೆಲ್ಲ ಮಾನವ ಹಕ್ಕು ಆಂದೊಲನದಲ್ಲಿ( Human rights MOVEMENT) ಪಾಲ್ಗೊಳ್ಳುವ ದಿಕ್ಕಿನಲ್ಲಿ ಯೋಚಿಸುವಂತಾಗಬೇಕೆಂದು ಕರೆಕೊಡುತ್ತಿದ್ದೇನೆ.

ಜಾಗತೀಕ ಮಾನವ ಹಕ್ಕುಗಳು

1)ಸಮಾನತೆ ಹಕ್ಕು
2)ತಾರತಮ್ಯದಿಂದ ಮುಕ್ತಿ (ಜಾತಿ,ಧರ್ಮ,ವರ್ಣ,ಲಿಂಗ,ಭಾಷೆ,ಪ್ರದೇಶ,ದೇಶ ಇತ್ಯಾದಿ
3)ಯಾವುದೇ ರೀತಿಯ ಅಡೆತಡೆಗಳಿಲ್ಲದಂತೆ ಬದುಕುವ ಹಕ್ಕು )
4)ಗುಲಾಮ ಮತ್ತು ಜೀತ ಪದ್ದತಿಯಂತವುಗಳ ನಿರ್ಮೂಲನ.
5)ಚಿತ್ರಹಿಂಶೆ ಮತ್ತು ಘನತೆ ಕುಂದಿಸುವOತ ಕೆಲಸಗಳನ್ನು ಮಟ್ಟಹಾಕಲು ನಿರ್ದೇಶನ
6)ವ್ಯಕ್ತಿಯೆಂದು ಕಾನೂನಿನ ಮುಂದೆ ಗುರುತಿಸಿಕೊಳ್ಳುವ ಹಕ್ಕು.
7)ಕಾನೂನಿನ ಮುಂದೆ ಸಮಾನತೆ.
8)ಪರಿಹಾರದ ಹಕ್ಕು.
9)ನಿರಂಕುಶ ಬOದನ ಮತ್ತು ಗಡೀಪಾರುಗಳOತವುಗಳನ್ನು ಮಾಡತಕ್ಕದ್ದಲ್ಲ.
10)ನಿಷ್ಪಕ್ಷಪಾತವಾದ ಸರಿಯಾದ ವಿಚಾರಣೆಗೋಳಪಡುವ ಹಕ್ಕು.
11)ಆರೋಪ ಸಾಬೀತಾಗುವವರೆಗೆ ನಿರ್ದೋಷಿ ಎಂದೇ ಪರಿಗಣಿಸಬೇಕು.
12)ಕಟುಂಬ,ಏಕಾಂತ ಮತ್ತು ವ್ಯವಹಾರಗಳಲ್ಲಿ ಇನ್ನೊಬ್ಬರ ಹಸ್ತಕ್ಷೇಪದಿಂದ ರಕ್ಷಣೆ ಪಡೆಯುವ ಹಕ್ಕು.
13)ಯಾವುದೇ ಅಡೆ -ತಡೆಯಿಲ್ಲದೆ ದೇಶ -ವಿದೇಶದಲ್ಲಿ ಸಂಚರಿಸುವ ಸ್ವಾತಂತ್ರ್ಯ.
14)ಕೆಲವೊಂದು ನಿರ್ಬಂಧದ ಹೊರತಾಗಿ ಅಭಿಯೋಗದಿಂದ ಇತರ ದೇಶಗಳಲ್ಲಿ ಆಶ್ರಯ ಮತ್ತು ರಕ್ಷಣೆ ಪಡೆದುಕೊಳ್ಳುವ ಹಕ್ಕು.
15)ರಾಷ್ಟ್ರೀಯತೆಯನ್ನು ಪಡೆದುಕೊಳ್ಳುವ ಹಕ್ಕು.
16)ತಮಗಿಷ್ಟ ಬಂದವರನ್ನು ವಿವಾಹ ಮಾಡಿಕೊಳ್ಳುವ ಹಕ್ಕು ಮತ್ತು ಕುಟುಂಬ ಹೊಂದಿ ದಾಂಪತ್ಯ ಜೀವನ ಸಾಗಿಸಲು ಸ್ವಾತಂತ್ರ್ಯ.
17)ಆಸ್ತಿ ಹೊಂದುವ ಹಕ್ಕು.
18)ಧರ್ಮ,ಆಚಾರ -ವಿಚಾರಗಳಲ್ಲಿ ಸ್ವಾತಂತ್ರ್ಯ.
19)ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಹಿತಿ ಕೇಳುವ,ಪಡೆಯುವ ಹಕ್ಕು.
20)ಸಂಘಟನೆ ಮತ್ತು ಸಭೆ ಸೇರುವ ಹಕ್ಕು.
21)ಮುಕ್ತ ಚುನಾವಣೆ ಮತ್ತು ಸರಕಾರದಲ್ಲಿ ಭಾಗಿಯಾಗುವ ಹಕ್ಕು.
22)ಸಾಮಾಜೀಕ ಭದ್ರತೆಯ ಹಕ್ಕು.
23)ಯಾವುದೇ ನಿರ್ಬಂಧವಿಲ್ಲದೆ ಕೆಲಸದ ಆಯ್ಕೆ ಮತ್ತು ವಾಣಿಜ್ಯ -ವ್ಯಾಪರಗಳಿಗೆ ಸOಬOದಿಸಿದ ಸಂಘಟನೆಗಳಲ್ಲಿ ಸೇರುವ ಹಕ್ಕು.
24)ವಿಶ್ರಾಂತಿ,ಕೆಲಸದ ಅವಧಿ ಮತ್ತು ಯೋಗ್ಯ ಸಂಬಳ ಹೋಂದುವ ಹಕ್ಕು.
25)ಘನತೆ,ಗೌರವದಿಂದ ಬದುಕುವ ಹಕ್ಕು
26)ಶಿಕ್ಷಣದ ಹಕ್ಕು.
27)ಸಮುದಾಯ/ಸಮಾಜದ ಸಾಂಶ್ಕ್ರುತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಹಕ್ಕು.
28)ಈ ಮೇಲಿನ ಹಕ್ಕುಗಳನ್ನು ಸಾಧಿಸಲು ಪ್ರತಿಯೊಬ್ಬರು ಹಕ್ಕುಳ್ಳವರಾಗಿರುತ್ತಾರೆ.
29)ನ್ಯಾಯಸಮ್ಮತವಾಗಿ ಎಲ್ಲರೂ ಬದುಕುವಂತಾಗಲು ಕೆಲವು ಇತಿಮಿತಿಗೊಳಪಡಬೇಕಾಗುತ್ತದೆ.ಅಂದರೆ ಪ್ರತಿಯೊಬ್ಬರು ಕೆಲ ಕರ್ತವ್ಯಗಳನ್ನು ನಿಭಾಯಿಸಬೇಕಾಗುತ್ತದೆ.ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಈ ಮೇಲಿನ ಹಕ್ಕುಗಳನ್ನು ಗೌರವಿಸಬೇಕು.
30)ಈ ಮಾನವ ಹಕ್ಕುಗಳು ಪ್ರತಿ ವ್ಯಕ್ತಿಗೆ ಅತ್ಯಗತ್ಯವಾಗಿರುವುದರಿOದ ನೀಡಲಾಗಿರುತ್ತದೆ.ಇವುಗಳಲ್ಲಿ ರಾಜ್ಯ /ದೇಶ ಹಸ್ತಕ್ಷೇಪಮಾಡುವಂತಿಲ್ಲ.

ಡಾ. ಗೌತಮ್ ಬನಸೋಡೆ.

Related Articles

Leave a Reply

Your email address will not be published. Required fields are marked *

Back to top button