ಕೊಪ್ಪಳಸುವರ್ಣ ಗಿರಿ ಟೈಮ್ಸ್
ಶಾರ್ಟ್ ಸೆರ್ಕ್ಯೂಟ್‌ನಿಂದ ಜ್ಯುವೆಲ್ಲರಿ ಶಾಪ್ ಗೆ ಬೆಂಕಿ: ಚಿನ್ನಾಭರಣ ಸುಟ್ಟು ಕರಕಲು !!

ಕೊಪ್ಪಳ: ಶಾರ್ಟ್ ಸೆರ್ಕ್ಯೂಟ್‌ನಿಂದ ಜ್ಯುವೆಲ್ಲರಿ ಶಾಪ್ ಹೊತ್ತಿ ಉರಿದು ಅಪಾರ ಪ್ರಮಾಣದ ಚಿನ್ನಾಭರಣ ಸುಟ್ಟುಕರಕಲಾದ ಘಟನೆ ನಿನ್ನೆ ತಡರಾತ್ರಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಗಣೇಶ ಸರ್ಕಲ್ ಕೆಜೆಪಿ ಜ್ಯುವೆಲ್ಲರಿ ಶಾಪ್‌ನಲ್ಲಿ ನಡೆದಿದೆ.
ಮೂರು ಅಂತಸ್ತಿನ ಬಿಲ್ಡಿಂಗ್‌ಗೆ ವ್ಯಾಪಿಸಿದ ಬೆಂಕಿ. ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಕಟ್ಟಡ. ಜ್ಯೂವೆಲ್ಲರಿ ಶಾಪ್ ನಲ್ಲಿದ್ದ ಚಿನ್ನಾಭರಣ ಬೆಂಕಿಗಾಹುತಿಯಾಗಿದೆ.
ತಡರಾತ್ರಿ ಘಟನೆ ನಡೆದಿದ್ದರಿಂದ ಬಾರೀ ಅನಾಹುತವೊಂದು ತಪ್ಪಿದೆ. ಜನನಿಬಿಡ ಪ್ರದೇಶವಾಗಿರುವ ಗಣೇಶ ವೃತ್ತ ಯಾವಾಗಲೂ ಜನಸಂಚಾರ ಹೆಚ್ಚು ಇರುತ್ತದೆ. ಹಗಲು ವೇಳೆ ನಡೆದಿದ್ದರೆ ಇನ್ನಷ್ಟು ಅನಾಹುತ ಸಂಭವಿಸುತ್ತು.
ಸದ್ಯ ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನಗಳು ದೌಡು ಹಾಹಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿವೆ.