ಬೆಳಗಾವಿಸುವರ್ಣ ಗಿರಿ ಟೈಮ್ಸ್
ಚಿಕ್ಕಮಗಳೂರು ವಕೀಲನ ಮೇಲಿನ ಹಲ್ಲೆ ಪ್ರಕರಣ ಕ್ರಮಕ್ಕಾಗಿ ಒತ್ತಾಯ.

ಬೆಳಗಾವಿ: ಚಿಕ್ಕಮಗಳೂರು ಯುವ ವಕೀಲನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾಂವಿಯಲ್ಲಿ ಪೊಲೀಸರ ಮೇಲೆ ಕ್ರಮ ತಗೆದುಕೊಳ್ಳಲು ಜಿಲ್ಲಾಧಿಕಾರಿಗಳ ಮೂಲಕ ಮನವಿ ನೀಡಿದರು.
ಇಂದು ಬೆಳಗಾವಿಯಲ್ಲಿ ವಕೀಲರು ಹಿರಿಯ ವಕೀಲರಾದ ಎನ್ ಆರ್ ಲಾತೂರ, ಅನಂತ ಮಾಂಜ್ರೆಕರ್ ಮುಂದಾಳತ್ವದಲ್ಲಿ ತಪ್ಪಿತಸ್ಥ ಸಿಬ್ಬಂದಿ ಮೇಲೆ ಕ್ರಮ ತಗೆದುಕೊಳ್ಳಲು ಮನವಿ ನೀಡಿದರು.
ಇದೆ ಸಮಯದಲ್ಲಿ ವಕೀಲ ಸುರೇಂದ್ರ ಉಗಾರೆ ರಾಜ್ಯದಲ್ಲಿ ಇಂಥಹ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ, ಹೀಗಾಗಿ ಸರಕಾರ ವಕೀಲರಿಗಾಗಿ ವಕೀಲರ ರಕ್ಷಣಾ ಕಾಯಿದೆ ಜಾರಿಗೆ ತರಬೇಕು ಎಂದು ಒತ್ತಾಯ ಮಾಡಿದರು.
ಇ ಸಮಯದಲ್ಲಿ ಎನ್ ಆರ್ ಲಾತೂರ್, ಅನಂತ ಮಾಂಜ್ರೆಕರ ಬಾಳಕೃಷ್ನ ಕಾಂಬಳೆ, ಸುರೇಂದ್ರ ಉಗಾರೆ, ವಿನೋದ ಪಾಟೀಲ್, ಹೆಗ್ಗನ್ನವರ, ಮಲ್ಲಾಪೂರೆ ಹಾಗೂ ಇತರ ವಕೀಲರು ಹಾಜರಿದ್ದರು.