ತುಮಕೂರುಸುವರ್ಣ ಗಿರಿ ಟೈಮ್ಸ್
ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಗುಬ್ಬಿ: ತಾಲ್ಲೂಕಿನ ನಿಟ್ಟೂರಿನಲ್ಲಿ ಗುರುವಾರ ಇಬ್ಬರು ಮಕ್ಕಳೊಂದಿಗೆ ತಾಯಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
4 ವರ್ಷದ ಗಂಡು ಮಗು ಯದುನಾಯಕ್ ಹಾಗೂ 11 ತಿಂಗಳ ಹೆಣ್ಣು ಮಗು ಜತೆ ತಾಯಿ ವಿಜಯಲಕ್ಷ್ಮಿ (23) ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಬಂದಿದ್ದ ಅಗ್ನಿಶಾಮಕದಳದ ಸಿಬ್ಬಂದಿ, ಪೊಲೀಸರು ಶೋಧನೆ ನಡೆಸಿ ತಾಯಿ, ಹೆಣ್ಣು ಮಗುವಿನ ಶವ ಹೊರತೆಗೆದಿದ್ದಾರೆ. ಗಂಡು ಮಗುವಿನ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಒಂದು ವರ್ಷದ ಹಿಂದೆ ಪತಿ ನವೀನ್ ಅನಾರೋಗ್ಯದಿಂದ ಸಾವನ್ನಪ್ಪಿದ್ದ. ಈಗ 11 ತಿಂಗಳ ಮಗುವಿಗೂ ಶ್ವಾಸಕೋಶದ ಸಂಬಂಧಿ ಕಾಯಿಲೆ ಇದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ವಾಸಿಯಾಗಿರಲಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಶರಣಾಗುತ್ತಿದ್ದೇನೆ ಎಂದು ವಿಜಯಲಕ್ಷ್ಮಿ ಅವರು ಡೆತ್ನೋಟ್ನಲ್ಲಿ ಬರೆದಿದ್ದಾರೆ.