10 ತಿಂಗಳುಗಳಿಂದ ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ಧೂಳು ತಿನ್ನುತ್ತಿರುವ ರಾಯಬಾಗ ಮುನ್ಸಿಪಾಲಿಟಿಯ ತನಿಖಾ ಫೈಲ್ !!
ಬೆಳಗಾವಿ ಜಿಲ್ಲಾಧಿಕಾರಿಗಳ ತನಿಖಾ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲಾ ?
ಚಿಕ್ಕೋಡಿ: ರಾಯಬಾಗ ಪಟ್ಟಣ ಪಂಚಾಯತಿಯ ಅಕ್ರಮ ತನಿಖೆಗೆ ಸಂಬಂದಿಸಿದ ತನಿಖಾ ಫೈಲ್ ಒಂದು ಹತ್ತು ತಿಂಗಳುಗಳಿಂದ ಎಸಿ ಕಾರ್ಯಾಲಾಯದಲ್ಲಿ ಧೂಳು ತಿನ್ನುತ್ತಿದೆ ಎಂಬುದು ಬೆಳಕಿಗೆ ಬಂದಿದೆ.
ಅಕ್ರಮಗಳ ಗೂಡಾದ ರಾಯಬಾಗ ಪಟ್ಟಣ ಪಂಚಾಯತಿಯಲ್ಲಿ ಅಕ್ರಮ ನಡಿದಿದೆ ಹಾಗೂ ದಾಖಲಾತಿಗಳ ಸಮೇತ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸಾಮಾಜಿಕ ಹೊರಾಟಗಾರ ಮತ್ತು ವಕೀಲ ಸುರೇಂದ್ರ ಉಗಾರೆ ಯವರು ಮನವಿ ಮಾಡಿದ್ದರು. ನಂತರ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಹಾಗೂ ಬೆಳಗಾವಿ ಯೋಜನಾ ನಿರ್ದೇಶಕರಾದ ಡಾ. ಈಶ್ವರ್ ಉಳ್ಳಾಗಡ್ಡಿ ಇವರು ರಾಯಾಬಾಗ ಪಟ್ಟಣ ಪಂಚಾಯತಿಯ ಅಕ್ರಮವನ್ನು ಬೇರು ಸಮೇತ ಕಿತ್ತು ಹಾಕಲು ಚಿಕ್ಕೋಡಿಯ ಖಡಕ್ ಆಯ್.ಎ.ಎಸ್. ಅಧಿಕಾರಿ ಮಾಧವ ಗಿತ್ತೆ ಎಂಬುವರ ಮುಂದಾಳತ್ವದಲ್ಲಿ ಪಟ್ಟಣ ಪಂಚಾಯತಿಯ ಅಕ್ರಮದ ಬಗ್ಗೆ ತನಿಖೆ ತಂಡವನ್ನು ದಿನಾಂಕ 09/11/2022 ರಂದು ರಚಿಸಿದ್ದರು.
ಆದರೆ ಖಡಕ್ ಅಧಿಕಾರಿ ಖ್ಯಾತಿಯ ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಇವರು ಇದೂವರೆಗೂ ರಾಯಬಾಗದ ಕಡೆಗೆ ಮೂಖನೇ ತಿರುಗಿಸಿಲ್ಲಾ. ಹೀಗಾಗಿ ಅಕ್ರಮದ ಬಗ್ಗೆ ತನಿಖೆಗೆ ಹೋಗಬೇಕಾದ ಫೈಲ್ 10 ತಿಂಗುಳುಗಳಿಂದ ಫೈಲು ಕೇವಲ ಧೂಳು ತಿನ್ನುತ್ತಿದೆ.
ಈ ಕುರಿತು ಸಾಮಾಜಿಕ ಹೊರಾಟಗಾರ ಸುರೇಂದ್ರ ಉಗಾರೆ ಇವರು ಚಿಕ್ಕೋಡಿಗೆ ಬರುವಾಗ ಎಲ್ಲರೂ ಖಡಕ್ ಇರುತ್ತಾರೆ. ನಂತರ ಅವರೆಲ್ಲಾ ಖಡಕ್ ತನವನ್ನು ಕಳೆದುಕೊಳ್ಳುತ್ತಾರೆ. ಇಲ್ಲಿ ಬರುವ ಆಯ್ ಎ ಎಸ್. ಅಧಿಕಾರಿಗಳೆಲ್ಲಾ ಟ್ರೀನಿಗಳಾಗಿದ್ದಾರೆ. ಮುಸ್ಸೋರಿ ಯ ತರಬೇತಿ ಕೇಂದ್ರ ಬಿಟ್ಟ ತಕ್ಷಣ ಇಲ್ಲಿಗೆ ಬರುತ್ತಾರೆ. ಹೀಗಾಗಿ ಅವರಿಗೆ ಆಡಳಿತದ ನೈಯಾಪೈಸಾ ಅನುಭವವ ಇರುವದಿಲ್ಲಾ. ಒಂದೆರಡು ತಿಂಗಳು ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡಿ ನೇರವಾಗಿ ಉಪವಿಭಾಗಾಧಿಕಾರಿ ಆಗುತ್ತಾರೆ. ಇಂತಹ ಅಧಿಕಾರಿಗಳಿಗೆ ತನಿಖೆ ಅಂದ್ರೆನೆ ಗೊತ್ತಿರಲ್ಲಾ. ಇವರಿಗೆ ತನಿಖೆಯ ಮುಂದಾಳತ್ವ ವಹಿಸಿದ್ರೆ ಇನ್ನು ತನಿಖೆ ಎಲ್ಲಿಂದ ಮಾಡುತ್ತಾರೆ ? ಎನ್ನುತ್ತಾರೆ.
ಇನ್ನಾದರೂ ಬೆಳಗಾವಿ ಜಿಲ್ಲಾಧಿಕಾರಿಗಳು ಚಿಕ್ಕೋಡಿ ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ಕೇವಲ ಧೂಳು ತಿನ್ನುತ್ತಿರುವ ತನಿಖಾ ಫೈಲನ್ನು ಹೊರಗೆ ತಗೆಯಲು ಹೇಳುತ್ತಾರೆ ಅಥವಾ ಇಲ್ವಾ ಅನ್ನೊದು ಕಾದು ನೋಡಬೇಕು.