Notice: Function _load_textdomain_just_in_time was called incorrectly. Translation loading for the loginizer domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home2/suvarnagiritimes/public_html/wp-includes/functions.php on line 6114
ವಿಟಿಯು: ಈ ವರ್ಷದಿಂದ 3 ಪದವಿ ಹಾಗೂ 12 ಸ್ನಾತಕೋತ್ತರ ಆನ್‌ಲೈನ್‌ ನಲ್ಲಿ ಕೋರ್ಸ್‌ ಆರಂಭ. - suvarna giri times
ಬೆಳಗಾವಿಸುವರ್ಣ ಗಿರಿ ಟೈಮ್ಸ್

ವಿಟಿಯು: ಈ ವರ್ಷದಿಂದ 3 ಪದವಿ ಹಾಗೂ 12 ಸ್ನಾತಕೋತ್ತರ ಆನ್‌ಲೈನ್‌ ನಲ್ಲಿ ಕೋರ್ಸ್‌ ಆರಂಭ.

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ದಿಂದ ಇದೇ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ 3 ಪದವಿ ಮತ್ತು 12 ಸ್ನಾತಕೋತ್ತರ ಪದವಿ ಕೋರ್ಸ್‌ಗ ಳನ್ನು ಈ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗಿದ್ದು, ಸೆ.30ರೊಳಗೆ ಪ್ರವೇಶ ಪಡೆಯಬಹುದು’ ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಹಾಗೂ ವಿಶ್ವ ವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದಿಂದ ಅನುಮೋದನೆ ಪಡೆದುಕೊಳ್ಳಲಾಗಿದೆ. ಜಾಗತಿಕವಾಗಿ ಯಾವುದೇ ಪ್ರದೇಶದಿಂದ ಒಟ್ಟು 1.10 ಲಕ್ಷ ವಿದ್ಯಾರ್ಥಿಗಳನ್ನು ದಾಖಲಿಸಿ ಕೊಳ್ಳಲು ಅವಕಾಶವಿದೆ. ಎಂಜಿನಿಯರಿಂಗ್ ಹೊರತು ಪಡಿಸಿದ ಕೋರ್ಸ್‌ಗಳು ಇವಾಗಿವೆ’ ಎಂದು ಮಾಹಿತಿ ನೀಡಿದರು.

ಆನ್‌ಲೈನ್ ಶಿಕ್ಷಣಕ್ಕಾಗಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಇಂದಿನ ಕಲಿಯುವವರ ಅಗತ್ಯಗಳನ್ನು ಗುರುತಿಸಿ ಆನ್‌ಲೈನ್‌ ನಲ್ಲಿ ಕಲಿಕೆಗೆ ಮುಂದಾಗಿದ್ದೇವೆ. ವಿದ್ಯಾರ್ಥಿಗಳು ತಾವಿರುವ ಸ್ಥಳದಿಂದಲೇ ತಮ್ಮ ಶೈಕ್ಷಣಿಕ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಬಹುದು. ಪ್ರವೇಶದಿಂದ ಹಿಡಿದು ಪರೀಕ್ಷೆಗಳವರೆಗೆ ಎಲ್ಲ ಪ್ರಕ್ರಿಯೆಗಳೂ ಸಂಪೂರ್ಣವಾಗಿ ಅನ್‌ಲೈನ್‌ನಲ್ಲೇ ನಡೆಯಲಿವೆ. ಇದಕ್ಕೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಂಡಿದ್ದೇವೆ. ಶುಕ್ರವಾರದಿಂದಲೇ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.

ಸರ್ಕಾರಿ ತಾಂತ್ರಿಕ ವಿಶ್ವ ವಿದ್ಯಾಲಯಗಳ ಪೈಕಿ ವಿಟಿಯುಗೆ ಮಾತ್ರವೇ ಮೊದಲಿಗೆ ಅನುಮೋದನೆ ಪಡೆದುಕೊಂಡಿದೆ. ಖಾಸಗಿಗೆ ಹೋಲಿಸಿದರೆ ನಮ್ಮಲ್ಲಿ ಶುಲ್ಕ ಶೇ 70 ರಷ್ಟು ಕಡಿಮೆ ಇದೆ. ಉದ್ಯೋಗ ತರಬೇತಿ ಬಯಸಿದವರಿಗೆ ಆನ್‌ಲೈನ್‌ನಲ್ಲೇ ಒದಗಿಸಲಾಗುವುದು. https://onlinedegree.vtu.ac.in/ ಜಾಲತಾಣದ ಮೂಲಕ ಪ್ರವೇಶ ಪಡೆಯಬಹುದು ಎಂದರು.

ವಿಟಿಯು ಆನ್‌ಲೈನ್ ಶಿಕ್ಷಣದ ನಿರ್ದೇಶಕ ಟಿ.ಪಿ.ರೇಣುಕಮೂರ್ತಿ, ಉಪ ನಿರ್ದೇಶಕಿ ಪಿ.ಸಂಧ್ಯಾ, ಸಹಾಯಕ ನಿರ್ದೇಶಕ ಪಿ.ಕೆ.ಕುಮಾರ, ವಿಶೇಷ ಅಧಿಕಾರಿ ಪಿ. ಪ್ರಕೃತಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button