ಬೆಂಗಳೂರುಸುವರ್ಣ ಗಿರಿ ಟೈಮ್ಸ್

ತಹಶೀಲ್ದಾರ್ ವಿರುದ್ಧ ನ್ಯಾಯಾಂಗ ನಿಂದನೆ: ದೋಷಾರೋಪ ನಿಗದಿಗೆ ಹೈಕೋರ್ಟ್‌ ನಿರ್ಧಾರ.

ಬೆಂಗಳೂರು: ನ್ಯಾಯಾಲಯದ ಆದೇಶದ ಹೊರತಾಗಿ ಯೂ ಜಮೀನು ಮಾಲೀಕರಿಗೆ ಸಾಗುವಳಿ ಚೀಟಿ ಮಂಜೂರು ಮಾಡಲು ವಿಳಂಬ ಮಾಡಿರುವ ಬೆಂಗಳೂರು ಉತ್ತರ ಹೆಚ್ಚುವರಿ ತಾಲ್ಲೂಕಿನ (ಈಗ ಯಲಹಂಕ ತಾಲ್ಲೂಕು ) ತಹಶೀಲ್ದಾರ್ ವಿರುದ್ಧ ನ್ಯಾಯಾಂಗ ನಿಂದ ನೆಯ ದೋಷಾರೋಪ ನಿಗದಿಪಡಿಸಲು ಹೈಕೋರ್ಟ್‌ ನಿರ್ಧರಿಸಿದೆ.

ಸಾಗುವಳಿ ಚೀಟಿ ನೀಡಬೇಕೆಂಬ ಆದೇಶವನ್ನು ಪಾಲಿಸದ ತಹಶೀಲ್ದಾರ್ ವಿರುದ್ಧ ತಾರಹುಣಸೆ ಅಗ್ರಹಾರ ನಿವಾಸಿ ದೊಡ್ಡಣ್ಣ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾ ಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಶುಕ್ರವಾರ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಸಾಗುವಳಿ ಚೀಟಿ ಮಂಜೂರು ಕೋರಿ ಅರ್ಜಿದಾರರು ಮನವಿ ಸಲ್ಲಿಸಿದರೆ, ಅದನ್ನು ಕಾನೂನು ರೀತಿ ಪರಿಶೀಲಿಸಿ ತಹಶೀಲ್ದಾರ್ ಕ್ರಮ ಕೈಗೊಳ್ಳಲಿದ್ದಾರೆ ಎಂದು ನ್ಯಾಯ ಪೀಠಕ್ಕೆ ತಿಳಿಸಿದರು.

ಇದನ್ನು ಒಪ್ಪದ ನ್ಯಾಯಪೀಠ, 2005 ರಲ್ಲಿ ಸಾಗುವಳಿ ಚೀಟಿ ನೀಡುವ ತೀರ್ಮಾನವಾಗಿದೆ. ಅರ್ಜಿದಾರರು ಮನ ವಿಯನ್ನೂ ಕೊಟ್ಟಿದ್ದಾರೆ. ಸಾಗುವಳಿ ಚೀಟಿ ನೀಡಲು ಸಾಧ್ಯವಿಲ್ಲ ಎಂಬ ತಹಶೀಲ್ದಾರರ ಹಿಂಬರಹವನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ರದ್ದುಪಡಿಸಿ, ಎರಡು ತಿಂಗಳಲ್ಲಿ ಸಾಗುವಳಿ ಚೀಟಿ ಮಂಜೂರು ಮಾಡ ಬೇಕು ಎಂದು 2022ರ ಸೆಪ್ಟೆಂಬರ್ 28ರಂದು ನಿರ್ದೇ ಶಿಸಿತ್ತು. ಆದರೆ, ಆಧಾರರಹಿತ ತಾಂತ್ರಿಕ ನೆಪ ಮುಂದಿ ಟ್ಟುಕೊಂಡು ತಹಶೀಲ್ದಾರ್ ಸಾಗುವಳಿ ಚೀಟಿ ನೀಡಲು ವಿಳಂಬ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿತು.

ಈ ಪ್ರಕರಣದಲ್ಲಿ ತಹಶೀಲ್ದಾರ್‌ಗೆ ನ್ಯಾಯಾಲಯದ ಆದೇಶದ ಬಗ್ಗೆ ಗಂಭೀರತೆ ಇಲ್ಲದಿರುವುದು ಸ್ಪಷ್ಟವಾ ಗುತ್ತಿದೆ. ಆದ್ದರಿಂದ, ಮುಂದಿನ ವಿಚಾರಣೆ ವೇಳೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ದೋಷಾ ರೋಪ ನಿಗದಿಪಡಿಸಲಾಗುವುದು. ಆ ದಿನ ತಹಶೀಲ್ದಾರ್ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಎರಡು ವಾರ ಕಾಲ ಮುಂದೂಡಿತು.

Related Articles

Leave a Reply

Your email address will not be published. Required fields are marked *

Back to top button