ಗದಗಸುವರ್ಣ ಗಿರಿ ಟೈಮ್ಸ್

ಅಮಾನತುಗೊಂಡ 15 ದಿನಗಳಲ್ಲಿಯೇ ಮುಖ್ಯಾಧಿಕಾರಿ ಯಾಗಿ ಬಡ್ತಿ ಪಡೆದ ಗದಗ ನಗರಸಭೆ ಅಧಿಕಾರಿ.

ಗದಗ: ನಗರಸಭೆ ಕಂದಾಯ ಅಧಿಕಾರಿ ಯೊಬ್ಬರು ಸಸ್ಪೆಂಡ್ ಆದ 15 ದಿನಗಳಲ್ಲಿಯೇ ಮುಖ್ಯಾಧಿಕಾರಿ ಯಾಗಿ ಬಡ್ತಿ ಪಡೆದು ನೇಮಕ ಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಗದಗ ನಗರಸಭೆ ಕಂದಾಯ ಅಧಿಕಾರಿಯಾಗಿದ್ದ ಮಹೇಶ್ ಹಡಪದ ಎಂಬುವವರು ಜುಲೈ 25 ರಂದು ಸಸ್ಪೆಂಡ್ ಆಗಿದ್ದರು. ನಿಯಮ ಬಾಹಿರವಾಗಿ 1,063 ನಿವೇಶನಗಳಿಗೆ ಫಾರ್ಮ್ ನಂ.3 ವಿತರಿಸಿ ಕರ್ತವ್ಯ ಲೋಪವೆಸಗಿದ್ದ ಕಾರಣಕ್ಕೆ ಮಹೇಶ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಆದೇಶ ಹೊರಡಿಸಿದ್ದರು.

ಸಸ್ಪೆಂಡ್ ಆಗಿದ್ದ ಮಹೇಶ್ ಹಡಪದ ಈಗ ಬಾಗಲಕೋಟೆ ಜಿಲ್ಲೆಯ ಕೆರೂರ ಪಟ್ಟಣ ಪಂಚಾಯಿತಿಗೆ ಮುಖ್ಯಾಧಿಕಾರಿ ಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿ ಸಾರ್ವಜನಿಕರಿಗೆ ನಿವೇಶನ ಹಂಚಿದ್ದ ಅಧಿಕಾರಿಯನ್ನು ಅಮಾನತುಗೊಳಿಸಿದ ಬೆನ್ನಲೇ ಈಗ ಬಡ್ತಿ ನೀಡಿ ನಿಯೋಜನೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ ಎಂಬ ವಿಪಕ್ಷ ನಾಯಕರ ಆರೋಪಕ್ಕೆ ಮತ್ತಷ್ಟು ಬಲಬಂದಂತಾಗಿದೆ.

Related Articles

Leave a Reply

Your email address will not be published. Required fields are marked *

Back to top button