ರಾಯಬಾಗ ಪಟ್ಟಣ ಪಂಚಾಯತಿಯಲ್ಲಿ ಡಿ ಗ್ರುಫ್ ಹುದ್ಧೆಯ ಹೊರಗುತ್ತಿಗೆ ನೌಕರನ ದರ್ಬಾರ್ !!ಪೌರಾಡಳಿತ ನಿರ್ದೇಶನಾಲಯ ಹಾಗೂ ಯೋಜನಾ ನಿರ್ದೇಶಕರ ಆದೇಶ ಗಾಳಿಗೆ ತೂರಿದ ಮುಖ್ಯಾಧಿಕಾರಿ !?
ಬೆಳಗಾವಿ: ರಾಯಬಾಗ ಪಟ್ಟಣ ಪಂಚಾಯತಿಯು ಒಂದಿಲ್ಲೊಂದ ಹಗರಣ ಮಾಡುತ್ತಿದ್ದಂತೆಯೇ ಮತ್ತೊಂದು ಯಡವಟ್ಟು ಮಾಡಿದ್ದು ತಡಮಾಡಿ ಬೆಳಕಿಗೆ ಬಂದಿದೆ. ಅದು ಎನೆಂದರೆ ‘ಡಿ’ ಗ್ರುಪ್ ಹುದ್ದೆಯ ಹೊರಗುತ್ತಿಗೆ ನೌಕರ ಪಟ್ಟಣ ಪಂಚಾಯತಿಯ ಎಲ್ಲಾ ಅಧಿಕಾರಿಗಳ ಮೇಲೆ ಉಸ್ತುವಾರಿ ಮಾಡುವ ಆದೇಶವನ್ನು ಮಾಡುವದರ ಜೊತೆ ರಾಯಬಾಗದ ಪಟ್ಟಣ ಪಂಚಾಯತಿಯು ಸರಕಾರದ ಸುತ್ತೋಲೆಯನ್ನು ಗಾಳಿಗೆ ತೂರಿದಂತಾಗಿದೆ.
ಹೋಗಲಿ ಆ ಪುಣ್ಯಾತ್ಮ ಯಾರು ಅಂತಿರಾ ? ಅವನೇ ಪವನಕುಮಾರ @ ಪೀರಸಾಬ್ ಲಬಾಗೆ. ಇತ ಚಿಕ್ಕೋಡಿ ಸೆಕ್ಯೂರಿಟೀಸ್ ಸಂಸ್ಥೆಯ ಹೊರ ಗುತ್ತಿಗೆ ನೌಕರ. ಇವನು ಆ ಸಂಸ್ಥೆಯ ಮೂಲಕ ರಾಯಬಾಗ ಪಟ್ಟಣ ಪಂಚಾಯತಿಯಲ್ಲಿ ನೌಕರಿಗೆ ಎಂಟ್ರಿ ಕೊಟ್ಟಿದ್ದಾನೆ. ಆದರೆ ಹುದ್ದೆ ಮಾತ್ರ ಡಿ ಗ್ರುಪ್. ಆದರೆ ಮಾಡೋದು ಪಟ್ಟಣ ಪಂಚಾಯತಿಯ ಅಧಿಕಾರಿಗಳ ಮೇಲೆ ಉಸ್ತುವಾರಿಯ ಆದೇಶ ಗಿಟ್ಟಿಸಿಕೊಂಡಿದ್ದಾನೆ. ಕಾರಣ ಇಷ್ಟೇ ಜಿಲ್ಲೆಯ ಮೂರ್ನಾಲ್ಕು ಪಟ್ಟಣ ಪಂಚಾಯತಿಗಳ ಬಲಾಡ್ಯ ಖ್ಯಾತಿಯ ಕಿರಿಯ ಅಭಿಯಂತರ ಅಂದರೆ ದಿನಗೂಲಿ @ ಸಮಾನ ಕೆಲಸಕ್ಕೆ ಸಮಾನ ವೇತನದ ಅಭಿಯಂತರ ಸಿದ್ರಾಮ್ ಚೌಗಲಾ ಇವರ ಅಳಿಯ ಅಂತೆ.
ಈ ಹೊರಗುತ್ತಿಗೆ ನೌಕರ ಇರಬೇಕಾದದ್ದು ಪಂಚಾಯತಿಯಲ್ಲಿ ಲೋಡರ್ ಕೆಲಸಕ್ಕೆ ಅಂದ್ರೆ ಲೋಡ್ ಮಾಡಿದ ಕಸವನ್ನು ಸಾಗಿಸೋದು. ಆದರೆ ಇತನ ಕೆಲಸ ಮಾತ್ರ ಬೇರೆಯೇ ಇದೆ. ಅದು ಪಂಚಾಯತಿ ಕಾರ್ಯಾಲಯದಲ್ಲಿ ಆನ್ ಲೈನ್ ಟ್ಯಾಕ್ಸ್ ತುಂಬಿಸೋದು ಹಾಗು ಆನ್ ಲೈನ್ ಪಹಣಿ ಪತ್ರ ತಗೆದುಕೊಡುವದು. ಇನ್ನೊಂದು ವಿಶೇಷ ಅಂದ್ರೆ ಇತ ಕುಳಿತುಕೊಳ್ಳುವ ಸ್ಥಳದಲ್ಲಿ ಕ್ಯಾಮರಾನೇ ತಿರುಗಿಸಲಾಗಿದೆ. ಮತ್ತು ಇತನ ಸ್ಥಳಕ್ಕೆ ಯಾರಾದರೂ ಬಂದ್ರೆ ಕ್ಯಾಮರಾ ನೇರವಾಗಿ ಇಡ್ತಾರೆ ಅವರ ಹೋದ ಮೇಲೆ ಮತ್ತೇ ತಿರಿಸ್ತಾರಂತೆ. ಇದು ಏಕೆ ಹೀಗೆ ? ಇದರ ಗುಟ್ಟೇನು ಎಂಬುದು ಮುಖ್ಯಾಧಿಕಾರಿಗಳೇ ಹೇಳಬೇಕು. ಅಷ್ಟೇ ಅಲ್ಲಾ ಇತನ ಹವಾ ಎಷ್ಟಿದೆ ಅಂದರೆ ಮೊನ್ನೆ ಮೊನ್ನೆ ನಡೆದ ಮಿಟೀಂಗಗೆ ಬೆಂಗಳೂರಿಗೂ ಮುಖ್ಯಾಧಿಕಾರಗಳ ಜೊತೆ ಅನಫಿಸಿಯಲ್ ಮೀಟಿಂಗ್ ಪ್ರವಾಸ ಕೂಡಾ ಮಾಡಿದ್ದಾರೆ ಎಂದು ಪಂಚಾಯತಿಯ ಸಿಬ್ಬಂಧಿಗಳು ಮಾತನಾಡಿತ್ತಿದ್ದಾರೆ. ಅಷ್ಟೇ ಅಲ್ಲಾ ಇನ್ನೊಂದು ಇದೆ ಅದು ಏನೆಂದ್ರೆ ಬೆಳಗಾವಿಯ ಮೀಟಿಂಗಗಳಿಗೂ ಇತನೇ ಹೊಗೋದು. ಇತ ಒಬ್ಬ ಲೋಡರ್ ಅಥವಾ ಕಾರ್ಮಿಕ ಅಂತಾ ಗೊತ್ತಿದ್ದರೂ ಜಿಲ್ಲಾ ಮಟ್ಟದ ಮೀಟಿಂಗಗಳಿಗೆ ಇತನೇ ಹೋಗೋದು & ಡಿಸಿ ಸಾಹೇಬರ ಮುಂದೆಯೂ ಕೂಡಾ ಕೈಯಲ್ಲಿ ಪೈಲ ಜೊತೆ ಹಾಜರಿ ಕೂಡಾ ಕೊಡುತ್ತಾನೆ.
ಇಷ್ಟೇಲ್ಲಾ ಅವಾಂತರಗಳಿದ್ದರೂ ಬೆಳಗಾವಿ ಜಿಲ್ಲಾಡಳಿತ ಮಾತ್ರ ಇವರನ್ನು ಕಿತ್ತೊಗೆಯಲ್ಲಾ ಕಾರಣ ಬೇರೆ ಬೇರೆ ಇದೆ ಅನ್ನುತ್ತಾರೆ ಸಾಮಾಜಿಕಾ ಹೊರಾಟಗಾರ ಸುರೇಂದ್ರ ಉಗಾರೆ. ಅಷ್ಟೇ ಅಲ್ಲಾ ಜಿಲ್ಲಾಡಳಿತ ಸಾಮಾನ್ಯ ನೌಕರನನ್ನು ಈಜಿಯಾಗಿ ಇಲ್ಲಿಂದ ಟ್ರಾನಸ್ಪರ್ ಮಾಡಬಹುದು. ಆದರೆ ಆತನ(ಕಾರ್ಮಿಕನ)ನ್ನು ಹೊರಗುತ್ತಿಗೆ ಸೇವೆಯಿಂದ ವಜಾ ಮಾಡಲು ಆಗಲ್ಲಾ: ಅದು ಅಸಾಧ್ಯವಾದ ಮಾತು ಅನ್ನುತ್ತಾರೆ.
ಇ ಸುದ್ಧಿ ಓದಿದ ಮೇಲಾದರೂ ಬೆಳಗಾವಿ ಜಿಲ್ಲಾಡಳಿತ ಪವನಕುಮಾರ@ ಪೀರಸಾಭ್ ಲಬಾಗೆ ಇತನನ್ನು ಪಟ್ಟಣ ಪಂಚಾಯತಿಯ ಕಾರ್ಯಾಲಯದಿಂದ ಮುಕ್ತಿ ನೀಡಿ ಲೋಡರ್ ಕೆಲಸಕ್ಕೆ ಕಳಿಸ್ತಾರಾ ಅಥವಾ ಆದೇಶಗಳನ್ನು ಉಲ್ಲಂಘನೆ ಮಾಡಿ ಕಾರ್ಯಾಲಯಲ್ಲಿ ಕೆಲಸಕ್ಕೆ ಇಟ್ಟುಕೊಂಡ ಮುಖ್ಯಾಧಿಕಾರಿಗಳ ಮೇಲೆ ಕ್ರಮ ತಗೋತಾರಾ ಅನ್ನೊದು ಕಾದು ನೋಡಬೇಕು.