ಕೋಲಾರಸುವರ್ಣ ಗಿರಿ ಟೈಮ್ಸ್
ತೊಟ್ಲಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷನಿಗೆ ಬಿಯರ್ ಅಭಿಷೇಕ.
ಕೋಲಾರ: ನೂತನ ಅಧ್ಯಕ್ಷರನ್ನು ಭುಜದ ಮೇಲೆ ಎತ್ತಿಕೊಂಡು ಮೆರವಣಿಗೆ ಮಾಡಿದ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಬಿಯರ್ ಬಾಟಲ್ ಶೇಕ್ ಮಾಡಿ ಬಳಿಕ ಅಧ್ಯಕ್ಷರ ತಲೆ ಮೇಲೆ ಸುರಿದು ಸಂಭ್ರಮಿಸಿದ್ದಾರೆ.
ತೊಟ್ಲಿ ಗ್ರಾಮ ಪಂಚಾಯಿತಿ ಜೆಡಿಎಸ್ ತೆಕ್ಕೆಗೆ ಬಿದ್ದಿದ್ದು, ಅಧ್ಯಕ್ಷರಾಗಿ ಮಂಜುನಾಥ್, ಉಪಾಧ್ಯಕ್ಷರಾಗಿ ಅನಿತಾ ಆಯ್ಕೆಯಾಗಿದ್ದಾರೆ. 7 ವರ್ಷದ ಬಳಿಕ ತೊಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೆಲುವು ಪಡೆದ ಹಿನ್ನಲೆ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.
ಅಧ್ಯಕ್ಷ ಮಂಜುನಾಥ್ ರನ್ನು ಭುಜದ ಮೇಲೆ ಎತ್ತಿಕೊಂಡು ಮೆರವಣಿಗೆ ಮಾಡಿದ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಎರಡು ಬಿಯರ್ ಬಾಟಲ್ ಶೇಕ್ ಮಾಡಿ ಚಿಯರ್ ಮಾಡಿದ್ದು, ಬಳಿಕ ಅಧ್ಯಕ್ಷರ ತಲೆ ಮೇಲೆ ಸುರಿದು ಸಂಭ್ರಮಿಸಿದ್ದಾರೆ.