ಮಕ್ಕಳ ಭವಿಷ್ಯಕ್ಕೆ ಕೈ ಹಿಡಿದ ಉದ್ಯೋಗ ಖಾತ್ರಿ ಯೋಜನೆ.
ತುಮಕೂರು: ತುರುವೇಕೆರೆ ಎಂಬ ಹೆಸರೆ ಸೂಚಿಸುವಂತೆ ಕೆರೆಗಳ ಬಿಡು ಕೃಷಿಗೆ ಹೇಳಿ ಮಾಡಿಸಿದ ಫಲವತ್ತಾದ ಮಣ್ಣು ಯಾವುದೇ ಬೆಳೆ ಇಟ್ಟರು ತುಂಬಾ ಸೊಗಸಾಗಿ ಬೆಳೆಯುವ ಈ ಮಣ್ಣಿನಲ್ಲಿ ಎತ್ತ ನೋಡಿದರೂ ಅಡಕೆ ತೆಂಗಿನದೇ ಫಸಲು ಉಪಕಸುಬಾಗಿ ಇಲ್ಲಿನ ರೈತರು ಹಸು ಸಾಕಾಣಿಕೆ, ಕೋಳಿ ಸಾಕಾಣಿಕೆ ಮುಖಾಂತರ ತಮ್ಮ ದಿನನಿತ್ಯದ ಖರ್ಚುವೆಚ್ಚಗಳಿಗೆ ಕುಟುಂಬದ ನಿರ್ವಹಣೆಗೆ ಹಣವನ್ನು ಹೊಂದಿಸುತ್ತಾರೆ. ಜೊತೆಗೆ ರೈತರಿಗೆ ಸರ್ಕಾರದಿಂದ ನೀಡುವ ಯೋಜನೆಗಳು ಸಹ ಹೆಚ್ಚು ಉಪಕಾರಿಯಾಗಿವೇ ಇದರಲ್ಲಿ ಪ್ರಸ್ತುತ ದಿನದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸಿಗುವಂತಹ ಸೌಲಭ್ಯಗಳು ರೈತರನ್ನು ಆರ್ಥಿಕವಾಗಿ ಸದೃಡವಾಗಲು ತುಂಬಾ ಸಹಾಯಕವಾಗಿವೆ. ಇದರ ನಡುವೆ ನರೇಗಾ ಯೋಜನೆಯಿಂದ ಅನುಕೂಲ ಪಡೆದ ಕಣಕೂರು ಗ್ರಾಮದ ರೈತ ತಿಮ್ಮೇಗೌಡ ತಮ್ಮ ಪಾಲಿಗೆ ಬಂದ 2 ಎಕರೆ ಜಮೀನಿನಲ್ಲಿ ತೆಂಗು ಅಡಿಕೆ ಬೆಳೆಸಿದ್ದಾರೆ. ಇದರಿಂದ ವಾರ್ಷಿಕವಾಗಿ 2 ರಿಂದ 3 ಲಕ್ಷ ಆದಾಯಗಳಿಸುತ್ತಿದ್ದಾರೆ. ಆದರೆ ಕುಟುಂಬದ ನಿರ್ವಹಣೆ, ದಿನನಿತ್ಯದ ಖರ್ಚು ವೆಚ್ಚಗಳು ಹಾಗೂ ಮಕ್ಕಳ ಶಿಕ್ಷಣಕ್ಕೆ ಹಣ ಹೊಂದಿಸು ವುದೇ ದೊಡ್ಡ ಸವಾಲ್‍ಆಗಿ ಪರಿಣಮಿಸಿತ್ತು, ಬೇರೆ ಕಡೆ ಹೋಗಿ ದುಡಿಯುವು ದಕ್ಕಿಂತಲೂ ತಮ್ಮ ಜಮೀನಿ ನಲ್ಲಿಯೇ ಏನಾದರೂ ಸಾಧನೆ ಮಾಡುವ ಯೋಚನೆ ಯಲ್ಲಿದ್ದರು.
ಕಳೆದ 5 ವರ್ಷಗಳ ಹಿಂದೆ ಸಾಕುತ್ತಿದ್ದ ಸ್ಥಳೀಯ ಆಡುಗಳಿಗೆ ಸೂಕ್ತವಾದ ಶೆಡ್ ಇಲ್ಲದೆ ತುಂಬಾ ಕಷ್ಟಪಡಬೇಕಿತ್ತು. ಶೆಡ್ ನಿರ್ಮಾಣಕ್ಕೂ ಮೊದಲು 4 ಕಂಬ ಹಾಕಿ ಚಪ್ಪರ ನಿರ್ಮಿಸಿ ಅದರ ಬುಡದಲ್ಲಿ ಆಡುಗಳನ್ನು ಕಟ್ಟಲಾಗುತ್ತಿತ್ತು. ಆದರೆ ಈ ಚಪ್ಪರದಲ್ಲಿ ಆಡುಗಳು ಸರಿಯಾಗಿ ನಿದ್ದೆ ಮಾಡುತ್ತಿರಲಿಲ್ಲ. ಆಡುಗಳು ಸದಾ ಅಟ್ಟಳಿಗೆಯ ಮೇಲೆ ಮಲಗಲು ಇಚ್ಛೆ ಪಡುವ ಪ್ರಾಣಿಗಳಾಗಿರೋದ್ರಿಂದ, ಚಪ್ಪರದಡಿಯಲ್ಲಿ ಮಲಗಲು ಒಗ್ಗಿಕೊಳ್ಳದೆ ರಾತ್ರಿ ಪೂರಾ ಅರಚಾಡುತ್ತಿದ್ದವು. ಇದರಿಂದ ರಾತ್ರಿ ಹೊತ್ತು ಮನೆಯವರ ನಿದ್ದೆಗೂ ಕತ್ತರಿ ಬೀಳುವ ಪರಿಸ್ಥಿತಿ ಎದುರಾಗುತ್ತಿತ್ತು.
ಹಾಗಾಗಿ ತಿಮ್ಮೆಗೌಡರ ಕುಟುಂಬ ಶೆಡ್ ಮಾಡಬೇಕೆಂದು ಯೋಚಿಸಿದಾಗ ಅವರ ಕೈ ಹಿಡಿದದ್ದು ಉದ್ಯೋಗ ಖಾತರಿ ಯೋಜನೆ. ನರೇಗಾ ಯೋಜನೆ ಮೂಲಕ ಕೂಲಿ ಮತ್ತು ಸಾಮಾಗ್ರಿ ಮೊತ್ತ ಪಡೆದು ಇದೀಗ ಆಡು ಶೆಡ್ ನಿರ್ಮಾಣ ಮಾಡಿಕೊಂಡಿರು ವುದರಿಂದ ಆಡುಗಳನ್ನು ನೋಡಿ ಕೊಳ್ಳಲು, ಆಹಾರ, ನೀರು ಒದಗಿಸಲು ಇದೀಗ ಕಷ್ಟಪಡುವಂತಿಲ್ಲ. ಆಡುಗಳ ಆರೈಕೆಯಲ್ಲಿ ಶುಚಿತ್ವ ಕಾಪಾಡುವಂತಾಗಿದೆ. ಅದರಿಂದಾಗಿ ಆಡುಗಳ ಬೆಳವಣಿಗೆ ಯಲ್ಲಿ ಕೂಡ ಉತ್ತಮ ಫಲಶೃತಿ ಕಂಡಿರುವುದು ತಿಮ್ಮೇಗೌಡ ಕುಟುಂಬಕ್ಕೆ ಖುಷಿಯ ವಿಚಾರವಾಗಿದೆ.
ಅಳವಡಿಸಿದ ಪ್ರಕ್ರಿಯೆ:-
ತಿಮ್ಮೇಗೌಡ ರವರ ಕುಟುಂಬ 5 ವರ್ಷದಿಂದ ಆಡು ಸಾಕುತ್ತಿದ್ದು, ಆಡುಗಳಿಗೆ ಸುರಕ್ಷಿತವಾದ ಶೆಡ್ ಇಲ್ಲದ ಕಾರಣ ಆಡುಗಳ ಆರೈಕೆಯಲ್ಲಿ ಅಡೆ-ತಡೆಗಳು ಸೃಷ್ಟಿಯಾಗುತ್ತಿದ್ದವು. ಶೆಡ್ ನಿರ್ಮಿಸಲು ಹಣದ ಕೊರತೆ ಇದ್ದರಿಂದ ಶೆಡ್ ನಿರ್ಮಾಣ ವಿಳಂಬವಾಗುತ್ತಿತ್ತು. ಆ ಸಂದರ್ಭದಲ್ಲಿ ಚಿಂತಕ್ರಾಂತನಾಗಿದ್ದ ತಿಮ್ಮೇಗೌಡನಿಗೆ ಗ್ರಾಮ ಪಂಚಾಯತಿಯ ಕಾರ್ಯದರ್ಶಿಗಳು ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಮಾಹಿತಿ ತಿಳಿಸಿದಾಗ ಮರುದಿನವೇ ಗ್ರಾಮಪಂಚಾಯತಿಗೆ ತೆರಳಿ ಮೇಕೆ ಶೆಡ್ ಪಡೆಯಲು ಅರ್ಜಿ ಸಲ್ಲಿಸಿದರು.
ಆ ವರ್ಷವೇ ಗ್ರಾಮ ಸಭೆಯ ಅನುಮೋದನೆ ಪಡೆದು ಮೇಕೆ ಶೆಡ್ ನಿರ್ಮಿಸಲು ಪ್ರಾರಂಭಿಸಿದರು. 300sq. ಅಡಿ ಸುತ್ತಳತೆಯ ಆಡು ಶೆಡ್ ನಿರ್ಮಿಸಿದ್ದಾರೆ. ಆಡು ಶೆಡ್ ನಿರ್ಮಾಣಕ್ಕಾಗಿ ಒಟ್ಟು 60,000/- ಹಣ ಖರ್ಚಾಗಿದ್ದು, ನರೇಗಾದಡಿ ರೂ. 8989/- ಕೂಲಿ ಮತ್ತು ರೂ. 23,841.49/- ಸಾಮಾಗ್ರಿ ಮೊತ್ತ ಪಾವತಿಯಾಗಿದೆ. ಒಟ್ಟು 32,830.49/- ರೂ. ಅನುದಾನ ನರೇಗಾದಿಂದ ಸಿಕ್ಕಿದೆ. ಇನ್ನುಳಿದ ಹಣವನ್ನು ಹೊರಗೆ ಕೂಲಿ ಮಾಡಿ ಕೂಡಿಟ್ಟ ಹಣದ ಮೂಲಕ ಭರಿಸಿದ್ದಾರೆ. ಶೆಡ್‍ಗೆ ಮೇಲ್ಛಾವಣಿ ಕೂಲಿಂಗ್ ಶೀಟ್ ಹಾಕಲಾಗಿದೆ. 5 ಫೀಟ್‍ನಷ್ಟು ಎತ್ತರಕ್ಕೆ ಅಟ್ಟಳಿಗೆ ನಿರ್ಮಿಸಿ ಆಡುಗಳಿಗೆ ವ್ಯವಸ್ಥಿತವಾದ ಸೂರನ್ನು ಕಲ್ಪಿಸಲಾಗಿದೆ. ಈ ರೀತಿಯ ಸೂಕ್ತವಾದ ವ್ಯವಸ್ಥೆಯಿಂದ ಆಡುಗಳ ಲಾಲನೆ ಪಾಲನೆಗೆ ಸಹಕರಿಯಾಗಿದೆ.
ಎದುರಿಸಿದ ಸವಾಲುಗಳು:-
ಹೇಗೊ ಮಾಡಿ ಗ್ರಾಮ ಪಂಚಾಯತಿಯಿಂದ ಶೆಡ್ ನಿರ್ಮಿಸಲು ಅವಕಾಶ ದೊರೆಯಿತು, ಆದರೆ ಇದಕ್ಕೆ ತಗಲುವ ವೆಚ್ಚ ಭರಿಸುವುದು ಕಷ್ಟಕರವಾಗಿತ್ತು. ಏಕೆಂದರೆ ನರೇಗಾ ಯೋಜನೆಯಲ್ಲಿ ದುಡಿದ ಹಣವನ್ನು ಕುಟುಂಬದ ನಿರ್ವಹಣೆಗೆ ಖರ್ಚಾಗುತ್ತಿತ್ತು, ಇನ್ನು ಉಳಿಕೆ ಹಣ 20 ಸಾವಿರ ಮಾತ್ರ ಜೊತೆಗೆ ಹಿಂದಿನ ವರ್ಷ ಅಧಿಕ ಮಳೆ ಬಿದ್ದ ಪರಿಣಾಮ ತೆಂಗಿನ ಫಸಲು ಕಡಿಮೆ ಬಂದಿದ್ದರಿಂದ ಮಾರುಕಟ್ಟೆಯಲ್ಲಿ ಅಷ್ಪಾಗಿ ಹಣ ಬರಲಿಲ್ಲ. ಆಗ ಬ್ಯಾಂಕ್‍ನಿಂದ 1 ಲಕ್ಷ ಸಾಲ, ಸ್ನೇಹಿತರ ಬಳಿ ಸ್ವಲ್ಪ ಹಣ ಪಡೆದು ಶೆಡ್ ನಿರ್ಮಿಸಿಕೊಂಡಿದ್ದಾರೆ.
ಇದರಿಂದಾದ ಉಪಯೋಗ ಪ್ರಯೋಜನ:
ಮಹಾತ್ಮ ಗಾಂಧಿ ನರೇಗಾ ಯೋಜನೆಯಿಂದ ಮೇಕೆ ಶೆಡ್ ನಿರ್ಮಿಸಲು ಅಂದಾಜು ಮೊತ್ತ 68,000/- ರೂಗಳು, ಇದರಲ್ಲಿ ಕೂಲಿ ಹಣ 8989 ಹಾಗೂ ಸಾಮಾಗ್ರಿ ಹಣ 23841.49/- ರೂಗಳು ಕೈಸೇರಿದ್ದು, ಇದರಲ್ಲಿ ಒಟ್ಟು 31 ಮಾನವ ದಿನಗಳನ್ನು ಪೂರೈಸಿದ್ದಾರೆ. ನರೇಗಾ ಯೋಜನೆಯಲ್ಲಿ ಬಂದಂತಹ ಹಣದಿಂದ ಮಾರುಕಟ್ಟೆಯಲ್ಲಿ ಸುಮಾರು 20 ಕುರಿಮರಿಗಳನ್ನು ಖರೀದಿಸಿ ಶೆಡ್‍ನಲ್ಲಿ ಸಾಕುತ್ತಿದ್ದಾರೆ. ಮೇವಿಗೆ ಜಮೀನಿನಲ್ಲಿ ನೇಪಿಯರ್ ಹಾಗೂ ಮೆಕ್ಕೆಜೋಳ ಬೆಳೆಸಿದ್ದು, ಮತ್ತೊಂದು ಕಡೆ ಮೇವು ಖರೀದಿಸುವ ಪ್ರಮಯ ಬರುವುದಿಲ್ಲ ಸ್ವಂತ ಜಮೀನು ಇರುವುದರಿಂದ ಮೇವಿಗೆ ಕೊರತೆಯಾಗುವುದಿಲ್ಲ ಎನ್ನುತ್ತಾರೆ. ಒಂದು ಕುರಿ ಮಾರುಕಟ್ಟೆಗೆ ಬರಬೇಕಾದರೆ 7 ರಿಂದ 8 ತಿಂಗಳುಗಳ ಕಾಲ ಬೆಳೆಸಬೇಕಾಗುತ್ತದೆ, ಮರಿಗಳಿಗೆ ಬೆಳಿಗ್ಗೆ ಸಂಜೆ ಮೇವು ನೀಡಲಾಗುತ್ತದೆ ಮೇವಿನ ಜೊತೆ ಪುರಿಯನ್ನು ತಿಂಡಿಯಾಗಿ ಕೊಡಲಾಗುತ್ತದೆ.
ಶೆಡ್‍ನಲ್ಲಿ ಒಟ್ಟು 20 ಕುರಿಗಳಲ್ಲಿ 10 ಕುರಿಗಳನ್ನು ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮಾರಾಟವಾಗಿವೆ, ನಮಗೆ ಸ್ಥಳೀಯವಾಗಿ ನಡೆಯುವ ಜಾತ್ರೆ ಹಬ್ಬಗಳಿಗಿಂತಲೂ, ರಂಜಾನ್ ಮತ್ತು ಬಕ್ರೀದ್ ಹಬ್ಬಗಳಲ್ಲಿ ಅವರೇ ತಮ್ಮ ಶೆಡ್‍ಗೆ ಭೇಟಿ ನೀಡಿ ಖರೀದಿಸುತ್ತಾರೆ, ಇದರಿಂದ ನಮಗೆ ಮಾರುಕಟ್ಟೆಗೆ ಕೊಂಡೊಯ್ಯುವ ಚಿಂತೆಯೇ ಇರುವುದಿಲ್ಲ. ನಮಗೆ ಮೇವು ಕೂಲಿಹಣ ಎಲ್ಲಾ ಕಳೆದರೂ 3 ರಿಂದ 4 ಲಕ್ಷದವರೆಗೆ ಆದಾಯ ಬರುತ್ತದೆ ಇದರಿಂದ ನಮ್ಮ ಸ್ನೇಹಿತರ ಸಾಲ ತೀರಿಸಿದ್ದು, ಬ್ಯಾಂಕಿನ ಸಾಲವನ್ನು 2 ವರ್ಷಗಳಲ್ಲಿ ತೀರಿಸಿ ಲಾಭ ಗಳಿಸಬಹುದು ಎನ್ನತ್ತಾರೆ ರೈತ ತಿಮ್ಮೇಗೌಡ.