ಗದಗಸುವರ್ಣ ಗಿರಿ ಟೈಮ್ಸ್

ಗದಗ: ನಗರಸಭೆ ಕಂದಾಯ ಅಧಿಕಾರಿ ಅಮಾನತು.

ಗದಗ: ನಗರಸಭೆಯ ಕಂದಾಯ ಅಧಿಕಾರಿಯನ್ನು ಕರ್ತವ್ಯಲೋಪಕ್ಕಾಗಿ ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಗದಗದಲ್ಲಿ ವರದಿಯಾಗಿದೆ.

ಮಹೇಶ್ ಹಡಪದ ಅಮಾನತುಗೊಂಡಿರುವ ಕಂದಾಯ ಅಧಿಕಾರಿ. ಗದಗ ನಗರಸಭೆ ಕಂದಾಯ ಅಧಿಕಾರಿಯಾಗಿದ್ದ ಮಹೇಶ್ ಹಡಪದರನ್ನು ಕರ್ತವ್ಯಲೋಪ ಆರೋಪದಡಿ ಸಸ್ಪೆಂಡ್ ಮಾಡಲಾಗಿದೆ.

ನಿರಪೇಕ್ಷಣಾ ಪತ್ರ ಪಡೆಯದೇ ಫಾರಂ ನಂ.3 ವಿತರಿಸಿರುವ ಆರೋಪ ಮಹೇಶ್ ವಿರುದ್ಧ ಕೇಳಿಬಂದಿತ್ತು. ನಿಯಮ ಬಾಹಿರವಾಗಿ 1063 ನಿವೇಶನಗಳಿಗೆ ಫಾರಂ ನಂ.3 ವಿತರಣೆ ಮಾಡಿದ್ದರು. ಸಾರ್ವಜನಿಕ ದೂರಿನ ಮೇರೆಗೆ ತನಿಖೆ ಮಾಡಿದ್ದ ಅಪರ ಜಿಲ್ಲಾಧಿಕಾರಿ ಎಡಿಸಿ ಅನ್ನಪೂರ್ಣ ಮುದಕಮ್ಮನವರ್ ವರದಿ ಆಧರಿಸಿ ಮಹೇಶ್ ಹಡಪದ ಅಮಾನತುಗೊಳಿಸಿ ಡಿಸಿ ಎಂ.ಎನ್.ವೈಶಾಲಿ ಆದೆಶ ಹೊರಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button