ಕೆಡಿಪಿ ಸಭೆಯಲ್ಲಿ ಮತ್ತೇ ಸದ್ದು ಮಾಡಿದ ರಾಯಬಾಗದ ಮೀನುಗಾರಿಕೆ ಇಲಾಖೆಯ ಜಮೀನು.
ಬೆಳಗಾವಿ: ರಾಯಬಾಗದ ಮೀನುಗಾರಿಕೆ ಇಲಾಖೆಯ ಜಮೀನಿಗೆ ಸಂಬಂಧಿಸಿದಂತೆ ಮತ್ತೇ ಕೆಡಿಪಿ ಸಭೆಯಲ್ಲಿ ಸದ್ದು ಮಾಡಿದೆ.
ಸಭೆಯಲ್ಲಿ ಕಳೆದ ಸಭೆಯಲ್ಲಿ ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿವರು ಎನು ಕ್ರಮ ತಗೆದುಕೊಂಡಿದ್ದಿರಿ ಎಂಬ ಪ್ರಶ್ನೆಗೆ ಯೋಜನಾ ನಿರ್ದೇಶಕರು ಕಲಾದಗಿ ಇವರು ಇದಕ್ಕೆ ಸಂಬಂದಿಸಿದಂತೆ ಮೂರು ಜನರನ್ನು ಅಮಾನತ್ತು ಮಾಡಲಾಗಿದೆ ಎಂದು ಹೇಳಿದರು. ಅದರ ಜೊತೆಗೆ ಜಿಲ್ಲಾಧಿಕಾರಿಗಳು ಮೀನುಗಾರಿಕೆ ಜಮೀನದಲ್ಲಿ ಅತಿಕ್ರಮಣ ತೆರಿವುಗೊಳಿಸಿ ತಂತಿಯನ್ನು ಹಾಕಲಾಗಿದೆ ಎಂದು ಹೇಳಿದರು. ಉಸ್ತುವಾರಿ ಸಚಿವರು ಜಮೀನವನ್ನು ಯಾವುದಕ್ಕೆ ಕೊಡಬೇಕು ಎಂದು ರಾಯಬಾಗದ ಶಾಸಕ ಐಹೋಳೆಯರನ್ನು ಕೇಳಿದಾಗ ಅವರು ಆ ಜಮೀನು ಮೀನುಗಾರಿಕೆ ಇಲಾಖೆಗೆ ಇರಲಿ ಎಂದು ಹೇಳಿದರು.
ಹಿನ್ನಲೆ: ರಾಯಬಾಗದ ಮೀನುಗಾರಿಕೆ ಜಮೀನಿಗೆ ಸಂಬಂಧಿದ ಅಕ್ರಮಕ್ಕಾಗಿ ಅದಿವೇಶನದಲ್ಲಿಯೂ ಚರ್ಚೆ ಆಗಿತ್ತು ನಂತರ ರಾಯಬಾಗದ ವಕೀಲ ಮತ್ತು ಸಾಮಾಜಿಕ ಹೊರಾಟಗಾರ ಸುರೇಂದ್ರ ಉಗಾರೆಯವರು ಅಕ್ರಮಖೋರರ ಮೇಲೆ ಕ್ರಮ ತಗೆದುಕೊಳ್ಳಲು ಪೌರಾಡಳಿತ ನಿರ್ದೇಶನಾಲಯಕ್ಕೆ ದಾಖಲಾತಿ ಸಮೇತ ಮನವಿ ಮಾಡಿದ್ದರ ಮೇಲೆ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಮೂರು ಜನರ ಮೇಲೆ ಕ್ರಮ ತಗೆದುಕೊಳ್ಳಲು ನಿರ್ದೇಶನಾಲಯಕ್ಕೆ ಬರಿದ್ದರು ಆ ಪ್ರಕಾರ ಮುಖ್ಯಾಧಿಕಾರಿ ಸಂಜೂ ಮಾಂಗ ಹಾಗೂ ಇತರ ಇಬ್ಬರನ್ನು ಅಮಾನತ್ತು ಮಾಡಲಾಗಿತ್ತು.