ಮೋದಿ ಉದ್ಘಾಟಿಸಿದ್ದ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದ ಮೇಲ್ಚಾವಣಿ ಕುಸಿತ.
ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್‌ನ ಪೋರ್ಟ್ ಬ್ಲೇರ್‌ನಲ್ಲಿ 5 ದಿನದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ ವಿಮಾನ ನಿಲ್ದಾಣದ ಮೇಲ್ಛಾವಣಿ ಕಿತ್ತು ಬಂದಿದೆ. 710 ಕೋಟಿ ರೂ ವೆಚ್ಚದಲ್ಲಿ ಇಂತಹ ಕಳಪೆ ಕಾಮಗಾರಿಯೇ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿವೆ.
ಒಂದು ಜೋರಾದ ಗಾಳಿ ಬೀಸಿದ್ದಕ್ಕೆ ವೀರ್ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಲವು ಕಡೆಗಳಲ್ಲಿ ಟರ್ಮಿನಲ್ ಮೇಲ್ಛಾವಣಿ ಕಿತ್ತು ಹೋಗಿದೆ ಎಂದು ಹಲವಾರು ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕಾಂಗ್ರೆಸ್ ಮಾಧ್ಯಮ ಸಂಚಾಲಕ ಜೈರಾಮ್ ರಮೇಶ್ ಟ್ವೀಟ್ ಮಾಡಿ ಪ್ರಚಾರಕ್ಕೆ ಅಪೂರ್ಣ, ಕಳಪೆ ಕಾಮಗರಿಗಳನ್ನು ಬೇಕಾದರೂ ಮೋದಿ ಉದ್ಘಾಟನೆ ಮಾಡುತ್ತಾರೆ ಎಂದು ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈ ದಿನಗಳಲ್ಲಿ ಯಾವುದನ್ನು ಬೇಕಾದರೂ ಉದ್ಘಾಟನೆ ಮಾಡುತ್ತಾರೆ. ಅದು ಅಪೂರ್ಣವಾಗಿರಲಿ ಅಥವಾ ಕಳಪೆಯಾಗಿರಲಿ. ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಸೇತುವೆಗಳು, ರೈಲುಗಳು, ಇತ್ಯಾದಿ ಕಾಮಗಾರಿ ಯಾವುದಾದರೂ ಸರಿ. ಅವರ ಸಂಪುಟದ ಮಂತ್ರಿಗಳು ಸಹ ಮೋದಿ ಎದುರು ತಮ್ಮ ವಯಕ್ತಿಕ ಸೆನ್ಸೆಕ್ಸ್ ಹೆಚ್ಚಿಸಿಕೊಳ್ಳಲು ಉತ್ಸುಕತೆ ತೋರುತ್ತಾರೆ. ಇಂತಹ ಕಾಮಗಾರಿಗಳಿಗೆ ಭಾರತದ ತೆರಿಗೆದಾರರು ಮತ್ತು ಜನ ಸಾಮಾನ್ಯರು ಬೆಲೆ ತೆರುತ್ತಿದ್ದಾರೆ. ಇಂತಹ ವಿಷಾದಕರ ನ್ಯೂ ಇಂಡಿಯಾದ ಆಡಳಿತದಲ್ಲಿ ನಾವಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ನಾಗರೀಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಉದ್ದೇಶ ಪೂರ್ವಕವಾಗಿ ಮೇಲ್ಚಾವಣಿ ಫಲಕಗಳನ್ನು ಸಡಿಲಗೊಳಿಸಲಾಗಿತ್ತು. ಆದರೆ ಭಾರೀ ಗಾಳಿ ಸುಮಾರು 100 ಕಿ.ಮೀ/ಗಂಟೆ ನಂಮೇಲ್ಫಾಚಾವಣಿಯನ್ನು ಮರುಸ್ಥಾಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದು, ವಿವರಣೆ ಪಡೆದುಕೊಳ್ಳುವ ಬದಲು ತಮ್ಮದೇ ನಿರ್ಧಾರಕ್ಕೆ ಬಂದು ಟೀಕಿಸಲು ಮುಂದಾಗಬೇಡಿ ಎಂದಿದ್ದಾರೆ.
ಕಳೆದ ವಾರದ ಉದ್ಘಾಟನೆದಲ್ಲಿ ವಿಮಾನ ನಿಲ್ದಾಣದ ಉದ್ಘಾಟನೆಯಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವ, ಜನರಲ್ (ನಿವೃತ್ತ) ವಿಕೆ ಸಿಂಗ್ ಮತ್ತು ಹಲವಾರು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.