suvarna giri timesಬೆಂಗಳೂರು
ಐಎಎಸ್ ಅಧಿಕಾರಿ, ಆಕಾಶ್ ಶಂಕರ್ ವಿರುದ್ಧ ಪತ್ನಿ ದೂರು

ಬೆಂಗಳೂರು: ಐಎಎಸ್ ಅಧಿಕಾರಿ ಆಕಾಶ್ ಶಂಕರ್ ಹಾಗೂ ಅವರ ಕುಟುಂಬ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಮತ್ತು ತನ್ನ ಕುಟುಂಬದವರ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟಗಳನ್ನು ಹಾಕಿ ಅಪಪ್ರಚಾರ ಮಾಡುವ ಮೂಲಕ ತಮ್ಮ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆಕಾಶ್ ಶಂಕರ್ ಅವರ ಪತ್ನಿ ಡಾ. ವಂದನಾ ಕೋರ್ಟ್‌ಗೆ ಖಾಸಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಸೂಚನೆ ಮೇರೆಗೆ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿ ಆಕಾಶ್ ಶಂಕರ್(33), ಸಹೋದರ ವಿಕಾಸ್ ಶಂಕರ್, ಚೇತನಾ ವಿಕಾಸ್, ಎಸ್.ಕೆ.ಚೇತನ್ ಮತ್ತು ಐಸಿರಿ ಶಿವಕುಮಾರ್ ಎಂಬುವರ ವಿರುದ್ಧ ಡಾ.ವಂದನಾ
ಪ್ರಕರಣ ದಾಖಲಿಸಿದ್ದಾರೆ.