ವಿರೋಧ ಪಕ್ಷ ನಾಯಕ ಯಾರು? ಗೊಂದಲದಲ್ಲಿ ರಾಜ್ಯ ಬಿಜೆಪಿ !?

ಬೆಂಗಳೂರು: ವಿಧಾನಸಭೆಯ ಮೊದಲ ಜಂಟಿ ಅಧಿವೇಶನ ಜುಲೈ 3 ರಿಂದ 14 ರವರೆಗೆ ಆರಂಭವಾಗಲ್ಲಿದೆ. ಅದಕ್ಕೆ ಇನ್ನು ಒಂದೇ ದಿನ ಬಾಕಿ ಇದೆ ಅದರೆ ಬಿಜೆಪಿ ಇನ್ನು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲಾ. ಆ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲಕ್ಕೆ ಒಳಗಾಗಿದೆ.
ಶಾಸಕಾಂಗ ಪಕ್ಷದ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಯಾರಾಗಬೇಕು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಬಂದಿಲ್ಲ. ಸೋಮವಾರ ಬೆಳಿಗ್ಗೆ ಕಲಾಪ ಆರಂಭವಾಗುವುದಕ್ಕೆ ಮುನ್ನ, ವಿರುದ್ಧ ಪಕ್ಷ ನಾಯಕನ ಆಯ್ಕೆಗೆ ದೇಹಲಿ ವರಿಷ್ಠರು ಸೂಚನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಜೆಪಿ ಯಲ್ಲಿ ದಿಢೀರ್ ಬೆಳವಣಿಗೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ‍್ಪ ಮಧ್ಯಾಹ್ನ 2ಗಂಟೆಗೆ ಅವರು ದೆಹಲಿ ತಲುಪಿದ್ದಾರೆ. ಅವರ ಜತೆ ಸಮಾಲೋಚನೆ ನಡೆಸಿದ ಬಳಿಕ ವಿ.ಪ. ನಾಯಕನ ಆಯ್ಕೆಯ ಸೂತ್ರ ಹೊರ ಬೀಳಬಹುದು ಎನ್ನಲಾಗಿದೆ.
ಕಳೆದ ಚುನಾವಣೆಯಲ್ಲಿ ಸಾಮಾನ್ಯವಾಗಿ ಒಕ್ಕಲಿಗ ಮತಗಳಲ್ಲಿ ಸಿಂಹಪಾಲು ಪಡೆಯುವ ಬಿಜೆಪಿಗೆ ಕಾಂಗೆಸ್ಸು ಹೆಚ್ಚು ಮತಗಳನ್ನು ಪಡೆದಿದೆ ಅದರ ಪ್ರಕಾರ ಆ ಮತಗಳನ್ನು ಉಳಿಸಿಕೊಳ್ಳಬೇಕಾಗಿದೆ. ಹೀಗಾಗಿ ಒಕ್ಕಲಿಗ ನಾಯಕನ್ನು ರೂಪಿಸುವ ಆಲೋಚನೆ ಇದೆ. ಅದರೆ ಆರ್ ಅಶೋಕ್ & ಅಶ್ವತ್ ನಾರಾಯನ್ ಇವರು ಯಾರು ಉಗ್ರ ಹಿಂದುತ್ವದ ಮುಖಂಡರಲ್ಲಾ. ಹೀಗಾಗಿ ಇವರು ಯಾರೂ ಹಿಂದುತ್ವದ ಮತಗಳನ್ನು ಪಡೆಯಲು ಆಗಲ್ಲಾ.
ಇದೆಲ್ಲಾ ನೋಡುತ್ತಾ ಕೂತರೆ ಲಿಂಗಾಯತ ನಾಯಕ ಮತ್ತು ಮಾಜಿ ಸಿಎಮ್ ಬೊಮ್ಮಾಯಿ ಅವರು ಉತ್ತಮ ಆಡಳಿತಗಾರ ಮತ್ತು ಸಮತೋಲಿತ ಮುಖ್ಯಮಂತ್ರಿ ಎಂದು ಮೆಚ್ಚುಗೆ ಪಡೆದಿದ್ದಾರೆ. ಆದರೆ, ಕೆಲವು ಕಟ್ಟಾ ಹಿಂದುತ್ವ ನಾಯಕರು, ಬೊಮ್ಮಾಯಿ ಅವರು ಸಾಕಷ್ಟು ಬಲಿಷ್ಠ ನಾಯಕರಲ್ಲ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರಂತಹ ಅಬ್ಬರದ ಹಿಂದುತ್ವ ಸಿದ್ಧಾಂತ ಹೊಂದಿರುವ ನಾಯಕರು ಅವರಿಗೆ ಕೋಟ್ಟರೆ ಒಳ್ಳೆಯದು ಪಕ್ಷ ಇನ್ನು ಬಲಿಷ್ಟ ಆಗಲಿದೆ ಆನ್ನುತ್ತಾರೆ. ಹಾಗೊಮ್ಮೆ ಇಬ್ಬರಲ್ಲಿ ಒಬ್ಬರಿಗೆ ಕೊಟ್ರೆ ಒಕ್ಕಲಿಗರ ನಾಯಕರು ಮುನಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಆದರೆ ರಾಜಾಹುಲಿ ಖ್ಯಾತಿಯ ದೇಹಲಿ ಭೆಟ್ಟಿಯ ಹಿನ್ನಲೆ ನೋಡಿದರೆ ಯತ್ನಾಳರ ಹೆಸರು ಅಂತಿಮ ಆಗಬಹುದು. ಒಂದೊಮ್ಮೆ ಯತ್ನಾಳ ವಿ ಪ ನಾಯಕನಾದರೆ ರಾಜಾ ಹುಲಿ ಸಿಟ್ಟು ಆಗದಂತೆ ಮತ್ತು ಮಗನಿಗೆ ಕೇಂದ್ರ ಮಂತ್ರಿ ಪಟ್ಟ ಕೊಟ್ಟು ಸಮಧಾನ ಮಾಡುವ ಮಾತುಗಳು ಹೈ ಕಮಾಂಡ ಚಿಂತನೆ ಮಾಡುತ್ತಿದೆಯಂತೆ. ಒಂದೊಮ್ಮೆ ಹಾಗೆಯೇ ಯತ್ನಾಳ ವಿ ಪ ನಾಯಕ ಆದರೆ ಈಗಾಗಲೇ ಉ ಕ ದಲ್ಲಿ ಯತ್ನಾಳ ವಿರ್ರೂದ್ದ ಬಂಡೆದ್ದಿರುವ ನಾಯಕರ ನಡೆಯ ಏನಿರುತ್ತೆ ಅನ್ನೊದು ನಿಗೂಡವಾಗಿಯೇ ಉಳಿಯಲಿದೆ. ಒಕ್ಕಲಿಗರು ಕೂಡಾ ಮುನಿಸು ಕೊಳ್ಳಬಹುದು. ಹೀಗಾಗಿ ರಾಜ್ಯ ಕಮಲ ಪಡೆಯ ಆಕಾಂಕ್ಷಿಗಳು ದೆಹಲಿಯ ಕಡೆಗೆ ತಮ್ಮ ಕೀವಿಗಳನ್ನು ಜೋತು ಬಿಟ್ಟಿದ್ದಾರೆ.