ಲೋಕಸಭೆ ಚುನಾವಣೆಯವರೆಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ, ಆಮೇಲೆ ಕೈ ಕೊಡ್ತಾರೆ: ರಮೇಶ್ ಜಾರಕಿಹೊಳಿ
ಚಿಕ್ಕೋಡಿ (ಬೆಳಗಾವಿ): ಅಥಣಿ ಶಾಸಕ ಲಕ್ಷ್ಮಣ ಸವದಿ ಅಭಿವೃದ್ಧಿಗೋಸ್ಕರ ಕಾಂಗ್ರೆಸ್ ಪಕ್ಷ ಸೇರಿದ್ದು, ಕ್ಷೇತ್ರದ ಅಭಿವೃದ್ಧಿ ಮಾಡಲಿ ನಾವು ಅವರಿಗೆ ಸಹಾಕರ ಕೊಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಅಥಣಿ ಪಟ್ಟಣದಲ್ಲಿ ಬಿಜೆಪಿ ಮಹೇಶ್ ಕುಮಠಳಿ ಸೊಲಿನ ಬಗ್ಗೆ ಕಾರ್ಯಕರ್ತರೊಂದಿಗೆ ಪರಾಮರ್ಶೆ ಯ ಸಭೆಯನ್ನು ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಥಣಿ ಕಾಗವಾಡ ವಿಧಾನಸಭೆ ಸೋಲು ಜನರು ಕೊಟ್ಟ ತೀರ್ಪುನ್ನು ನಾವು ಸ್ವಾಗತ ಮಾಡುತ್ತೇವೆ.
ಬರುವ ತಾ.ಪಂ.ಹಾಗೂ ಜಿ.ಪಂ.ಚುನಾವಣೆಯಲ್ಲಿ ಪಕ್ಷ ಸಂಘಟನೆ ಬಲಗೊಳೊಸುವ ನಿಟ್ಟಿನಲ್ಲಿ ಅಥಣಿ ಪಟ್ಟಣದಲ್ಲಿ ಕಾರ್ಯಕರ್ತ ಸಭೆ ನಡಸಿದ್ದೇನೆ. ಮತ್ತೆ ಬಿಜೆಪಿ ಪಕ್ಷವನ್ನು ಬಲವರ್ಧನೆ ಮಾಡುತ್ತವೆ ಪ್ರತಿ ಗ್ರಾಮಕ್ಕೊ ಭೇಟಿ ನೀಡಿ ಪಕ್ಷ ಸಂಘಟನೆಯನ್ನು ಮಾಡುತ್ತೇವೆ ಎಂದು ತಿಳಿಸಿದರು.
ಗ್ಯಾರಂಟಿ ನಂಬಿ ಜನರು ಕಾಂಗ್ರೆಸ್ ಗೆ ಮತವನ್ನು ಹಾಕಿದ್ದಾರೆ. ಗ್ಯಾರಂಟಿ ಕಾಡ್ ಬಗ್ಗೆ ಪಕ್ಷದ ವರಿಷ್ಠರು ಮಾತನಾಡ ಭೇಡಿ ಎಂದು ಸೂಚನೆಯನ್ನು ನೀಡಿದ್ದಾರೆ.ನಾವು ಮಾತನಾಡುವುದಿಲ್ಲ.ಕಾಂಗ್ರೆಸ್ ನವರು ಭರವಸೆ ವಿಚಾರದಲ್ಲಿ ತಪ್ಪು ಮಾಡಲಿ, ನಾವು ಅವರಿಗೆ ಸರಿಯಾಗಿ ಉತ್ತರ ನೀಡುತ್ತೇವೆ.
ಕಾಂಗ್ರೆಸ್ ಪಕ್ಷದವರು ಪಕ್ಕಾ ಮೋಸ ಮಾಡುತ್ತಾರೆ. ಲೋಕಸಭೆ ಚುನಾವಣೆಯವರೆಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ,ಆಮೇಲೆ ಕೈ ಕೊಡುತ್ತಾರೆ ಎಂದು ಹೇಳಿದರು.