ಕೊಪ್ಪಳಸುವರ್ಣ ಗಿರಿ ಟೈಮ್ಸ್
ತುಂಗಭದ್ರಾ ನದಿಯಲ್ಲಿ ಕೊಚ್ಚಿಹೋದ ವೈದ್ಯೆಯ.

ಕೊಪ್ಪಳ: ತುಂಗಾಭದ್ರಾ ನದಿ ದಂಡೆಯಲ್ಲಿ ಆಟವಾಡುತ್ತಾ ನಾಪತ್ತೆಯಾಗಿರುವ ವೈದ್ಯೆಯ ಸ್ನೇಹಿತರೊಂದಿಗೆ ರಜೆ ಕಳೆಯಲು ಆಗಮಿಸಿದ್ದ ನಾಂಪಲ್ಲಿ ಪ್ರದೇಶದ ನಿವಾಸಿ ಅನನ್ಯಾ ತುಂಬಾಭದ್ರಾ ನದಿ ದಂಡೆಯಲ್ಲಿ ಎಂಜಾಯ್ ಮಾಡುತ್ತಿರುವಾಗ ದುರ್ಘಟನೆ ಸಂಭವಿಸಿದೆ..
ಹೈದರಾಬಾದ್‌ನ ವಿಕೆಸಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಅನನ್ಯ ತಮ್ಮ ಸ್ನೇಹಿತರಾದ ಅಶಿತಾ ಮತ್ತು ಸಾತ್ವಿಕ್ ಜೊತೆ ಅನನ್ಯ ಅವರು ಸಣಾಪುರ ಸಮೀಪ ಇರುವ ಖಾಸಗಿ ಗೆಸ್ಟ್ ಹೌಸ್ ಮಂಗಳವಾರ ಸಂಜೆ ಬಂದಿದ್ದರು. ಗೆಸ್ಟ್ ಹೌಸ್ ಹಿಂದೆ ಇರುವ ತುಂಗಭದ್ರಾ ನದಿಯಲ್ಲಿ ಈ ಮೂವರು ಈಜಲು ಹೋದಾಗ ದುರ್ಘಟನೆ ಸಂಭವಿಸಿದೆ.
ಸದ್ಯ ನದಿಯಲ್ಲಿನ ನೀರಿನ ಸೆಳೆತದಿಂದ ಕೊಚ್ಚಿ ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸ್ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ನಾಪತ್ತೆಯಾಗಿರುವ ಅನನ್ಯ ಅವರ ಶೋಧಕ್ಕೆ ಮುಂದಾಗಿದ್ದಾರೆ.